ಹಲ್ಲೆಗೊಳಗಾದ ಬಾಗಲಕೋಟೆ ವಕೀಲೆ ಪರ ವಕೀಲರ ಬೃಹತ್ ಪ್ರತಿಭಟನೆ ಬೆನ್ನಲ್ಲೇ ವಕೀಲೆಯ ಇನ್ನೊಂದು ಮುಖ ಬಯಲು; ವಿಡಿಯೋ ವೈರಲ್
ಇಂದು ವಕೀಲೆ ಸಂಗೀತಾ ಪರ ಬಾಗಲಕೋಟೆ ಜಿಲ್ಲಾದ್ಯಂತ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ಆರೋಪಿ ಮಹಾಂತೇಶ್ ಪರ ಯಾರೂ ವಕಾಲತ್ತು ವಹಿಸಬಾರದೆಂದು ಸ್ವಯಂಪ್ರೇರಿತವಾಗಿ ನಿರ್ಧಾರ ಕೈಗೊಂಡಿದ್ದಾರೆ.

ಬಾಗಲಕೋಟೆಯಲ್ಲಿ ಮೇ 14ರಂದು ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ್ ಚೊಳಚಗುಡ್ಡ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಮಾಡಿದ್ದು, ರಾಜ್ಯ, ದೇಶಾದ್ಯಂತ ಗಮನ ಸೆಳೆದಿದೆ. ಪೊಲೀಸರಿಗೆ ತನ್ನ ಪಕ್ಕದ ಮನೆ ತೋರಿಸಿದ ಅಂತ ಶುರುವಾದ ಜಗಳ ವಕೀಲೆ ಹಾಗೂ ಮಹಾಂತೇಶ್ ಮಧ್ಯೆ ಮಾರಾಮಾರಿಗೆ ಕಾರಣವಾಗಿತ್ತು. ಕೆರೂಡಿ ಆಸ್ಪತ್ರೆ ಬಡಾವಣೆಯಲ್ಲಿ ಮಹಾಂತೇಶ್ ಚೊಳಚಗುಡ್ಡ ಗಿಫ್ಟ್ ಸೆಂಟರ್ ಮುಂದೆ ವಕೀಲೆ ಸಂಗೀತಾ ಶಿಕ್ಕೇರಿಯನ್ನು ಒದ್ದು ಅಟ್ಟಾಡಿಸಿ ಹಲ್ಲೆ ಮಾಡಿದ್ದ. ಇದು ಎಂಟು ಸೆಕೆಂಡ್ ವಿಡಿಯೋದಲ್ಲಿ ಸೆರೆಯಾಗಿತ್ತು.
ಆದರೆ ಇದಕ್ಕೂ ಮುನ್ನ ವಕೀಲೆ ಗಿಫ್ಟ್ ಸೆಂಟರ್ ಮುಂದೆ ಕೂತ ಮಹಾಂತೇಶ್ ಚೊಳಚಗುಡ್ಡಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿ ಪೊಲೀಸರಿಗೆ ಯಾಕೆ ಮನೆ ತೋರಿಸಿದೆ ಅಂತ ಜನರ ಮುಂದೆ ಚಪ್ಪಲಿ ಏಟಿನಿಂದ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾಳೆ. ಪತಿ ಮೈದುನನ ಜೊತೆ ಬಂದು ಹಲ್ಲೆ ಮಾಡಿದ್ದಾಳೆ. ಇದರಿಂದ ತಾಳ್ಮೆ ಕಳೆದುಕೊಂಡ ಮಹಾಂತೇಶ್, ವಕೀಲೆ ಮೇಲೆ ಹಲ್ಲೆ ಮಾಡಿದ್ದಾನೆ. ಮಹಾಂತೇಶ್ ಮೇಲೆ ಹಲ್ಲೆಯಾಗಿದ್ದಕ್ಕೂ ದೂರು ನೀಡಿದ್ದೇವೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಾಂತೇಶ್ ಪತ್ನಿ ಸುಜಾತಾ, ಸಹೋದರ ಯಲ್ಲಪ್ಪ ಚೊಳಚಗುಡ್ಡ ಎಸ್ಪಿ ಅವರಿಗೆ ಆಗ್ರಹಿಸಿದ್ದಾರೆ.
