ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಚಾಲಕರಲ್ಲಿ ಚೈತನ್ಯ ತುಂಬಲು ಪ್ರತಿ ಚಾಲಕರಿಗೂ ರಾಜ್ಯ ಸರ್ಕಾರ ತಲಾ ₹ 5 ಸಾವಿರ ಪರಿಹಾರ ಘೋಷಿಸಿತ್ತು. ಇದೀಗ ಪರಿಹಾರ ಮಂಜೂರಾತಿಗೆ ಸರ್ಕಾರ ಆದೇಶ ಹೊರಡಿಸಿದೆ.
ಅರ್ಜಿಗಳು ಸೇವಾಸಿಂಧು (seva sindhu) ಪೋರ್ಟಲ್ ಮೂಲಕ ಸ್ವೀಕೃತವಾಗಬೇಕು. ಮಾ. 24ರಂದು DL, FC ಹೊಂದಿದ್ದ ವಾಹನಗಳಿಗೆ ಅನ್ವಯ. ಆಧಾರ್ ಕಾರ್ಡ್, DL, ವಾಹನ ನೋಂದಣಿ ಸಂಖ್ಯೆ ಕಡ್ಡಾಯ. ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಇದು ಅನ್ವಯವಾಗಲ್ಲ. ಪರಿಹಾರ ಧನ ಚಾಲಕರ ಖಾತೆಗೆ ಡಿಬಿಟಿ ಮೂಲಕ ಸಂದಾಯವಾಗಲಿದೆ. 1ಕ್ಕಿಂತ ಹೆಚ್ಚು ಆಟೋ, ಟ್ಯಾಕ್ಸಿ ಇದ್ರೆ ಡಬಲ್ ಪೇಮೆಂಟ್ ಇಲ್ಲ ಎಂದು ಸರ್ಕಾರ ಸ್ಷಷ್ಟಪಡಿಸಿದೆ.
Published On - 7:47 pm, Sat, 16 May 20