ಬಾಗಲಕೋಟೆ: ನದಿ ಒತ್ತುವರಿ: ಹರಿಯುವ ದಿಕ್ಕನ್ನೇ ಬದಲಿಸಿದ ಮಲಪ್ರಭೆ

ಒತ್ತುವರಿ ಮಾಡಿದ ಕಾರಣ ಮಲಪ್ರಭಾ ನದಿ ತನ್ನ ವ್ಯಾಪ್ತಿ ಬಿಟ್ಟು ರೈತರ 551 ಎಕರೆ ವ್ಯಾಪ್ತಿಯ ಜಮೀನಿನಲ್ಲಿ ಹರಿಯುತ್ತಿದೆ. ಈ ಮೂಲಕ ಒತ್ತುವರಿ ಕಾರಣ ತನ್ನ ಮೂಲ ಮಾರ್ಗವನ್ನೇ ಬದಲಿಸುತ್ತಾ ಹೊರಟಿದೆ. ಇದರಿಂದ ಕೇವಲ ಹತ್ತು ಸಾವಿರ ಕ್ಯೂಸೆಕ್ ನೀರು ಬಂದರೆ ಸಾಕು ಮಲಪ್ರಭಾ ‌ನದಿ ಪ್ರವಾಹ ತಂಡೊಡ್ಡಲಿದೆ.

ಬಾಗಲಕೋಟೆ: ನದಿ ಒತ್ತುವರಿ: ಹರಿಯುವ ದಿಕ್ಕನ್ನೇ ಬದಲಿಸಿದ ಮಲಪ್ರಭೆ
ಜಮೀನಿಗೆ ನುಗ್ಗಿದ ಮಲಪ್ರಭಾ ನದಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2023 | 11:00 PM

ಬಾಗಲಕೋಟೆ, ಅಕ್ಟೋಬರ್​​ 14: ಅದು ಎರಡು ಜಿಲ್ಲೆಯ ಜನರ ಜೀವನಾಡಿ ನದಿ. ಇತರೆ ಎರಡು ಜಿಲ್ಲೆಯ ಗಡಿಭಾಗಕ್ಕೂ ಆಸರೆಯಾದ ನದಿ. ಆ ನದಿಯಿಂದ ಜನ ಜಾನುವಾರಿಗೆ ಕುಡಿಯುವ ನೀರು. ಕೃಷಿಗೆ ನೀರಾವರಿ ಆಸರೆಯಾಗುತ್ತದೆ. ಆದರೆ ಅಂತಹ ನದಿಯನ್ನು ಬೇಕಾಬಿಟ್ಟಿ ಒತ್ತುವರಿ (encroachment) ಮಾಡಲಾಗಿದೆ. ಇದರಿಂದ ಎಂತಹ ಪರಿಸ್ಥಿತಿ ಆಗಿದೆ ಅಂದರೆ ಆ ನದಿ ತನ್ನ ಹರಿವಿನ ದಿಕ್ಕನ್ನೇ ಬದಲಿಸುವಂತಾಗಿದೆ. ಸ್ವಲ್ಪ ನೀರು ಬಂದರೆ ಸಾಕು ಪ್ರವಾಹ, ಬೆಳೆ ಜಲಾವೃತವಾಗುವಂತಾಗಿದೆ. ಅಷ್ಟಕ್ಕೂ ಆ ನದಿ ಯಾವುದು? ಹೇಗಿದೆ ಅದರ ಸ್ಥಿತಿ ಇಲ್ಲಿದೆ ಒಂದು ವರದಿ.

ಬೆಳಗಾವಿ ಜಿಲ್ಲೆಯಿಂದ ಧಾರವಾಡ, ಗದಗ ಗಡಿ ಭಾಗ, ನಂತರ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಈ ನದಿ ಒಟ್ಟು 565 ಕಿಮೀ ಇದೆ. ಜಿಲ್ಲೆಯ ಕಣಕುಂಬಿಯಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಕೃಷ್ಣಾ ನದಿಯಲ್ಲಿ ಇದು ಲೀನವಾಗುತ್ತದೆ. ಜಿಲ್ಲೆಯಲ್ಲೇ 75-80 ಕಿಮೀ ಇದರ ಹರಿವು ಇದೆ. ಆದರೆ ಜಿಲ್ಲೆಯಯ ಮಲಪ್ರಭಾ ನದಿಯನ್ನು ಅಕ್ಕಪಕ್ಕದ ರೈತರು ಬೇಲಾಬಿಟ್ಟಿಯಾಗಿ ಒತ್ತುವರಿ ಮಾಡಿದ್ದಾರೆ.

