ಮಳೆ ಅವಾಂತರ: ಕಾಳಜಿ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಮಹಿಳೆಯರ ಕಣ್ಣೀರು

ಅಪೆಂಡಿಕ್ಸ್ (Appendix) ಆಪರೇಷನ್ ಗಾಯ ಆರುವ ಮುನ್ನ ಪ್ರವಾಹ ವಕ್ಕರಿಸಿತು. ಪೂರ್ಣ ಗುಣಮುಖ ಆಗಿಲ್ಲ. ವಿಶ್ರಾಂತಿ ವೇಳೆ ನೀರು ಮನೆಗೆ ನುಗ್ಗಿತು ಅಂತ ಕಲಾದಗಿ ಗ್ರಾಮದ ರಮೀಜಾ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಳೆ ಅವಾಂತರ: ಕಾಳಜಿ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಮಹಿಳೆಯರ ಕಣ್ಣೀರು
ನೆರೆ ಸಂತ್ರಸ್ತರು

ಬಾಗಲಕೋಟೆ: ಘಟಪ್ರಭಾ ನದಿ (Ghataprabha River) ಪ್ರವಾಹದಿಂದ ಜಿಲ್ಲೆಯ ಜನರ ಪರಿಸ್ಥಿತಿ ಹೀನಾಯವಾಗಿದೆ. ಕಾಳಜಿ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ನೆರೆ ಸಂತ್ರಸ್ತರು ಪ್ರವಾಹದಿಂದಾಗಿ ರಾತ್ರೋರಾತ್ರಿ ಮನೆ ಬಿಟ್ಟು ಬಂದಿದ್ದಾರೆ. ಸದ್ಯ ನೀರು ಇಳಿದರೂ ಮನೆಗೆ ಹೋಗಲು ಭಯವಾಗುತ್ತಿದೆ ಅಂತ ಸಂತ್ರಸ್ತರು ಹೇಳುತ್ತಿದ್ದಾರೆ.

ಮಹಿಳೆಯ ಕರುಣಾಜನಕ ಕಥೆ
ಅಪೆಂಡಿಕ್ಸ್ (Appendix) ಆಪರೇಷನ್ ಗಾಯ ಆರುವ ಮುನ್ನ ಪ್ರವಾಹ ವಕ್ಕರಿಸಿತು. ಪೂರ್ಣ ಗುಣಮುಖ ಆಗಿಲ್ಲ. ವಿಶ್ರಾಂತಿ ವೇಳೆ ನೀರು ಮನೆಗೆ ನುಗ್ಗಿತು ಅಂತ ಕಲಾದಗಿ ಗ್ರಾಮದ ರಮೀಜಾ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. 2019 ರಲ್ಲಿ ಹಣ್ಣು ವ್ಯಾಪಾರಕ್ಕೆ ಬಡ್ಡಿಗೆ ತಂದ ಒಂದುವರೆ ಲಕ್ಷ ರೂಪಾಯಿ ಪ್ರವಾಹದಲ್ಲಿ ಕೊಚ್ಚಿ ಹೋಯ್ತು. ಅಪೆಂಡಿಕ್ಸ್ ಆಪರೇಷನ್ಗೆ ಐವತ್ತು ಸಾವಿರ ಖರ್ಚಾಗಿದೆ. ಮನೆಯಲ್ಲಿನ ವಸ್ತುಗಳು ನೆನೆದು ಹಾಳಾಗಿವೆ. ಮೇಲಿಂದ ಮೇಲೆ ಹೀಗಾದರೆ ಹೇಗೆ ಬದುಕಬೇಕು? ನಮ್ಮ ಗೋಳನ್ನು ಯಾರು ಕೇಳುತ್ತಾರೆ? ಅಂತ ಪ್ರಶ್ನಿಸಿದ ಮಹಿಳೆ, ನಮ್ಮನ್ನು ಸ್ಥಳಾಂತರ ಮಾಡಿ ಪ್ರವಾಹದಿಂದ ಮುಕ್ತಿ ನೀಡಿ ಎಂದು ಆಗ್ರಹಿಸಿದ್ದಾರೆ.

ಪ್ರತಿ ವರ್ಷ ಪ್ರವಾಹದಿಂದ ನಮಗೆ ಬದುಕೇ ಸಾಕಾಗಿದೆ. ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಅಲೆದಾಡುವುದು ಸಾಕಾಗಿದೆ. ಸರ್ಕಾರ ನಮಗೆ ಒಂದು ನೆಲೆಯನ್ನು ಕೊಡಬೇಕು. ನಮಗೆ ಪುನರ್ವಸತಿ ಕೇಂದ್ರದಲ್ಲೂ ಜಾಗ ಕೊಟ್ಟಿಲ್ಲ. ನಮ್ಮ ಮನೆಗಳೆಲ್ಲ ಈಗಾಗಲೇ ನೀರಿನಲ್ಲಿ ಮುಳುಗಿವೆ. ನೆರೆ ಬಳಿಕ ಯಾರೂ ನಮ್ಮನ್ನು ಕೇರ್ ಮಾಡುವುದಿಲ್ಲ ಅಂತ ಕಾಳಜಿ ಕೇಂದ್ರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.

ಪಂಪ್ ಸೆಟ್​ಗಾಗಿ 5-6 ಕಿ.ಮೀ. ಈಜುತ್ತಾ ಬಂದ ರೈತರು
ಘಟಪ್ರಭಾ ಪ್ರವಾಹಕ್ಕೆ ಪಂಪ್ ಸೆಟ್​ಗಳು ಕೊಚ್ಚಿ ಹೋಗಿದ್ದು, ಮುಧೋಳ ಭಾಗದ ರೈತರು ಪರದಾಡುತ್ತಿದ್ದಾರೆ. ಜಮೀನಿಗೆ ನೀರು ಸಾಗಿಸಲು ಅಳವಡಿಸಿದ್ದ ಪಂಪ್ ಸೆಟ್​ಗಳು ಕೊಚ್ಚಿ ಹೋಗಿವೆ. ಹೀಗಾಗಿ ಘಟಪ್ರಭಾ ನದಿ, ಅಕ್ಕಪಕ್ಕದ ಹೊಲದಲ್ಲಿ ರೈತರು ಈಜುತ್ತಾ 5-6 ಕಿ.ಮೀ. ಬಂದಿದ್ದಾರೆ.

5-6 ಕಿ.ಮೀ. ಈಜುತ್ತಾ ಬಂದ ರೈತರು

ಇದನ್ನೂ ಓದಿ

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ; ಸೂರಿಲ್ಲದೆ ಕಣ್ಣೀರು ಹಾಕಿದ ವೃದ್ಧ ದಂಪತಿ

ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹ; ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ: ಬಸವರಾಜ ಬೊಮ್ಮಾಯಿ ಘೋಷಣೆ

(Bagalkot people are struggling with the flood of Ghataprabha river)

Click on your DTH Provider to Add TV9 Kannada