ರನ್ನ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಹಣ ದುರ್ಬಳಕೆ ಆರೋಪ; ಅಧ್ಯಕ್ಷ ಆಡಳಿತ ಮಂಡಳಿಯ 22 ಜನರ ವಿರುದ್ಧ ತನಿಖೆಗೆ ಕೋರ್ಟ್ ಆದೇಶ
ರನ್ನ ಸಕ್ಕರೆ ಕಾರ್ಖಾನೆ ಗೋದಾಮು ಹಾಗೂ ಹ್ಯಾಶ್ ಯಾರ್ಡ್ ಘಟಕ ನಿರ್ಮಾಣ ಹೆಸರಲ್ಲಿ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿಂದ 12 ಕೋಟಿ ಸಾಲ ಪಡೆದು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದಡಿ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೇರಿದಂತೆ 22 ಜನರ ವಿರುದ್ಧ ನವೆಂಬರ್ 9ರಂದು ತನಿಖೆಗೆ ಆದೇಶ ನೀಡಿದೆ.
ಬಾಗಲಕೋಟೆ: ರನ್ನ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ 12 ಕೋಟಿ ರೂಪಾಯಿ ಸಾಲ ಪಡೆದು ಹಣ ದುರ್ಬಳಕೆ ಮಾಡುತ್ತಿರು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಸೇರಿ ಕಾರ್ಖಾನೆ ಆಡಳಿತ ಮಂಡಳಿಯ 22 ಜನರ ವಿರುದ್ಧ ತನಿಖೆಗೆ ಬಾಗಲಕೋಟೆ ಸಿಜೆಎಮ್ ನ್ಯಾಯಾಲಯ ಆದೇಶ ಹೊರಡಿಸಿದೆ.
ರನ್ನ ಸಕ್ಕರೆ ಕಾರ್ಖಾನೆ ಗೋದಾಮು ಹಾಗೂ ಹ್ಯಾಶ್ ಯಾರ್ಡ್ ಘಟಕ ನಿರ್ಮಾಣ ಹೆಸರಲ್ಲಿ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿಂದ 12 ಕೋಟಿ ಸಾಲ ಪಡೆದು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದಡಿ ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೇರಿದಂತೆ 22 ಜನರ ವಿರುದ್ಧ ನವೆಂಬರ್ 9ರಂದು ತನಿಖೆಗೆ ಆದೇಶ ನೀಡಿದೆ. ರಾಮಣ್ಣ ತಳೇವಾಡ ಹಾಗೂ ಆಡಳಿತ ಮಂಡಳಿ ಎಸಗಿದ್ದು ಶಿಕ್ಷಾರ್ಹ ಅಪರಾಧ. ಸೆಕ್ಷನ್ 405, 406, 409, 415, 417, 420ರಡಿ ಅಪರಾಧ ಪ್ರಕರಣದ ಶಿಸ್ತುಬದ್ಧ ತನಿಖೆ ನಡೆಸಲು ಬಾಗಲಕೋಟೆಯ ನವನಗರ ಠಾಣೆಯ ಸಿಪಿಐಗೆ ಕೋರ್ಟ್ ಆದೇಶ ನೀಡಿದೆ.
ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದೆ. 12 ಕೋಟಿ ರೂ. ಸಾಲ ಪಡೆದು ದುರ್ಬಳಕೆ ಆರೋಪ ಸಂಬಂಧ ಜಿಲ್ಲಾ ಸಿಜೆಎಮ್ ಕೋರ್ಟ್ನಲ್ಲಿ 2021ರ ಅಕ್ಟೋಬರ್ 7ರಂದು ಖಾಸಗಿ ದೂರು ದಾಖಲಾಗಿತ್ತು. ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶಿವಪ್ಪ ಮಿರ್ಜಿ ಕೇಸ್ ದಾಖಲಿಸಿದ್ದರು. ಈ ಸಂಬಂಧ ಈಗ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿದ್ದ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ; ತೀವ್ರ ಆಕ್ರೋಶ