ಡ್ರಗ್ಸ್ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ: ನಟ ಚೇತನ್

| Updated By: guruganesh bhat

Updated on: Sep 24, 2021 | 11:00 PM

ಮಾದಕ ದ್ರವ್ಯಗಳಿಂದ ಆಗುವ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಹ ಅವರು ಕರೆ ಕೊಟ್ಟರು.

ಡ್ರಗ್ಸ್ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ: ನಟ ಚೇತನ್
ನಟ ಚೇತನ್ ಕುಮಾರ್
Follow us on

ಬಾಗಲಕೋಟೆ: ಡ್ರಗ್ಸ್ ಸಮಸ್ಯೆ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇವಲ ಚಿತ್ರರಂಗಕ್ಕೆ ಮಾತ್ರ ಡ್ರಗ್ಸ್ ಸಮಸ್ಯೆಯನ್ನು ಸೀಮಿತಗೊಳಿಸುವುದು ಸರಿಯಲ್ಲ ಎಂದು ಬಾಗಲಕೋಟೆಯ ಬಾದಾಮಿಯಲ್ಲಿ ನಟ ಚೇತನ್ ಅಭಿಪ್ರಾಯಪಟ್ಟರು. ಮಾದಕ ದ್ರವ್ಯದ ಕುರಿತು ಇರುವ ಸಮಸ್ಯೆಯನ್ನು ಬಗೆ ಹರಿಸುವ ಮನಸ್ಥಿತಿ ಎಲ್ಲೂ ಕಾಣುತ್ತಿಲ್ಲ ಎಂದ ಅವರು ಅದಾನಿ ವಿಮಾನ ನಿಲ್ದಾಣದಲ್ಲಿ 3,000 ಕೆಜಿ ಹೆರಾಯಿನ್ ಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಬೇಕು. ಮಾದಕ ದ್ರವ್ಯಗಳಿಂದ ಆಗುವ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಹ ಅವರು ಕರೆ ಕೊಟ್ಟರು.

ಬಾದಾಮಿಯಲ್ಲಿ ಕಳೆದ ವರ್ಷ ದಯಾಭಾರತಿ ಮಾತಾಜಿ ಆಶ್ರಮವನ್ನು ಪುರಸಭೆಯವರು ಒಡೆದು ಹಾಕಿದ್ದಾರೆ. ದಲಿತ ಸಮಾಜದ ಸೇವಕಿ ಅಂಬಾ ಆಶ್ರಮದ ಮಾತಾಜಿಯ ಆಶ್ರಮವನ್ನು ಯಾವುದೇ ನೊಟೀಸ್ ನೀಡದೆ ಜೆಸಿಬಿ ತಂದು ಕಟ್ಟಡ ಒಡೆದು ಒಡೆದು ಹಾಕಿದ್ದಾರೆ. ಅವರ ಆಶ್ರಮವಿದ್ದ ಮೂರು ಎಕರೆ ಜಾಗ ಅವರಿಗೆ ನೀಡಬೇಕು. ಸರಕಾರ ಮಾಡದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಪರವಾಗಿ ನಾವು ಎಂದೆಂದಿಗೂ ನಿಲ್ಲುತ್ತೇವೆ. ಅಧಿಕಾರದಲ್ಲಿರುವ ಶಾಸಕರ ನಮ್ಮ ಹೋರಾಟಕ್ಕೆ ನ್ಯಾಯ ನೀಡುತ್ತಾರೆ ಎಂದು ನಮಗೆ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.

