ಅಲರ್ಟ್​ ಆದ ಬಾಗಲಕೋಟೆ ಆರೋಗ್ಯ ಇಲಾಖೆ: ನಿಫಾ ವೈರಸ್​​ ಬಗ್ಗೆ ಜನರಲ್ಲಿ ಜಾಗೃತಿ

ಮೂರು ವರ್ಷಗಳ ಕಾಲ ಕೋವಿಡ್​​ ಮಹಾಮಾರಿ ಜನರ ಜೀವ ಹಿಂಡಿದೆ. ಈ ವರ್ಷ ಮದ್ರಾಸ್ ಐ ಕೂಡ ಜನರಿಗೆ ಇನ್ನಿಲ್ಲದ ಕಿರಿಕಿ ಉಂಟು ‌ಮಾಡಿದೆ. ಆದರೆ ಇದೀಗ ನಿಫಾ ಪರ ರಾಜ್ಯದಲ್ಲಿ ಜೀವ ಬಲಿ ಪಡೆದಿದ್ದು, ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಅದೇ ರೀತಿಯಾಗಿ ಬಾಗಲಕೋಟೆ ಜಿಲ್ಲೆಯಲ್ಲೂ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಮುಂಜಾಗ್ರತ ಕ್ರಮ ಕೈಗೊಂಡಿದೆ.

ಅಲರ್ಟ್​ ಆದ ಬಾಗಲಕೋಟೆ ಆರೋಗ್ಯ ಇಲಾಖೆ: ನಿಫಾ ವೈರಸ್​​ ಬಗ್ಗೆ ಜನರಲ್ಲಿ ಜಾಗೃತಿ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2023 | 10:59 PM

ಬಾಗಲಕೋಟೆ, ಸೆಪ್ಟೆಂಬರ್​ 15: ಇಷ್ಟು ದಿನ ಜನರ ಜೀವ ಜೊತೆ ಚೆಲ್ಲಾಟವಾಡಿದ ಕೋವಿಡ್​​ನಿಂದ ಇದೀಗ ಜನರು ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಿಫಾ (Nipah virus) ಜನರ ಜೀವ ಭೇಟೆಯಾಡಲು ಬರುತ್ತಿದೆ. ಕೇರಳದಲ್ಲಿ ತನ್ನ ಪ್ರಭಾವ ಬೀರಿರುವ ನಿಫಾ ಇದೀಗ ರಾಜ್ಯಕ್ಕೆ ವಕ್ಕರಿಸುತ್ತಿದೆ. ಹಾಗಾಗಿ ಬಾಗಲಕೋಟೆ ಜಿಲ್ಲೆಯಲ್ಲೂ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಯ ಒಂದು ವಾರ್ಡ್, ಐಸೊಲೇಶನ್ ವಾರ್ಡ್, ನಾಲ್ಕು ಐಸಿಯು ಬೆಡ್, ವಿತ್ ವೆಂಟಿಲೇಟರ್ ಎಲ್ಲವನ್ನೂ ಸಿದ್ದಪಡಿಸಲಾಗಿದೆ. ಜೊತೆಗೆ ಇದರ ಲಕ್ಷಣಗಳು ಉಸಿರಾಟ ತೊಂದರೆ, ಕೆಮ್ಮು, ಜ್ವತ, ಅರೆಪ್ರಜ್ಞಾವಸ್ಥೆ, ವಾಂತಿ, ಮೈಕೈ-ನೋವು ಕಾಣಿಸಿಕೊಳ್ಳಲಿದ್ದು, ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕೆಂದು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ನಿಫಾ ಬಗ್ಗೆ ಅಷ್ಟು ಸರಳವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ ಬಾಗಲಕೋಟೆ ಜಿಲ್ಲೆಯಿಂದ ಉಡುಪಿ, ಮಂಗಳೂರಿಗೆ ದುಡಿಯೋದಕ್ಕೆ ಹೋಗುವ ಜನರು ಸಾಕಷ್ಟಿದ್ದಾರೆ. ದುಡಿಯೋದಕ್ಕೆ ಕಾರ್ಮಿಕರು ಹೋಗೋದು ಬರೋದು ಹೆಚ್ಚಿರುವುದರಿಂದ ಸ್ಥಳೀಯ ಮಟ್ಟದಲ್ಲೂ ಸ್ಕ್ರೀನಿಂಗ್ ಮಾಡೋದಕ್ಕೆ‌ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Drought: ಬೆಳಗಾವಿ -ಬಾಗಲಕೋಟೆ ಜಿಲ್ಲೆಗಳಲ್ಲಿ ಬರದ ನರಕ ದರ್ಶ‌ನ, ಕೃಷಿ ಭೂಮಿಗಳು ಒಣಒಣ ಭಣಭಣ, ಇಲ್ಲಿದೆ ಸಂಪೂರ್ಣ ವರದಿ

