ನವಜಾತ ಶಿಶು ರಸ್ತೆಯಲ್ಲಿ ಬಿಟ್ಟುಹೋಗಿದ್ದ ಮಹಿಳೆಗೆ ಜೈಲು ಶಿಕ್ಷೆ: 10 ಸಾವಿರ ರೂ ದಂಡ
ನವಜಾತ ಶಿಶುವನ್ನು ಓರ್ವ ಮಹಿಳೆ ರಸ್ತೆಯಲ್ಲಿ ಬಿಟ್ಟುಹೋಗಿದ್ದರು. ಈ ಕೃತ್ಯಕ್ಕಾಗಿ ಮಹಿಳೆಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಸೇರಿದಂತೆ ಹತ್ತು ಸಾವಿರ ರೂ ದಂಡ ವಿಧಿಸಿ ಬಾಗಲಕೋಟೆಯ ಜೆಎಂಎಫ್ಸಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. ಪ್ರಕರಣದ ಕುರಿತು ಬಾಗಲಕೋಟೆ ಗ್ರಾಮೀಣ ಪೊಲೀಸರು ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಬಾಗಲಕೋಟೆ, ಜನವರಿ 14: ನವಜಾತ ಶಿಶು (Newborn Baby) ಪಾಲನೆ ಮಾಡದೆ ರಸ್ತೆಯಲ್ಲಿ ಬಿಟ್ಟುಹೋದ ಮಹಿಳೆಗೆ (Woman) ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ಬಾಗಲಕೋಟೆಯ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸಿದ್ದವ್ವ ಹನುಮಂತ ಸಂಗೊಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ನಡೆದದ್ದೇನು?
ಪತಿ ಮೃತಪಟ್ಟ 8 ವರ್ಷಗಳ ನಂತರ ಅನೈತಿಕ ಸಂಬಂಧದಿಂದ ಗರ್ಭಿಣಿಯಾಗಿದ್ದ ಮಹಿಳೆ ಜನಿಸಿದ ಗಂಡು ಮಗುವನ್ನು 2023ರ ಆಗಸ್ಟ್ 6ರಂದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ-ಕಮತಗಿ ರಸ್ತೆಯಲ್ಲಿ ಬಿಟ್ಟುಹೋಗಿದ್ದರು. ಈ ಸಂಬಂಧ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಪಿಎಸ್ಐ ಶರಣಬಸಪ್ಪ ತನಿಖೆ ನಡೆಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಅಭಿಯೋಜಕಿ ಶಾರದಾ ವಾದ ಮಂಡಿಸಿದ್ದರು.
ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಅಲೈನಾ ಲೋಕಾಪುರ(10) ಮೃತ ಬಾಲಕಿ. ಬೀದಿನಾಯಿಗಳ ಹಾವಳಿ ತಡೆಗಟ್ಟಲು ಬಾಗಲಕೋಟೆ ನಗರಸಭೆ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆನೇಕಲ್ ಗೊಲ್ಲಹಳ್ಳಿಯಲ್ಲಿ ದಾರುಣ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು
ಬಾಗಲಕೋಟೆಯಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಡಿಸೆಂಬರ್ 27ರಂದು ಬೀದಿನಾಯಿ ಬಾಲಕಿ ಅಲೈನಾ ಮೇಲೆ ದಾಳಿ ಮಾಡಿತ್ತು ಬಾಗಲಕೋಟೆಯ ನವನಗರದ ಸೆಕ್ಟರ್ ನಂ.15ರಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ: ಝೀರೋ ಟ್ರಾಫಿಕ್ನಲ್ಲಿ ಕರೆತಂದರೂ ಬದುಕಲಿಲ್ಲ ಜೀವ: ಚಿಕಿತ್ಸೆ ಫಲಿಸದೆ ಕಂದಮ್ಮ ಕೊನೆಯುಸಿರು
ಬಾಲಕಿಯ ಕಣ್ಣು, ಮೂಗು, ಮುಖಕ್ಕೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಬಾಲಕಿಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾಳೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