ಇಂದು ವಕೀಲೆ ಪರ ವಕೀಲರ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಹೊರಬಿದ್ದ ವಕೀಲೆ ದಬ್ಬಾಳಿಕೆ ವಿಡಿಯೋ ಇನ್ನು ಇಂದು ವಕೀಲೆ ಸಂಗೀತಾ ಪರ ಬಾಗಲಕೋಟೆ ಜಿಲ್ಲಾದ್ಯಂತ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ಆರೋಪಿ ಮಹಾಂತೇಶ್ ಪರ ಯಾರೂ ವಕಾಲತ್ತು ವಹಿಸಬಾರದೆಂದು ಸ್ವಯಂಪ್ರೇರಿತವಾಗಿ ನಿರ್ಧಾರ ಕೈಗೊಂಡಿದ್ದಾರೆ. ಹಲ್ಲೆ ಮಾಡಲು ಪ್ರಚೋಧನೆ ನೀಡಿದ ಉಳಿದ ನಾಲ್ವರು ಆರೋಪಿಗಳನ್ನು ಕೂಡಲೆ ಬಂಧಿಸಬೇಕೆಂದು ಕೋರ್ಟ್ ನಿಂದ ಪ್ರತಿಭಟನೆ ಶುರು ಮಾಡಿ ಡಿಸಿ ಕಚೇರಿ ತಲುಪಿ ಡಿಸಿ ಅವರಿಗೂ ಮನವಿ ಮಾಡಿದ್ದಾರೆ.
ಇದೇ ವೇಳೆ ವಕೀಲೆ ಸಂಗೀತಾ ಶಿಕ್ಕೇರಿ ದರ್ಪ, ದಬ್ಬಾಳಿಕೆ ವಿಡಿಯೋ ವೈರಲ್ ಆಗಿದೆ. ಸಂಗೀತಾ ಶಿಕ್ಕೇರಿ ಅವರ ಪಕ್ಕದ ಮನೆ ಕೋಟೆ ಎಂಬುವರ ಮನೆಯ ಹೆಣ್ಣುಮಕ್ಕಳ ಜೊತೆ ಜಗಳ ಹಾಗೂ ದಬ್ಬಾಳಿಕೆ ಮಾಡುವ, ಆವಾಜ್ ಹಾಕುವ ವಿಡಿಯೋ ಎಲ್ಲೆಡೆ ಹರಿಬಿಡಲಾಗಿದೆ. ಇದು ವಕೀಲೆಯ ಅಸಲಿ ಮುಖ ಹೇಗಿದೆ ಎಂದು ತೋರಿಸುತ್ತದೆ ಎಂದು ಮಹಾಂತೇಶ್ ಸಹೋದರ ಯಲ್ಲಪ್ಪ ಚೊಳಚಗುಡ್ಡ ಹೇಳಿದರು. ಒಟ್ಟಾರೆ ಒಂದು ಕಡೆ ಪ್ರತಿಭಟನೆ ನಡೆಯುತ್ತಿದ್ದರೆ ಇನ್ನೊಂದು ಕಡೆ ವಕೀಲೆಯ ಇತಿಹಾಸ ಆಕೆಯ ದಬ್ಬಾಳಿಕೆ ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಸಂಗೀತಾ ಶಿಕ್ಕೇರಿ ಅವರ ಪಕ್ಕದ ಮನೆ ಕೋಟೆ ಎಂಬುವರ ಮನೆಯ ಹೆಣ್ಣುಮಕ್ಕಳ ಜೊತೆ ಜಗಳ ಹಾಗೂ ದಬ್ಬಾಳಿಕೆ ಮಾಡುವ, ಆವಾಜ್ ಹಾಕುವ ವಿಡಿಯೋ ಎಲ್ಲೆಡೆ
ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ
Published On - 5:11 pm, Mon, 16 May 22