ಜಿಲ್ಲೆಯಲ್ಲೊಂದು ಮನ ಮಿಡಿಯುವ ದೃಶ್ಯ.. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು!

ಬಾಗಲಕೋಟೆ: ಜಿಲ್ಲೆಯಲ್ಲೊಂದು ಮನ ಮಿಡಿಯುವ ದೃಶ್ಯ ಕಂಡು ಬಂದಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಶಕ್ತಿಹೀನವಾಗಿ ಅಜ್ಜಿಯೊಬ್ಬರು ಬಿದ್ದಿದ್ದರು ಅವರ ದೇಹದ ತುಂಬೆಲ್ಲಾ ಕಪ್ಪು ಇರುವೆಗಳು ದಾಳಿ ಮಾಡಿದ್ದವು. ಈ ದೃಶ್ಯ ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಆಕೆ 70 ವರ್ಷದ ವೃದ್ಧೆ ಸುಮಿತ್ರಾ ಮುಗಳಿ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ನಿವಾಸಿ. ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣ ಬಳಿಯ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಅನಾಥರಾಗಿ ಬಿದ್ದಿದ್ದರು. ಅವರ ಮುಖ, ಮೈತುಂಬಾ ಎಲ್ಲ ಇರುವೆಗಳು ಮೆತ್ತಿಕೊಂಡಿದ್ದವು. ಈ ದೃಶ್ಯಗಳು ಹೃದಯವನ್ನು […]

ಜಿಲ್ಲೆಯಲ್ಲೊಂದು ಮನ ಮಿಡಿಯುವ ದೃಶ್ಯ.. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು!
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jun 30, 2020 | 12:22 PM

ಬಾಗಲಕೋಟೆ: ಜಿಲ್ಲೆಯಲ್ಲೊಂದು ಮನ ಮಿಡಿಯುವ ದೃಶ್ಯ ಕಂಡು ಬಂದಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಶಕ್ತಿಹೀನವಾಗಿ ಅಜ್ಜಿಯೊಬ್ಬರು ಬಿದ್ದಿದ್ದರು ಅವರ ದೇಹದ ತುಂಬೆಲ್ಲಾ ಕಪ್ಪು ಇರುವೆಗಳು ದಾಳಿ ಮಾಡಿದ್ದವು. ಈ ದೃಶ್ಯ ಕಂಡ ಜನ ಬೆಚ್ಚಿಬಿದ್ದಿದ್ದಾರೆ.

ಆಕೆ 70 ವರ್ಷದ ವೃದ್ಧೆ ಸುಮಿತ್ರಾ ಮುಗಳಿ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ನಿವಾಸಿ. ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣ ಬಳಿಯ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಅನಾಥರಾಗಿ ಬಿದ್ದಿದ್ದರು. ಅವರ ಮುಖ, ಮೈತುಂಬಾ ಎಲ್ಲ ಇರುವೆಗಳು ಮೆತ್ತಿಕೊಂಡಿದ್ದವು. ಈ ದೃಶ್ಯಗಳು ಹೃದಯವನ್ನು ಕಿವುಚುವಂತಿತ್ತು. ವೃದ್ಧೆ ತಮ್ಮ ಇಳಿ ವಯಸ್ಸಿನಲ್ಲಿ ಇಂತಹ ಕಷ್ಟವನ್ನು ಎದುರಿಸುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇರುವೆಗಳು ವೃದ್ಧೆಯ ದೇಹವನ್ನು ಕಿತ್ತು ತಿನ್ನುತ್ತಿವೆ. ಘಟನೆ ತಿಳಿಯುತ್ತಿದ್ದಂತೆ ವೃದ್ದೆ ಪರದಾಟದ ಬಗ್ಗೆ ಬಾಗಲಕೋಟೆ ಟಿವಿ 9 ತಂಡ ಸ್ಪಂದಿಸಿದೆ. ತಕ್ಷಣವೇ ಡಿಹೆಚ್ ಒಗೆ ಕರೆ ಮಾಡಿ ಆಸ್ಪತ್ರೆ ಸೇರಿಸಲು ಸಹಾಯ ಮಾಡಿದ್ದಾರೆ. ಕರೆ ನಂತರ ತುರ್ತು ಕಾರ್ಯಕ್ಕೆ ಮುಂದಾದ ಆರೋಗ್ಯ ಇಲಾಖೆ ಸಿಬ್ಬಂದಿ ಕಿಟ್ ಸಮೇತ ಸ್ಥಳಕ್ಕೆ ಬಂದು ವೃದ್ಧೆಯ ದೇಹಕ್ಕೆ ಹೈಪಕ್ಲೋರೈಡ್ ಸಿಂಪಡಿಸಿ,  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಆರಂಭದಲ್ಲಿ  ಯಾರೂ ಅಜ್ಜಿಯನ್ನು ಮುಟ್ಟಲು ಸಹ ಹಿಂದೇಟು ಹಾಕಿದ್ರು. ಆದರೆ ಮಾನವೀಯತೆ ದೃಷ್ಟಿಯಿಂದ ಈಗ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಜ್ಜಿಯೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us