ಅದು ಬರಾಕ್ ಒಮಾಬಾ ಆಗಿರಬಹುದು. ಟ್ರಂಪ್ ಆಗಿರಬಹುದು, ಬೈಡನ್ ಆಗಿರಬಹುದು. ಮೋದಿ ಅವರು ಅಮೆರಿಕವನ್ನು ಹಾಡಿ ಹೊಗಳಿ ನಮ್ಮನ್ನು ಗುಲಾಮರನ್ನಾಗಿ ಬಿಂಬಿಸೋಕೆ ಶುರು ಮಾಡಿದ್ದಾರೆ. ನಾವು ಅದಲ್ಲ ಅಮೆರಿಕ ಜಗತ್ತಿಗೆ ಏನೆಲ್ಲ ಅನ್ಯಾಯ ಮಾಡಿದೆ ನಾವು ನೋಡಿಕೊಂಡು ಬಂದಿದ್ದೇವೆ. ಅಮೆರಿಕ 20-21ನೇ ಶತಮಾನದಲ್ಲಿ ಸುಳ್ಳು ಸುಳ್ಳು ಯುದ್ಧ ಮಾಡಿ ಲಕ್ಷಾಂತರ ಜನರನ್ನು ಕೊಂದಿದೆ. ಬರಾಕ್ ಬರಾಕ್- ಟ್ರಂಪ್ ಟ್ರಂಪ್ ಅಂತ ಬರಿ ಸ್ನೇಹ ಬೆಳೆಸಿಕೊಳ್ಳೋದಕ್ಕಿಂತ ಅನ್ಯಾಯ ಪ್ರಶ್ನೆ ಮಾಡಬೇಕು. ದೇಶದಲ್ಲಿ ಆಗಲಿ ಪರದೇಶದಲ್ಲಿ ಆಗಲಿ ಅನ್ಯಾಯ ಪ್ರಶ್ನೆ ಮಾಡಬೇಕು. ಅವರು ಬಿಳಿಯರು, ಅವರು ಶ್ರೀಮಂತರು ಅಂತ ಅವರ ಕೆಳಗೆ ಕೆಲಸ ಮಾಡುವ ಅಗತ್ಯವಿಲ್ಲ. ನಮ್ಮ ದೇಶಕ್ಕೆ ಅದ್ಭುತವಾದ ಇತಿಹಾಸವಿದೆ. ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಸಾಮರ್ಥ್ಯವಿದೆ. ನಮ್ಮ ಗುಣಗಳನ್ನು ನಾವು ಎತ್ತಿ ಹಿಡಿಯಬೇಕು. ಅಮೆರಿಕಕ್ಕೆ ನಾವೇನು ಕಡಿಮೆ ಅಂತ ತೋರಿಸಿಕೊಳ್ಳೋದೇನು ಬೇಡ. ನಾವು ಉತ್ತಮ ರೀತಿಯಲ್ಲಿ ಕಟ್ಟಿದರೆ ಅಮೆರಿಕವನ್ನು ಪ್ರಶ್ನೆ ಮಾಡಬಹುದು. ನಮ್ಮ ದೇಶದ ಅನ್ಯಾಯಗಳನ್ನು ಮುಚ್ಚಿ ಹಾಕ್ತಿರುವ ಮೋದಿ ಅಂದಾಗ ಅಮೆರಿಕವನ್ನು ಪ್ರಶ್ನೆ ಮಾಡೋಕಾಗಲ್ಲ. ಮೋದಿಗೆ ನಿಜವಾಗಲೂ ಕಾಳಜಿ ಇದ್ದರೆ ನಮ ದೇಶದ ತಳಸಮುದಾಯದ ಬಗ್ಗೆ, ಭೇದಭಾವದ ಬಗ್ಗೆ, ಖಾಸಗೀಕರಣದ ಬಗ್ಗೆ ಪ್ರಶ್ನೆ ಮಾಡುವ ಮನಸ್ಥಿತಿ ಬೇಕು ಎಂದು ಆಗ್ರಹಿಸಿದರು.

ಮೋದಿ ಅವರೇ ಹೆಚ್ಚು ಖಾಸಗಿಕರಣ ಮಾಡುತ್ತಿದ್ದಾರೆ. ಮೋದಿ ಅವರಲ್ಲಿ ಭೇದಭಾವ ಹೆಚ್ಚು ಮಾಡುವ ಭಾವನೆ ಇದೆ. ವರ್ಷ ವರ್ಷ ಎರಡು ಕೋಟಿ ಉದ್ಯೋಗ ಕೊಡೋದಾಗಿ ಹೇಳಿದ್ದರು. ಇದುವರೆಗೂ ಹದಿನಾಲ್ಕು ಕೋಟಿ ಉದ್ಯೋಗ ಕೊಡಬೇಕಿತ್ತು, ಕೊಡಲಿ. ಅದರಂತೆ ಅಮೆರಿಕವನ್ನು ಪ್ರಶ್ನೆ ಮಾಡುವಂತಾಗಲಿ ಎಂದು ನಟ ಚೇತನ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 

ಡ್ರಗ್ಸ್​ ಕೇಸ್​ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿದ್ದೇಕೆ? ಇಲ್ಲಿದೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ 

Min Shivaram Hebbar Vs Actor Chethan Ahimsa : ನಟ ಚೇತನ್ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದಾರಂತೆ, ಐ ಡೋಂಟ್​ ಕೇರ್

(Actor Chethan Kumar says Drugs are not limited to cinema Industry)

Published On - 7:49 pm, Fri, 24 September 21