‘ಯತ್ನಾಳ್ ಆತ್ಮರತಿ ರೋಗದಿಂದ ಬಳಲ್ತಿದ್ದಾರೆ.. ಶಿವಮೊಗ್ಗಕ್ಕೆ ಬಂದ್ರೆ ಒಳ್ಳೇ ಚಿಕಿತ್ಸೆ ಕೊಡಿಸ್ತೇನೆ’
ಶಿವಮೊಗ್ಗ: ಯತ್ನಾಳರದ್ದು ತನ್ನನ್ನು ತಾನೇ ವೈಭವಿಸಿಕೊಳ್ಳುವ ಮನಸ್ಥಿತಿ. ಯತ್ನಾಳ್ ಆತ್ಮರತಿ ರೋಗದಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆ ಅವರನ್ನು ಕಾಡುತ್ತಿದೆ ಎಂದು ನಗರದಲ್ಲಿ MLC ಆಯನೂರು ಮಂಜುನಾಥ್ ಶಾಸಕ ಬಸನಗೌಡಪಾಟೀಲ್ ಯತ್ನಾಳ್ಗೆ ಲೇವಡಿ ಮಾಡಿದ್ದಾರೆ. ನಾನು ಮತ್ತು ಯತ್ನಾಳ ಇಬ್ಬರು ಆತ್ಮೀಯ ಸ್ನೇಹಿತರು. ಶಿವಮೊಗ್ಗದಲ್ಲಿ ನನಗೆ ಒಳ್ಳೇ ವೈದ್ಯರು ಪರಿಚಯ ಇದ್ದಾರೆ. ಯತ್ನಾಳ್ 4-5 ದಿನ ಶಿವಮೊಗ್ಗಕ್ಕೆ ಬಂದ್ರೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದರು. ಯತ್ನಾಳ್ ಸಿಎಂ ಹೇಳಿಕೆಗೆ ಆಯನೂರು ಟಾಂಗ್ ಕೊಟ್ಟಿದ್ದು ನಾನು ಕೂಡಾ […]

ಶಿವಮೊಗ್ಗ: ಯತ್ನಾಳರದ್ದು ತನ್ನನ್ನು ತಾನೇ ವೈಭವಿಸಿಕೊಳ್ಳುವ ಮನಸ್ಥಿತಿ. ಯತ್ನಾಳ್ ಆತ್ಮರತಿ ರೋಗದಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆ ಅವರನ್ನು ಕಾಡುತ್ತಿದೆ ಎಂದು ನಗರದಲ್ಲಿ MLC ಆಯನೂರು ಮಂಜುನಾಥ್ ಶಾಸಕ ಬಸನಗೌಡಪಾಟೀಲ್ ಯತ್ನಾಳ್ಗೆ ಲೇವಡಿ ಮಾಡಿದ್ದಾರೆ.
ನಾನು ಮತ್ತು ಯತ್ನಾಳ ಇಬ್ಬರು ಆತ್ಮೀಯ ಸ್ನೇಹಿತರು. ಶಿವಮೊಗ್ಗದಲ್ಲಿ ನನಗೆ ಒಳ್ಳೇ ವೈದ್ಯರು ಪರಿಚಯ ಇದ್ದಾರೆ. ಯತ್ನಾಳ್ 4-5 ದಿನ ಶಿವಮೊಗ್ಗಕ್ಕೆ ಬಂದ್ರೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇನೆ ಎಂದು ಹೇಳಿದರು. ಯತ್ನಾಳ್ ಸಿಎಂ ಹೇಳಿಕೆಗೆ ಆಯನೂರು ಟಾಂಗ್ ಕೊಟ್ಟಿದ್ದು ನಾನು ಕೂಡಾ ಸಚಿವ ಆಕಾಂಕ್ಷಿ ಎಂದು ಹೇಳಿದರು. BSY 3 ವರ್ಷವೂ ಸಿಎಂ ಆಗಿರ್ತಾರೆಂದು ನಾನೇನೂ ಹೇಳಲ್ಲ -ಯತ್ನಾಳ್ ಪರೋಕ್ಷ ಟಾಂಗ್