38 ಲಕ್ಷ ರೂ ಮೌಲ್ಯದ 200 ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ ಕಲಬುರಗಿ ಪೊಲೀಸ್
ಹೊಸದಾಗಿ ರಾಜ್ಯ ಪೊಲೀಸರು ಜಾರಿ ಮಾಡಿರುವ ಸಿಇಐಆರ್ ಪೋರ್ಟಲ್ನಿಂದ ಕಳೆದು ಹೋದ ಹಾಗೂ ಕಳ್ಳತನವಾಗಿರುವ ಮೊಬೈಲ್ ಫೋನ್ಗಳ ಪತ್ತೆ ಕಾರ್ಯಕ್ಕೆ ಅನುಕೂಲವಾಗುತ್ತಿದೆ. ಸದ್ಯ ಈ ಪೋರ್ಟಲ್ನಿಂದ ಕಲಬುರಗಿ ಜಿಲ್ಲೆಯಲ್ಲಿ ಕಳುವಾಗಿದ್ದ ಬರೋಬ್ಬರಿ 200 ಮೊಬೈಲ್ಗಳನ್ನು ಪೊಲೀಸರು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.
ಕಲಬುರಗಿ, ಅಕ್ಟೋಬರ್ 23: ಜಿಲ್ಲೆಯಲ್ಲಿ ಕಳುವಾಗಿದ್ದ ಬರೋಬ್ಬರಿ 38 ಲಕ್ಷ ರೂ. ಮೌಲ್ಯದ 200 ಮೊಬೈಲ್ (mobile) ಪತ್ತೆ ಹಚ್ಚಿ ಮಾಲೀಕರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ನಗರದ ವಿವಿಧ ಠಾಣೆಗಳಲ್ಲಿ ಮೊಬೈಲ್ ಕಳವು ಕೇಸ್ ದಾಖಲಾಗಿದ್ದವು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸಿಇಐಆರ್ (CEIR) ಪೋರ್ಟಲ್ನಲ್ಲಿ ಮೊಬೈಲ್ ಕಳುವಾಗಿದ್ದ ಬಗ್ಗೆ ದಾಖಲಿಸಲಾಗಿತ್ತು. 9 ತಿಂಗಳಲ್ಲಿ ಸಿಇಐಆರ್ ಪೋರ್ಟಲ್ ಮೂಲಕ 672 ಮೊಬೈಲ್ ಪತ್ತೆ ಹಚ್ಚಿದ್ದೇವೆ. ಇಂದು ಒಂದೇ ದಿನದಲ್ಲಿ 200 ಜನರಿಗೆ ಮೊಬೈಲ್ ಹಸ್ತಾಂತರಿಸಿದ್ದೇವೆ. ಇದರಲ್ಲಿ ಕಳ್ಳತನವಾಗಿದ್ದ ಹಾಗೂ ಕಳೆದು ಹೋಗಿರುವ ಮೊಬೈಲ್ಗಳಿವೆ ಎಂದಿದ್ದಾರೆ.
ಇದನ್ನೂ ಓದಿ: ರೈಸ್ ಪುಲ್ಲಿಂಗ್ ವಸ್ತು ತೋರಿಸಿ ಉದ್ಯಮಿಗೆ ವಂಚನೆ: ಎಕರೆಗಟ್ಟಲೇ ಜಮೀನು ವಂಚಿಸಿದ್ದ ಐವರ ಬಂಧನ
ಹೊಸದಾಗಿ ರಾಜ್ಯ ಪೊಲೀಸರು ಜಾರಿ ಮಾಡಿರುವ ಸಿಇಐಆರ್ ಪೋರ್ಟಲ್ನಿಂದ ಕಳೆದು ಹೋದ ಹಾಗೂ ಕಳ್ಳತನವಾಗಿರುವ ಮೊಬೈಲ್ ಫೋನ್ಗಳ ಪತ್ತೆ ಕಾರ್ಯಕ್ಕೆ ಅನುಕೂಲವಾಗುತ್ತಿದೆ. ಯಾಕೆಂದರೆ ಯಾದಗಿರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೈಬರ್ ಕ್ರೈಂ (ಸೆನ್) ಠಾಣೆಯಿಂದ ಈ ಪೋರ್ಟಲ್ನಿಂದಾಗಿ 1113 ಫೋನ್ಗಳನ್ನ ಪತ್ತೆ ಮಾಡಲಾಗಿದೆ.
ಫೋನ್ ಕಳೆದುಕೊಂಡವರಿಗೆ ಹುಡುಕಿ ವಾಪಸ್ ಫೋನ್ ಕೊಡುವ ಕೆಲಸ ಪೊಲೀಸರು ಮಾಡಿದ್ದಾರೆ. ಕಳೆದುಕೊಂಡ ಫೋನ್ ಸಿಗೋದೆ ಇಲ್ಲ ಅಂತ ಅಂದುಕೊಂಡಿದ್ದ ಜನರಿಗೆ ಪೊಲೀಸರು ಫೋನ್ ಹುಡುಕಿ ಕೊಟ್ಟಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಮೊಬೈಲ್ ಕಳ್ಳನ
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಮೊಬೈಲ್ ಕಳ್ಳನ ಕೈಚಳಕಕ್ಕೆ ಸುಮಾರು ಎಂಟಕ್ಕೂ ಹೆಚ್ಚು ಮೊಬೈಲ್ಗಳು ಕಳ್ಳತನವಾಗಿವೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಕಳ್ಳನೊಬ್ಬ ಬಂದು ರೋಗಿಗಳ ಬಳಿ ಇರುವ ಪೋನ್ಗಳನ್ನು ಎಗರಿಸಿರುವ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್: 21 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ
ರೋಗಿಗಳು ನಿದ್ದೆ ಮಾಡುವ ವೇಳೆ ಕಳ್ಳ ಬೆಕ್ಕಿನಂತೆ ಬರುವ ಮೊಬೈಲ್ ಕಳ್ಳ ಮೊಬೈಲ್ ಎಗರಿಸಿಕೊಂಡು ಹೋಗುತ್ತಾನೆ, ಸದ್ಯ ಮೇಲಿಂದ ಮೇಲೆ ಹೀಗೆ ಮೊಬೈಲ್ ಕಳ್ಳತನವಾಗುತ್ತಿರುವುದಕ್ಕೆ ಜಿಲ್ಲಾಸ್ಪತ್ರೆಯ ರೋಗಿಗಳು ಆಕ್ರೋಶ ಹೊರಹಾಕಿದ್ದು, ಕೂಡಲೇ ಮೊಬೈಲ್ ಕಳ್ಳನನ್ನು ಬಂಧಿಸುವಂತೆ ಅಗ್ರಹಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊಬೈಲ್ ಕಳ್ಳನಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.