ಇದನ್ನೂ ಓದಿ: ಬರಗಾಲದ ಮಧ್ಯೆ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಬರೆ: ಸಾಲದ ಕಂತು ತುಂಬದ ಹಿನ್ನೆಲೆ ಟ್ರ್ಯಾಕ್ಟರ್ ಜಪ್ತಿ

ಬಾದಾಮಿ, ಹುನಗುಂದ, ಗುಳೇದಗುಡ್ಡ, ಇಳಕಲ್ ನಾಲ್ಕು ತಾಲ್ಲೂಕಿನಲ್ಲಿ ಒಟ್ಟು 425 ಎಕರೆ ಪ್ರದೇಶದಲ್ಲಿ ಮಲಪ್ರಭಾ ನದಿಯನ್ನು ಒತ್ತುವರಿ ‌ಮಾಡಲಾಗಿದೆ. ಈ ರೀತಿ ಒತ್ತುವರಿ ಮಾಡಿದ ಪರಿಣಾಮ ಏನಾಗಿದೆ ಅಂದರೆ ಮಲಪ್ರಭಾ ನದಿ ಹರಿವಿನ ದಿಕ್ಕನ್ನೇ ಬದಲಿಸಿಕೊಂಡಿದೆ. ಒತ್ತುವರಿ ಮಾಡಿದ ಕಾರಣ ಮಲಪ್ರಭಾ ನದಿ ತನ್ನ ವ್ಯಾಪ್ತಿ ಬಿಟ್ಟು ರೈತರ 551 ಎಕರೆ ವ್ಯಾಪ್ತಿಯ ಜಮೀನಿನಲ್ಲಿ ಹರಿಯುತ್ತಿದೆ. ಈ ಮೂಲಕ ಒತ್ತುವರಿ ಕಾರಣ ತನ್ನ ಮೂಲ ಮಾರ್ಗವನ್ನೇ ಬದಲಿಸುತ್ತಾ ಹೊರಟಿದೆ. ಇದರಿಂದ ಕೇವಲ ಹತ್ತು ಸಾವಿರ ಕ್ಯೂಸೆಕ್ ನೀರು ಬಂದರೆ ಸಾಕು ಮಲಪ್ರಭಾ ‌ನದಿ ಪ್ರವಾಹ ತಂಡೊಡ್ಡಲಿದೆ.

ಬಾದಾಮಿ, ಹುನಗುಂದ, ಗುಳೇದಗುಡ್ಡ, ಇಳಕಲಗ ತಾಲ್ಲೂಕಿನ ವ್ಯಾಪ್ತಿಯಲ್ಲಿ 60 ಕ್ಕೂ ಅಧಿಕ ಹಳ್ಳಿಗಳು ಪ್ರವಾಹ ಬಾಧೆಗೆ ಒಳಗಾಗುತ್ತವೆ. ಸಾವಿರಾರು ಎಕರೆ ಪ್ರದೇಶ ಜಲಾವೃತವಾಗುತ್ತದೆ. ಆದ್ದರಿಂದ ಒತ್ತುವರಿ ತೆರವುಗೊಳಿಸಿ ಹೂಳೆತ್ತಬೇಕು ಎಂದು ರೈತರು, ರೈತ ಹೋರಾಟಗಾರರು ಆಗ್ರಹ ಮಾಡುತ್ತಿದ್ದಾರೆ.

ಮಲಪ್ರಭಾ ನದಿ ಪಶ್ಚಿಮ ಘಟ್ಟದ ಪ್ರಕಾರ ಸಮುದ್ರ ಮಟ್ಟದಿಂದ 792 ಮೀ ಎತ್ತರದಲ್ಲಿ ಹುಟ್ಟುತ್ತದೆ. ಪೂರ್ವದಲ್ಲಿ ನಂತರ ಈಶಾನ್ಯ ದಿಕ್ಕಿನಲ್ಲಿ ಹರಿಯುವ ನದಿ ನಂತರ ಕೂಡಲ ಸಂಗಮದಲ್ಲಿ ಕೃಷ್ಣಾ ನದಿಯಲ್ಲಿ ಲೀನವಾಗುತ್ತದೆ. ನದಿಯು 11,549 ಚ ಕಿಮೀ ಜಲಾನಯನ ಪ್ರದೇಶ ಹೊಂದಿದೆ. ಎರಡು ಸಾವಿರ ಚ ಕಿಮೀ ವ್ಯಾಪ್ತಿ ಪ್ರದೇಶದ ಜಮೀನಿಗೆ ಇದು ನೀರುಣಿಸುತ್ತದೆ. ಬೆಣ್ಣೆ ಹಳ್ಳ, ಹಿರೆಹಳ್ಳ, ತುಪರಿಹಳ್ಳ ಇದರ ಉಪನದಿಗಳು ಎಂದು ಕರೆಯಲ್ಪಡುತ್ತವೆ.

