ಬಾಗಲಕೋಟೆಯಲ್ಲೂ ಹುಲಿ ಉಗುರು ಕಲರವ: ಗಣ್ಯ ವ್ಯಕ್ತಿ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್ ಪತ್ತೆ!

tiger claw pattern pendant: ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಜಂಬಗಿ ಕೆಡಿ ಗ್ರಾಮದ ‌ನಿವಾಸಿ ಸಂಜಯ್ ತಳೇವಾಡ ಬಂಗಾರದ ಚೈನ್ ಗೆ ಹುಲಿ ಉಗುರು ಮಾದರಿ ಪೆಂಡೆಂಟ್ ಹಾಕಿಸಿಕೊಂಡಿದ್ದಾರೆ. ಸಂಜಯ್ ತಳೇವಾಡ ಫೇಸ್ ಬುಕ್ ಖಾತೆಯಲ್ಲಿ ಲಾಕೆಟ್ ಧರಿಸಿದ ಫೋಟೊ ಕಂಡುಬಂದಿದೆ.

ಬಾಗಲಕೋಟೆಯಲ್ಲೂ ಹುಲಿ ಉಗುರು ಕಲರವ: ಗಣ್ಯ ವ್ಯಕ್ತಿ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್ ಪತ್ತೆ!
ಬಾಗಲಕೋಟೆ: sಗಣ್ಯ ವ್ಯಕ್ತಿ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್ ಪತ್ತೆ!
Edited By: ಸಾಧು ಶ್ರೀನಾಥ್​

Updated on: Oct 26, 2023 | 12:34 PM

ಬಾಗಲಕೋಟೆ, ಅಕ್ಟೋಬರ್​ 26: ಬಿಗ್ ಬಾಸ್ ಸ್ಪರ್ಧಿ ಸಂತೋಷ ಕೊರಳಲ್ಲಿ ‌ಹುಲಿ ಉಗುರು ಪತ್ತೆ ಬೆನ್ನಲ್ಲೇ ಎಲ್ಲ ಕಡೆಗಳಲ್ಲೂ ಒಬ್ಬರಿಗೊಬ್ಬರು ಬೆನ್ನು ಪರಚಿಕೊಳ್ಳಲಾರಂಭಿಸಿದ್ದಾರೆ. ಹುಲಿ ಉಗುರು ಕಲರವ ಜೋರಾಗಿ ಕೇಳಿಬರುತ್ತಿದೆ. ಇದೀಗ ಬಾಗಲಕೋಟೆ (Bagalkot) ಜಿಲ್ಲೆಯಲ್ಲೂ ಗಣ್ಯ ವ್ಯಕ್ತಿಯ ಕೊರಳಲ್ಲಿ (neck) ಹುಲಿ ಉಗುರು ಮಾದರಿ ಪೆಂಡೆಂಟ್ (tiger claw pattern pendant) ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿಜಯಪುರ-ಬಾಗಲಕೋಟೆ ಕೆಎಂಎಫ್ ನಿರ್ದೇಶಕ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಪತ್ತೆಯಾಗಿದ್ದು ಸದ್ಯಕ್ಕೆ ಜಿಲ್ಲೆಯಲ್ಲಿ ಸಮಚಲನ ಮೂಡಿಸಿದೆ. ಸಂಜಯ್ ತಳೇವಾಡ ವಿಜಯಪುರ ಬಾಗಲಕೋಟೆ ಕೆಎಂಎಫ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಸಂಜಯ್ ತಳೇವಾಡ ಕೊರಳಲ್ಲಿ‌ ಹುಲಿ ಉಗುರು ಮಾದರಿಯ ಲಾಕೆಟ್ ರಾರಾಜಿಸುತ್ತಿರುವುದು ಕಂಡುಬಂದಿದೆ.

Also Read: ಹುಲಿ ಉಗುರು ಪೆಂಡೆಂಟ್ ಪ್ರಕರಣ: ಮತ್ತೊಂದು ರೀತಿಯ ದಾಳಿಗೆ ಪ್ಲಾನ್ ಮಾಡಿದ ಅರಣ್ಯಾಧಿಕಾರಿಗಳು! ಆಭರಣ ಅಂಗಡಿ ಮಾಲೀಕರಿಗೂ ಸಂಕಷ್ಟ

ಅವರು ಬಂಗಾರದ ಚೈನ್ ಗೆ ಹುಲಿ ಉಗುರು ಮಾದರಿ ಪೆಂಡೆಂಟ್ ಹಾಕಿಸಿಸಿಕೊಂಡಿದ್ದಾರೆ. ಸಂಜಯ್ ತಳೇವಾಡ ಫೇಸ್ ಬುಕ್ ಖಾತೆಯಲ್ಲಿ ಲಾಕೆಟ್ ಧರಿಸಿದ ಫೋಟೊ ಕಂಡುಬಂದಿದೆ. ಸಂಜಯ್ ತಳೇವಾಡ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಜಂಬಗಿ ಕೆಡಿ ಗ್ರಾಮದ ‌ನಿವಾಸಿ.

ಕೊರಳಲ್ಲಿ ಇರೋದು ನಿಜವಾದ ಹುಲಿ ಉಗುರಾ ಅಥವಾ ಬೇರೆ ವಸ್ತುವಿನಿಂದ ಮಾಡಿರೋದು ಸದ್ಯಕ್ಕೆ ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಹುಲಿ ಉಗುರು ಮಾದರಿ ಹಿನ್ನೆಲೆ ಸದ್ಯಕ್ಕೆ ಆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂಜಯ್ ತಳೇವಾಡ ಮುಧೋಳ‌ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ರಾಮಣ್ಣ ತಳೇವಾಡ ಅವರ ಸಹೋದರನ ಮಗ.

ಪರಿಶೀಲಿಸುತ್ತೇವೆ ಎಂದ ಮುಧೋಳ ವಲಯ ಅರಣ್ಯ ಅಧಿಕಾರಿ

ಈ ಬಗ್ಗೆ ಮುಧೋಳ ವಲಯ ಅರಣ್ಯ ಅಧಿಕಾರಿ ತಳವಾರ್ ಅವರು ಟಿವಿ 9 ಜೊತೆ ಮಾತಾಡಿದ್ದಾರೆ. ಈ ವಿಚಾರ ನಮ್ಮ ‌ಗಮನಕ್ಕೆ ಬಂದಿಲ್ಲ. ಟಿವಿ 9 ಮೂಲಕ ಇದೀಗ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಕೂಡಲೇ ಪರಿಶೀಲನೆ ನಡೆಸುತ್ತೇವೆ. ಸಂಜಯ್ ತಳೇವಾಡ ಧರಿಸಿದ ಉಗುರು ಹುಲಿ ಉಗುರಾ ಅಥವಾ ಬೇರೆ ನಾ ಎಂಬ ಬಗ್ಗೆ ಪರಿಶೀಲನೆ ನಡೆಸೋದಾಗಿ ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:23 pm, Thu, 26 October 23

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us