ಯುವ ಕಾಂಗ್ರೆಸ್ ಅಧ್ಯಕ್ಷನ ಕೊಲೆ ಸುಪಾರಿ: ಆರೋಪಿಗಳು ಪೊಲೀಸರ ಬಲೆಗೆ
ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಡಾಕನ್ನವರ್ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಂಗ್ಲಿ ಮೂಲದ ಅತುಲ್ ಜಾಧವ್, ವಿನಾಯಕ್ ಪುಣೇಕರ್ ಮತ್ತು ಜಹಾಂಗೀರ್ ಶೇಕ್ ಬಂಧಿತರು. ಜಹಾಂಗೀರ್ 10 ಲಕ್ಷ ರೂ. ಸುಪಾರಿ ನೀಡಿದ್ದಾನೆ ಎಂಬ ಆರೋಪವಿದೆ. ಹುಬ್ಬಳ್ಳಿಯಲ್ಲಿ ಪ್ರೇಮ ಸಂಬಂಧದ ಜಗಳದಲ್ಲಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ.

ಬಾಗಲಕೋಟೆ, ಜುಲೈ 30: ಬಾಗಲಕೋಟೆ (Bagalkot) ಜಿಲ್ಲಾ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಕುಮಾರ್ ಡಾಕನ್ನವರ್ ಅವರ ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳನ್ನು ಜಮಖಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಂಗ್ಲಿ ಮೂಲದ ಅತುಲ್ ಜಾಧವ್, ವಿನಾಯಕ್ ಪುಣೇಕರ್ ಮತ್ತು ಜಹಾಂಗೀರ್ ಶೇಕ್ನನ್ನು ಬಂಧಿತ ಆರೋಪಿಗಳು. ಕುಮಾರ್ ಡಾಕನ್ನವರ್ ಅವರ ಕೊಲೆಗೆ ಜಹಾಂಗೀರ್ ಶೇಕ್ 10 ಲಕ್ಷ ರೂ.ಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಮೂವರೂ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರೀತಿ ವಿಚಾರಕ್ಕೆ ಗಲಾಟೆ, ಯುವಕನಿಗೆ ಚಾಕು ಇರಿತ
ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಯುವಕನಿಗೆ ಯುವತಿಯ ಚಿಕ್ಕಪ್ಪ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಸದರಸೋಪಾ ಓಣಿಯಲ್ಲಿ ನಡೆದಿದೆ. ಗೌಸ್ ಮೊಹಿದ್ದೀನ್ಗೆ ಚಾಕು ಇರಿತಕ್ಕೆ ಒಳಗಾದ ಯುವಕ. ಗೌಸ್ ಮೊಹಿದ್ದೀನ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದರು. ಯುವತಿ ಮಂಗಳವಾರ (ಜು.30) ರಾತ್ರಿ ಕರೆ ಮಾಡಿ ಗೌಸ್ ಮೊಹಿದ್ದೀನ್ನನ್ನು ಮಳೆ ಬಳಿ ಕರೆಸಿಕೊಂಡಿದ್ದಾಳೆ. ಗೌಸ್ ಮೊಹಿದ್ದೀನ್ ಮನೆ ಬಳಿ ಬರುತ್ತಿದ್ದಂತೆ “ನಮ್ಮ ಮನೆ ಹುಡುಗಿಯನ್ನು ಪ್ರೀತಿಸುತ್ತಿಯಾ” ಅಂತ ಯುವತಿ ಚಿಕ್ಕಪ್ಪ ವಸೀಂ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ವಸೀಂನನ್ನು ಪೊಲೀಸರು ಬಂಧಿಸಿದ್ದು, ಯುವತಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಬ್ಬರು ನಟೋರಿಯಸ್ ಕಳ್ಳರ ಬಂಧನ
ನೆಲಮಂಗಲ: ನೆಲಮಂಗಲ ಟೌನ್ ಪೊಲೀಸರು ಇಬ್ಬರು ನಟೋರಿಯಸ್ ಕಳ್ಳರನ್ನು ಬಂಧಸಿದ್ದಾರೆ. ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್, ಯತೀಶ್ ಬಂಧಿತರು. ಆರೋಪಿಗಳು ನೆಲಮಂಗಲದಲ್ಲಿನ ಓರ್ವ ಇಂಜಿನಿಯರ್ ಮನೆಯಲ್ಲಿನ 56 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದರು. ಪೊಲೀಸರು ಬಂಧಿತರಿಂದ 343 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು 25-26 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಲವರ್ಸ್ ಜೊತೆ ಗೋವಾಕ್ಕೆ ಹೋಗಲು ಹಣ ಇಲ್ಲದೆ ಕಳ್ಳತನದ ಹಾದಿ ಹಿಡಿದ ವಿದ್ಯಾರ್ಥಿಗಳು
ಪಿಕ್ ಪಾಕೆಟ್ ಮಾಡ್ತಿದ್ದ ಮಹಿಳೆಯರ ಬಂಧನ
ಬೆಂಗಳೂರು: ಬುರ್ಖಾ ಧರಿಸಿ ಬಸ್ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಪದ್ಮ, ಅನು ಮತ್ತು ಪ್ರಾರ್ಥನಾ ಬಂಧಿತ ಆರೋಪಿಗಳು. ಬಂಧಿತ ನಾಲ್ವರು ಆರೋಪಿಗಳ ಬಳಿ ಇದ್ದ 190 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಹತ್ತುವ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದರು. ಮಹಿಳೆಯರು ಬಸ್ ಹತ್ತುವಾಗ ಆರೋಪಿಗಳು ಅವರ ಬ್ಯಾಗ್ ಜಿಪ್ ತೆರೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Wed, 30 July 25