ಕೇರಳ,ಮಂಗಳೂರು,ಉಡುಪಿಯಿಂದ ಬರುವವರಿಗೆ ತಪಾಸಣೆ. ಲಕ್ಷಣ ಕಂಡುಬಂದಲ್ಲಿ ಹೋಮ್‌ ಐಸೊಲೇಶನ್ ಮಾಡೋದಕ್ಕೆ ಮುಂದಾಗಿದ್ದಾರೆ. ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಪ್ರವಾಸಿ ತಾಣದಲ್ಲಿ ಬಾವಲಿಗಳಿದ್ದು, ಅಲ್ಲೂ ವಿಶೇಷ ನಿಗಾ ವಹಿಸಲಾಗಿದೆ. ಹಂದಿ ಸಾಕಾಣಿಕೆಯನ್ನು ಮೂರು ಕಿಮೀ ಊರಿಂದ ಹೊರಗೆ ಮಾಡಲು ಸೂಚನೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರತಿ ತಾಲ್ಲೂಕಾಸ್ಪತ್ರೆಯಲ್ಲಿ ಐದು ಬೆಡ್, ವೆಂಟಿಲೇಟರ್, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಬೆಡ್ ಮೀಸಲಿಡಲಾಗಿದೆ. ಐಸಿಯು,ಇಸಿಜಿ ಆ್ಯಂಟಿ ಬಯೊಟಿಕ್ ಮೆಡಿಸಿನ್ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಡೆಂಗ್ಯೂ ರಥದ ಮೂಲಕ ನಿಫಾ ಬಗ್ಗೆಯೂ ಜಾಗೃತಿ ಮೂಡಿಸುತ್ತೇವೆ. ಆರೋಗ್ಯ ಇಲಾಖೆ ಎಲ್ಲ ಅಧಿಕಾರಿಗಳಿಗೂ ಸಿಬ್ಬಂದಿಗೂ ಈ ಆಪರೇಷನ್ ಬಗ್ಗೆ ತರಬೇತಿ ನೀಡುತ್ತಿದ್ದೇವೆ ಅಂತಿದ್ದಾರೆ ಆರೋಗ್ಯಾಧಿಕಾರಿಗಳು.

ಇದನ್ನೂ ಓದಿ: ಹಕ್ಕು ಪತ್ರ ನೀಡಲು ವಿಳಂಬ ಧೋರಣೆ, ಮೂಲ‌ ಮನೆ‌ ಬಿಟ್ಟು ಬಾರದ ಸಂತ್ರಸ್ತರು: ಸರ್ಕಾರಿ ಹಣ ನೀರಲ್ಲಿ ಹೋಮ

ನಿಫಾ ಜಿಲ್ಲೆಗೆ ವಕ್ಕರಿಸುವ ಮೊದಲೇ ಆರೋಗ್ಯ ಇಲಾಖೆ ಎಚ್ಚೆತ್ತಿದ್ದು, ಮುಂಜಾಗ್ರತಾ ಕ್ರಮ ಭರದಿಂದ ಸಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.