ಬೆಳಗಾವಿ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಕ್ಕಳ ಕಿಡ್ನ್ಯಾಪ್
ಬೆಳಗಾವಿ ಜಿಲ್ಲೆಯ ಅಥಣಿಯ ಸ್ವಾಮಿ ಫ್ಲಾಟ್ನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಖದೀಮರು ಕಿಡ್ನ್ಯಾಪ್ ಮಾಡಿರುವಂತಹ ಆತಂಕಕಾರಿ ಘಟನೆಯೊಂದು ನಡೆದಿದೆ. ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಕ್ಕಳನ್ನು ಅಪಹರಿಸಲಾಗಿದೆ. ಸದ್ಯ ಅಥಣಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿ, ಅಕ್ಟೋಬರ್ 24: ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು (Children) ಖದೀಮರು ಕಿಡ್ನ್ಯಾಪ್ ಮಾಡಿರುವಂತಹ ಘಟನೆ ಜಿಲ್ಲೆಯ ಅಥಣಿಯ ಸ್ವಾಮಿ ಫ್ಲಾಟ್ನಲ್ಲಿ ನಡೆದಿದೆ. ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ವಿಜಯ್ ದಂಪತಿಯ ಮಕ್ಕಳಾದ ಸ್ವಸ್ತಿ ದೇಸಾಯಿ, ವಿಯೋಮ್ ದೇಸಾಯಿ ಅನ್ನು ಅಪಹರಿಸಿದ್ದಾರೆ.
ಇಬ್ಬರು ಮಕ್ಕಳು ಎಲ್‌ಕೆಜಿ ಶಾಲೆಗೆ ಹೋಗಿ ಮನೆಗೆ ಬಂದಿದ್ದರು. ಮನೆಯಲ್ಲಿ ಅಜ್ಜಿ ಮಾತ್ರ ಇರೋದನ್ನ ಗಮನಿಸಿದ ಖದೀಮರು ಕೃತ್ಯವೆಸಗಿದ್ದಾರೆ. ಮಕ್ಕಳನ್ನು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಅಥಣಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಗಳನ್ನ ಟ್ಯೂಷನ್ಗೆ ಬಿಟ್ಟು ಮನೆಗೆ ಹೊರಟಿದ್ದ ಮಹಿಳೆ ಕಿಡ್ನ್ಯಾಪ್: ಹೆಣವಾಗಿ ಪತ್ತೆ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ ಇದೇ ಗ್ರಾಮದ ಅಂಬಮ್ಮ ಅನ್ನೋ 37 ವರ್ಷದ ಮಹಿಳೆ ಇತ್ತೀಚೆಗೆ ಕಿಡ್ನ್ಯಾಪ್ ಆಗಿದ್ದರು. ಇದಾದ ಸ್ವಲ್ಪ ಹೊತ್ತಲ್ಲೇ ಕುಟುಂಬಸ್ಥರು ತಾಯಿ ಅಂಬಮ್ಮಳಿಗಾಗಿ ಹುಡುಕಾಟ ನಡೆಸಿದ್ದರು. ಸಂಬಂಧಿಕರು, ಅಕ್ಕಪಕ್ಕದವರ ಮನೆಗಳಲ್ಲಿ ನೋಡಿದರು ಅಂಬಮ್ಮ ಪತ್ತೆ ಆಗಿರಲಿಲ್ಲ. ನಂತರ ಅಂಬಮ್ಮನ ಮಕ್ಕಳು ಸೀದಾ 112 ಗೆ ಕರೆ ಮಾಡಿ ಈ ಮಾಹಿತಿ ಕೊಟ್ಟಿದ್ದರು.
ಇದನ್ನೂ ಓದಿ: ವಿಜಯನಗರ: ಕೆಎಸ್ಆರ್ಟಿಸಿ ಬಸ್ ಪಲ್ಟಿ: ಮಹಿಳೆ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ಮಾರನೇ ದಿನ ಮುದಗಲ್ ಪೊಲೀಸ್ ಠಾಣೆಯಲ್ಲಿ ಅಂಬಮ್ಮ ಕಿಡ್ನ್ಯಾಪ್ ಆಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಮುದಗಲ್ ಪೊಲೀಸರು ಅಂಬಮ್ಮಳ ಬಗ್ಗೆ ತನಿಖೆ ಶುರು ಮಾಡಿದರೆ ಮತ್ತೊಂದು ಕಡೆ ಆಕೆ ಕುಟುಂಬಸ್ಥರು ತಮ್ಮ ವಿವೇಚನೆ ಮೂಲಕ ತಾಯಿ ಪತ್ತೆಗೆ ಮುಂದಾಗಿದ್ದರು. ಅಂಬಮ್ಮ ನಾಪತ್ತೆಯಾದ ಬಗ್ಗೆ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದರು. ಆಗ ಗ್ರಾಮದ ಬಳಿ ಅಂಬಮ್ಮಲ ಚಪ್ಪಲಿ ಸಿಕ್ಕಿತ್ತು. ಅದರ ಆಧಾರದಲ್ಲಿ ತೀವ್ರ ಶೋಧ ನಡೆಸಲಾಗಿತ್ತು. ಆಗಲೇ ಗೊತ್ತಾಗಿದ್ದು, ಕಿಡ್ನ್ಯಾಪ್ ಆಗಿದ್ದ ಅಂಬಮ್ಮ ಹೆಣವಾಗಿದ್ದಳು.
ಕಿಡ್ನಾಪ್ ಆಗಿದ್ದ ಅಂಬಮ್ಮ ಗ್ರಾಮದ ಹೊರ ಭಾಗದ ತೊಗರಿ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದರು. ನಂತರ ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ ಅಂಬಮ್ಮಳ ತಲೆ, ಮುಖದ ಭಾಗಕ್ಕೆ ಗಾಯಗಳಾಗಿರುವುದು ಬೆಳಕಿಗೆ ಬಂದಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.