ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗೋಣ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗೋಣ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

ಬೆಂಗಳೂರು: ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳಿಗೆ ಸಮಾನ ಲಕ್ಷಣಗಳಿವೆ. ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಂಡಿರುವ ಎರಡೂ ದೇಶಗಳು ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗಬೇಕಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಹೇಳಿದರು. ಕೋವಿಡ್ ಲಕ್ಷಾಂತರ ಕುಟುಂಬಗಳ ನಡುವೆ ಅಂತರ ತಂದೊಡ್ಡಿದೆ. ಆರ್ಥಿಕವಾಗಿ ಕುಸಿಯುವಂತೆ ಮಾಡಿದೆ. ಆಧುನಿಕ ತಂತ್ರಜ್ಞಾನ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಹಕರಿಸುತ್ತಿದೆ. ಖಾಸಗಿ ದತ್ತಾಂಶ ರಕ್ಷಣೆ ತಂತ್ರಜ್ಞಾನದ ಮುಂದಿರುವ ಸವಾಲು. ಆರೋಗ್ಯ ವಲಯ, ರಕ್ಷಣೆ, ನಾಗರಿಕ ಸೌಲಭ್ಯಗಳಲ್ಲಿ ತಂತ್ರಜ್ಞಾನದ ಬಳಕೆ ಮುಂತಾದ ಕ್ಷೇತ್ರಗಳಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆ […]

sadhu srinath

| Edited By: pruthvi Shankar

Nov 19, 2020 | 3:09 PM

ಬೆಂಗಳೂರು: ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳಿಗೆ ಸಮಾನ ಲಕ್ಷಣಗಳಿವೆ. ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಂಡಿರುವ ಎರಡೂ ದೇಶಗಳು ಅಭಿವೃದ್ಧಿಯಲ್ಲಿ ಜೊತೆಜೊತೆಗೆ ಸಾಗಬೇಕಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಹೇಳಿದರು.

ಕೋವಿಡ್ ಲಕ್ಷಾಂತರ ಕುಟುಂಬಗಳ ನಡುವೆ ಅಂತರ ತಂದೊಡ್ಡಿದೆ. ಆರ್ಥಿಕವಾಗಿ ಕುಸಿಯುವಂತೆ ಮಾಡಿದೆ. ಆಧುನಿಕ ತಂತ್ರಜ್ಞಾನ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಹಕರಿಸುತ್ತಿದೆ. ಖಾಸಗಿ ದತ್ತಾಂಶ ರಕ್ಷಣೆ ತಂತ್ರಜ್ಞಾನದ ಮುಂದಿರುವ ಸವಾಲು. ಆರೋಗ್ಯ ವಲಯ, ರಕ್ಷಣೆ, ನಾಗರಿಕ ಸೌಲಭ್ಯಗಳಲ್ಲಿ ತಂತ್ರಜ್ಞಾನದ ಬಳಕೆ ಮುಂತಾದ ಕ್ಷೇತ್ರಗಳಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆ ಹೆಚ್ಚಬೇಕಿದೆ ಎಂದರು.

ಆಸ್ಟ್ರೇಲಿಯಾ ಪ್ರಧಾನಿ ಬಾಯಲ್ಲಿ ಇನ್ಫೋಸಿಸ್! ಎರಡು ದೇಶಗಳ ಖಾಸಗಿ ಕಂಪನಿಗಳು ಸಹಭಾಗಿತ್ವ ಸಾಧಿಸಿರುವುದನ್ನು ಪ್ರಸ್ತಾಪಿಸಿದ ಮಾರಿಸನ್ ಅವರು ಇನ್ಫೋಸಿಸ್ ಹೆಸರನ್ನು ಪ್ರಸ್ತಾಪಿಸಿದರು. ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಸರು ಮೊದಲ ಸಾಲಲ್ಲಿದೆ.

ಭಾರತ ಆಸ್ಟ್ರೇಲಿಯಾಗಳು ಸೈಬರ್ ಸೆಕ್ಯುರಿಟಿ, ಡಿಜಿಟಲ್ ಆರ್ಥಿಕತೆ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿವೆ. ಇದು ಜಾಗತಿಕ ಮಟ್ಟದಲ್ಲಿ ಎರಡೂ ದೇಶಗಳ ಪ್ರಭಾವ ಹೆಚ್ಚಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ನವೋದ್ಯಮಗಳ ಮೂಲಕ ವಿಶ್ವಾದ್ಯಂತ ಹೆಸರಾದ ಬೆಂಗಳೂರಿನ ಟೆಕ್ ಸಮ್ಮಿಟ್​ನಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದರು.

ಇದನ್ನೂ ಓದಿ: Work From Anywhere ಜಾರಿಗೊಳಿಸುವ ಯೋಚನೆ ಸರ್ಕಾರಕ್ಕಿದೆ: ಪ್ರಧಾನಿ ಮೋದಿ

Bengaluru Tech Summit 2020 ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ: CM ಯಡಿಯೂರಪ್ಪ

ದತ್ತಾಂಶ ಸುರಕ್ಷತಾ ಕಾನೂನು ರೂಪಿಸುತ್ತೇವೆ: ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್

Follow us on

Related Stories

Most Read Stories

Click on your DTH Provider to Add TV9 Kannada