Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಎಗ್ಗಿಲ್ಲದೆ ಸಾಗುತ್ತಿದೆ ಮಣ್ಣು ಗಣಿಗಾರಿಕೆ: ಮನಬಂದಂತೆ ಅಗೆದು ಬೆಟ್ಟ ನೆಲಸಮ

Bagalkote News: ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ, ಸೀಮಿಕೇರಿ ಗದ್ದನಕೇರಿ ವ್ಯಾಪ್ತಿಯಲ್ಲಿ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಸರಕಾರಿ ಜಾಗೆಯಲ್ಲಿ ಬೆಟ್ಟ, ಗುಡ್ಡ ಅಗೆದು ಮಣ್ಣು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಖಾಸಗಿ ಜಮೀನುಗಳ ಭೂಮಿ ಒಡಲನ್ನು ಅಗೆದು ಮಣ್ಣು ದಂದೆ ಸಾಗಾಣಿಕೆ‌ ಮಾಡುತ್ತಿದ್ದಾರೆ.

ಬಾಗಲಕೋಟೆ: ಎಗ್ಗಿಲ್ಲದೆ ಸಾಗುತ್ತಿದೆ ಮಣ್ಣು ಗಣಿಗಾರಿಕೆ: ಮನಬಂದಂತೆ ಅಗೆದು ಬೆಟ್ಟ ನೆಲಸಮ
ಮಣ್ಣು ಗಣಿಗಾರಿಕೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2023 | 4:43 PM

ಬಾಗಲಕೋಟೆ, ಅಕ್ಟೋಬರ್​ 04: ಆ‌ ನಗರದ ಸುತ್ತಮುತ್ತ ಗುಡ್ಡಬೆಟ್ಟಗಳಿವೆ. ಕೆಲ‌ವರ ಖಾಸಗಿ ಜಮೀನುಗಳು ಕೂಡ ಬೆಟ್ಟದ ರೀತಿಯಲ್ಲೇ ಇವೆ. ಆದರೆ ಇಂತಹ ಜಾಗದಲ್ಲಿ ಮಣ್ಣು ಗಣಿಗಾರಿಕೆ (mud mining) ಎಗ್ಗಿಲ್ಲದೆ ಸಾಗುತ್ತಿದೆ. ಕೆಲವರು ನಿಯಮ ಪಾಲಿಸಿದರೆ ಬಹುತೇಕರು ನಿಯಮ ಉಲ್ಲಂಘಿಸಿ ಮಣ್ಣು ಗಣಿಗಾರಿಕೆ ‌ನಡೆಸುತ್ತಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ, ಸೀಮಿಕೇರಿ ಗದ್ದನಕೇರಿ ವ್ಯಾಪ್ತಿಯಲ್ಲಿ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಸರಕಾರಿ ಜಾಗೆಯಲ್ಲಿ ಬೆಟ್ಟ ಗುಡ್ಡ ಅಗೆದು ಮಣ್ಣು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಖಾಸಗಿ ಜಮೀನುಗಳ ಭೂಮಿ ಒಡಲನ್ನು ಅಗೆದು ಮಣ್ಣು ದಂದೆ ಸಾಗಾಣಿಕೆ‌ ಮಾಡುತ್ತಿದ್ದಾರೆ.

ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಜೊತೆಗೆ ಇತರೆ ಖಾಸಗಿ ಕೆಲಸಕ್ಕೂ ಮಣ್ಣು ಸಾಗಾಣಿಕೆ ‌ನಡೆಯುತ್ತಿದೆ.ಈ ಮಧ್ಯೆ ಹೆದ್ದಾರಿ ಪ್ರಾಧಿಕಾರದಿಂದ ರಾಜಸ್ವ ಸರಿಯಾಗಿ ತುಂಬುತ್ತಿಲ್ಲ ಎಂಬ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.ಈ ಬಗ್ಗೆ ಪರಿಶೀಲನೆ ಆಗಬೇಕು ಜೊತೆಗೆ ಆಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಬೇಕು ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೀರು ಬೇಡ ನೀರು ಬೇಕು: ಮದ್ಯ ನಿಷೇಧ, ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ವಿರೋಧ, ಮಹಿಳೆಯರ ಪ್ರತಿಭಟನೆ

ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗುಡ್ಡ, ಗದ್ದನಕೇರಿ ವ್ಯಾಪ್ತಿಯ ಗುಡ್ಡದ ಜಾಗದಲ್ಲಿ ಅನೇಕ ವರ್ಷಗಳಿಂದ ಮಣ್ಣು ಗಣಿಗಾರಿಕೆ ನಡೆಯುತ್ತಲೇ ಇದೆ. ಆಕ್ರಮ ಮಣ್ಣು ಗಣಿಗಾರಿಕೆಯಿಂದ ಗುಡ್ಡದ ಲಕ್ಷಣಗಳೇ ಬದಲಾಗಿವೆ. ಆದರೆ ಇಷ್ಟೆಲ್ಲ ಆಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಯಾವುದೇ ‌ಕಠಿಣ ಕ್ರಮ ‌ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಕೆಲವೊಂದು ವಾಹನ ಹಿಡಿದು ಕೇಸ್ ಹಾಕೋದನ್ನು ಬಿಟ್ಟರೆ ಶಾಸ್ವತವಾಗಿ ಇದನ್ನು ಬಂದ್ ‌ಮಾಡುವ ಕೆಲಸ ನಡೆಯುತ್ತಿಲ್ಲ.

ಇದನ್ನೂ ಓದಿ: ಬಾಗಲಕೋಟೆ: ಸರ್ಕಾರಕ್ಕೆ ಸೆಡ್ಡು ಹೊಡೆದು ಕಂಕನವಾಡಿ ರೈತರಿಂದ ಬ್ಯಾರಲ್ ತೇಲುಸೇತುವೆ ನಿರ್ಮಾಣ

ಮಣ್ಣು ಸಾಗಾಣಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಅವರು ನಮ್ಮ ಇಲಾಖೆಗೆ ರಾಜಧನ ಕಟ್ಟಿಯೇ ಮಣ್ಣನ್ನು ರಸ್ತೆಗೆ ಸಾಗಿಸಿಕೊಳ್ಳುತ್ತಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಹಾಗೂ ಗದ್ದನಕೇರಿ ಕ್ರಾಸ್ ಎರಡು ಕಡೆ ಅವರು ಮಣ್ಣನ್ನು ಖಾಸಗಿ ವ್ಯಕ್ತಿಗಳಿಂದ ಪಡೆಯುತ್ತಿದ್ದಾರೆ. ಒಟ್ಟು 14 ಸಾವಿರದ 744 ಟನ್ ಮೊಹರಂ ಮಣ್ಣು ಸಾಗಿಸಿದ್ದು, ಇದಕ್ಕೆ 15 ಲಕ್ಷ 77 ಸಾವಿರ ರೂ ರಾಜಸ್ವ ಕಟ್ಟಿದ್ದಾರೆ. ಉಳಿದಂತೆ ಮುಚಖಂಡಿ ಸೇರಿದಂತೆ ಇತರೆ ಜಾಗದಲ್ಲಿ ಆಕ್ರಮ‌ ಮಣ್ಣು ಗಣಿಗಾರಿಕೆ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಂತಾರೆ.

ನಗರದ ಸುತ್ತಮುತ್ತ ಅಕ್ರಮ ಮಣ್ಣು ದಂದೆ ಸಾಗಿಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇದಕ್ಕೆ ಕಡಿವಾಣ ಹಾಕಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!