ಪ್ಯಾಲಿಸ್ತೇನ್ ಅಧ್ಯಕ್ಷ‌ರ‌ ಜೊತೆ ಮೋದಿ; ಫೋಟೋ ಸ್ಟೇಟಸ್​ಗೆ ಇಟ್ಟ SDPI ಕಾರ್ಯಕರ್ತನನ್ನು ಮನಬಂದಂತೆ ಹಲ್ಲೆ ನಡೆಸಿದ ಖಾಕಿ?

ಪ್ಯಾಲಿಸ್ತೇನ್ ಅಧ್ಯಕ್ಷ‌ರ‌ ಜೊತೆ ಭಾರತದ ಪ್ರಧಾನಿ ಮಾತುಕತೆ ನಡೆಸಿದ್ದ ಫೋಟೋವನ್ನು ಪ್ಯಾಲಿಸ್ತೇನ್ ಪರವಾಗಿ ಸ್ಟೇಟಸ್ ಇಟ್ಟಿದ್ದ ಹಿನ್ನೆಲೆ ಬಾದಾಮಿ ಪೊಲೀಸರು ಎಸ್​ಡಿಪಿಐ ಕಾರ್ಯಕರ್ತ ಸೈಯದ್ ಬಾಷಾನನ್ನು ವಿಚಾರಣೆಗೆ ಕರೆಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ಯಾಲಿಸ್ತೇನ್ ಅಧ್ಯಕ್ಷ‌ರ‌ ಜೊತೆ ಮೋದಿ; ಫೋಟೋ ಸ್ಟೇಟಸ್​ಗೆ ಇಟ್ಟ SDPI ಕಾರ್ಯಕರ್ತನನ್ನು ಮನಬಂದಂತೆ ಹಲ್ಲೆ ನಡೆಸಿದ ಖಾಕಿ?
ಪ್ಯಾಲಿಸ್ತೇನ್ ಪರವಾಗಿ ಸ್ಟೇಟಸ್ ಇಟ್ಟ SDPI ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ
Follow us
| Updated By: ಆಯೇಷಾ ಬಾನು

Updated on:Oct 01, 2024 | 11:12 AM

ಬಾಗಲಕೋಟೆ, ಅ.01: ಪ್ಯಾಲಿಸ್ತೇನ್ ಅಧ್ಯಕ್ಷ‌ರ‌ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸುತ್ತಿರುವ ಭಾವಚಿತ್ರವನ್ನು ವಾಟ್ಸಾಪ್ ಸ್ಟೇಟಸ್​ಗೆ ಹಾಕಿದ ಹಿನ್ನೆಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಎಸ್​ಡಿಪಿಐ ಕಾರ್ಯಕರ್ತನ ವಿರುದ್ಧ ದೂರು‌‌ ದಾಖಲಾಗಿತ್ತು. ಪ್ಯಾಲಿಸ್ತೇನ್ ಪರವಾಗಿ ಸ್ಟೇಟಸ್​ ಇಡಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಬಾದಾಮಿ ಪಿಎಸ್​ಐ ವಿಠ್ಠಲ‌ನಾಯಕ ಹಾಗೂ ಇತರೆ‌ ಕಾನ್ಸ್ಟೇಬಲ್​ಗಳು ವಿಚಾರಣೆ ಹೆಸರಲ್ಲಿ ಎಸ್​ಡಿಪಿಐ ಕಾರ್ಯಕರ್ತ ಸೈಯದ್ ಬಾಷಾನನ್ನು ಠಾಣೆಗೆ ಕರೆಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸೈಯದ್ ಬಾಷಾ ಮೇಲೆ ದೂರು ದಾಖಲಾದ ಹಿನ್ನೆಲೆ ಸೈಯದ್​ನನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ವಿಚಾರಣೆ ಹೆಸರಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 24ರಂದು ಹಲ್ಲೆ ನಡೆದಿದ್ದು, ಜಾಮೀನಿನ ಮೇಲೆ‌ ಸೈಯದ್ ಹೊರಬಂದಾಗ ಪ್ರಕರಣ ಬಯಲಿಗೆ ಬಂದಿದೆ. ಪೊಲೀಸರಿಂದ‌ ಹಲ್ಲೆ ಹಿನ್ನೆಲೆ ಸಾಮಾಜಿಕ‌ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಎಸ್​ಡಿಪಿಐ ನಾಯಕರಿಂದ ವ್ಯಾಪಕ‌ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೈದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸ್ ದೂರುಗಳ ಪ್ರಾಧಿಕಾರ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು, ನಾಯಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಗಳನ್ನು ಕಚ್ಚಿದ್ದಕ್ಕೆ ನಾಯಿಯನ್ನು ಧರಧರನೆ ಎಳೆದೊಯ್ದು, ಥಳಿಸಿ, ಬೆಂಕಿ ಹಚ್ಚಿ ಕೊಂದ ವ್ಯಕ್ತಿ

55 ಆರೋಪಿಗಳು ಜೈಲಿನಿಂದ ಬಿಡುಗಡೆ

ನಾಗಮಂಗಲ ಗಲಭೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಮಂಡ್ಯ ಸೆಂಟ್ರಲ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಳೆದ ಶುಕ್ರವಾರ ಕೋರ್ಟ್‌ನಲ್ಲಿ ಎಲ್ಲರಿಗೂ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಶನಿವಾರ, ಭಾನುವಾರ ರಜೆ ಹಿನ್ನೆಲೆ ನಿನ್ನೆ ತಲಾ 1 ಲಕ್ಷ ಮೌಲ್ಯದ ಬಾಂಡ್ ಮತ್ತು ದಾಖಲೆ ಸಲ್ಲಿಸಿ ಆರೋಪಿಗಳು ಬಿಡುಗಡೆಯಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:10 am, Tue, 1 October 24

ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್