ಇದನ್ನೂ ಓದಿ: ಬರ ಎಫೆಕ್ಟ್; ಬಾಗಲಕೋಟೆಯಲ್ಲಿ ಜೋಳ, ರೊಟ್ಟಿ ರೇಟ್ ಡಬಲ್

ಜಿಲ್ಲೆಯ ಐಹೊಳೆ, ಬಾದಾಮಿ, ಪಟ್ಟದಕಲ್ಲು ಐತಿಹಾಸಿಕ ಸ್ಥಳಗಳು ಇದರ ಪಕ್ಕದಲ್ಲಿವೆ. ಮಲಪ್ರಭಾ ನದಿಗೆ ಬೆಳಗಾವಿ ಜಿಲ್ಲೆ ಮುನವಳ್ಳಿ ಬಳಿ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಲಾಗಿದೆ. ಒತ್ತುವರಿ ಕಾರಣ ಹರಿಯುವ ಧಿಕ್ಕನ್ನೇ ಬದಲಿಸಿದ ಮಲಪ್ರಭಾ ನದಿ. 2022 ರಲ್ಲಿ ನದಿ ವ್ಯಾಪ್ತಿ ಒತ್ತುವರಿ ಸರ್ವೆ ಮಾಡಲಾಗಿದೆ. ಬಾದಾಮಿ ತಾಲ್ಲೂಕಿನ 31 ಹಳ್ಳಿಗಳ 680 ಹೊಲಗಳ ಸರ್ವೆ ನಡೆದಿದೆ.

103 ಹೊಲಗಳ ಮಾಲೀಕರು 157 ಎಕರೆ ಒತ್ತುವರಿ ಮಾಡಿದ್ದಾರೆ. ಹುನಗುಂದ ತಾಲ್ಲೂಕಿನ 37 ಗ್ರಾಮಗಳ ಪೈಕಿ, 485 ಸಂಖ್ಯೆಗಳ ಸರ್ವೆ ನಂ‌‌ ನಲ್ಲಿ. 128 ಹೊಲಗಳ ಮಾಲೀಕರಿಂದ 267 ಎಕರೆ ಒತ್ತುವರಿಯಾಗಿದೆ. ಇಳಕಲ್ ತಾಲ್ಲೂಕಿನಲ್ಲಿ 31 ಗುಂಟೆ ಒತ್ತುವರಿಯಾಗಿದೆ. ಒಟ್ಟು 82 ಗ್ರಾಮಗಳನ್ನು ಸರ್ವೆ ಮಾಡಲಾಗಿದೆ. ಇದರಲ್ಲಿ 236 ಸರ್ವೆ ನಂಬರ್ ಗಳಿಂದ ನದಿಯನ್ನು ಒತ್ತುವರಿ ಮಾಡಿದರೆ, 279 ಸರ್ವೆ ನಂಬರ್ ಗಳ ರೈತರ ಜಮೀನಿನಲ್ಲಿ ನದಿ ಹರಿಯುವ ಮೂಲಕ‌ ದಿಕ್ಕು ಬದಲಾಗಿದೆ.

ಬಾಗಲಕೋಟೆ ಭೂಮಾಪನ ಅಧಿಕಾರಿಗಳು 2022 ರಲ್ಲಿ ಸರ್ವೆ ಮಾಡಿ ಬಾಗಲಕೋಟೆ ಡಿಸಿ ಅವರಿಗೆ ಸರ್ವೆ ವರದಿ ಸಲ್ಲಿಸಿದ್ದಾರೆ. ನಂತರ ವರದಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೂ ಸಲ್ಲಿಕೆಯಾಗಿದೆ. ಆದರೆ ಹೂಳೆತ್ತುವ, ಒತ್ತುವರಿ ತೆರವು ಕಾರ್ಯ ಮಾತ್ರ ಆಗಿಲ್ಲ.ಈ ಹಿಂದೆ ಜಲಸಂಪನ್ಮೂಲ‌ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಭರವಸೆ ನೀಡಿದ್ದರು, ಆದರೆ ಅದು ಈಡೇರಿಲ್ಲ. ಒತ್ತುವರಿ ಹಾಗೂ ಹೂಳಿನಿಂದ ನದಿ ಹರಿವಿನ ಧಿಕ್ಕೆ ಬದಲಾಗಿದ್ದು ವಿಪರ್ಯಾಸ.ಸರಕಾರ ನದಿ ಹೂಳೆತ್ತಿ ನದಿಯನ್ನು ರಕ್ಷಣೆ ‌ಮಾಡೋದರ‌ ಜೊತೆಗೆ,ರೈತರ ಭೂಮಿ ನದಿ ತೀರದ ಜನರಿಗೆ ಪ್ರವಾಹ ತಾಪತ್ರಯ ಕಡಿಮೆ‌ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್