ಬರಗಾಲದ ಮಧ್ಯೆ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಬರೆ: ಸಾಲದ ಕಂತು ತುಂಬದ ಹಿನ್ನೆಲೆ ಟ್ರ್ಯಾಕ್ಟರ್ ಜಪ್ತಿ

ಬಾಗಲಕೋಟೆ ಜಿಲ್ಲೆಯಲ್ಲೂ ಬರ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಬ್ಯಾಂಕ್ ಸಿಬ್ಬಂದಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಸಾಲ ಕಟ್ಟಿಲ್ಲ ಅಂತ ರೈತ ಮಹಿಳೆಯ ಟ್ರ್ಯಾಕ್ಟರ್​ನ್ನು ಖಾಸಗಿ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದಲ್ಲಿ ನಡೆದಿದೆ.

ಬರಗಾಲದ ಮಧ್ಯೆ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಬರೆ: ಸಾಲದ ಕಂತು ತುಂಬದ ಹಿನ್ನೆಲೆ ಟ್ರ್ಯಾಕ್ಟರ್ ಜಪ್ತಿ
ಡಿಸಿಗೆ ಮನವಿ ಸಲ್ಲಿಸದ ರೈತರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 14, 2023 | 8:19 PM

ಬಾಗಲಕೋಟೆ, ಅಕ್ಟೋಬರ್​​​ 14: ಈಗಾಗಲೇ ಆ ಜಿಲ್ಲೆಯ ರೈತರನ್ನು ಬರ ಕಂಗಾಲಾಗಿಸಿದೆ. ಬಿತ್ತಿದ ಬೆಳೆ ಒಣಗಿ ಹಾಳಾಗುತ್ತಿವೆ ಸಾಲ ಸೂಲ‌ಮಾಡಿದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಮಧ್ಯೆ ಟ್ರ್ಯಾಕ್ಟರ್ (tractor) ಸಾಲ ಕಟ್ಟಿಲ್ಲ ಅಂತ ರೈತ ಮಹಿಳೆಯ ಟ್ರ್ಯಾಕ್ಟರ್​ನ್ನು ಖಾಸಗಿ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದು ರೈತರಿಗೆ ಗಾಯದ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ. ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಇದೀಗ ಎಲ್ಲ ಕಡೆ ಬರ ಅದರಂತೆ ಬಾಗಲಕೋಟೆ ಜಿಲ್ಲೆಯಲ್ಲೂ ಬರ ತಾಂಡವವಾಡುತ್ತಿದೆ. ಇಂತಹ ವೇಳೆಯಲ್ಲಿ ಖಾಸಗಿ ಬ್ಯಾಂಕ್ ಸಿಬ್ಬಂದಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಸಾಲು ತುಂಬಿಲ್ಲ ಅಂತ ಬಾಡಗಂಡಿ ಗ್ರಾಮದ ಯಲ್ಲವ್ವ ದೊಡ್ಡಮನಿ ಎಂಬ ರೈತ ಮಹಿಳೆಯ ಟ್ರ್ಯಾಕ್ಟರ್ ನ್ನು ಇಂಡಸ್ ಲ್ಯಾಂಡ್ ಬ್ಯಾಂಕ್ ಸಿಬ್ಬಂದಿ 1 ಲಕ್ಷ 30 ಸಾವಿರ ರೂ. ಕಂತು ಕಟ್ಟಿಲ್ಲ ಅಂತ ಜಪ್ತಿ ‌ಮಾಡಿಕೊಂಡು ಹೋಗಿದೆ.

ಇದನ್ನೂ ಓದಿ: ಬರ ಎಫೆಕ್ಟ್; ಬಾಗಲಕೋಟೆಯಲ್ಲಿ ಜೋಳ, ರೊಟ್ಟಿ ರೇಟ್ ಡಬಲ್

ಮನೆಯಲ್ಲಿ ಮಕ್ಕಳು ಇಲ್ಲದ ವೇಳ ಬಂದ ಬ್ಯಾಂಕ್‌ ಸಿಬ್ಬಂದಿ ಟ್ರ್ಯಾಕ್ಟರ್ ಒಯ್ಯಬೇಡಿ‌‌ ಮಕ್ಕಳು ಬರುವವರೆಗೂ ಕಾಯಿರಿ ಎಂದರೂ ಕಾದಿಲ್ಲ. ಕೈ ಮುಗಿದು ಕಾಲು ಹಿಡಿದರೂ ಕೇಳದೆ ದುರ್ವರ್ತನೆ ತೋರಿ ಸೊನಾಲಿಕಾ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಇದರಿಂದ ರೈತ ಮಹಿಳೆ ಹಾಗೂ ಮಗ ದಿಕ್ಕು ತೋಚದೆ ಕೂತಿದ್ದಾರೆ. ಕೇವಲ ಒಂದು ತಿಂಗ ಮಾತ್ರ ಬಾಕಿ ಇತ್ತು. ಯಾವುದೇ ನೊಟೀಸ್ ನೀಡಿಲ್ಲ,ಮೊದಲೇ ಬರ ಬಿದ್ದಿದೆ ಹೇಗೆ ತುಂಬೋದು ಇಷ್ಟು ಮಾಡುವ ಬದಲು ನಮಗೆ ವಿಷ ಕೊಟ್ಟು ಬಿಡಿ ಅಂತಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಎಗ್ಗಿಲ್ಲದೆ ಸಾಗುತ್ತಿದೆ ಮಣ್ಣು ಗಣಿಗಾರಿಕೆ: ಮನಬಂದಂತೆ ಅಗೆದು ಬೆಟ್ಟ ನೆಲಸಮ

ಯಲ್ಲವ್ವ ದೊಡ್ಡಮನಿ ಅವರದ್ದು ಐದು ಎಕರೆ ಹೊಲ‌‌ ಇದೆ. ಐದು ಎಕರೆ ಹೊಲದ ಮೇಲೆ 6 ಲಕ್ಷ ರೂ. ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಒಟ್ಟು ಆರು ಕಂತು ಇದ್ದು, ಐದನೇ ಕಂತು ತುಂಬೋದಕ್ಕೆ ಮೂರು ತಿಂಗಳು ತಡವಾಗಿದೆ. ಮುಂಗಾರು ಮಳೆ ಕೈ ಕೊಟ್ಟ ಕಾರಣ ಮೂರು ಎಕರೆ ಈರುಳ್ಳಿ ಹಾಳಾಗಿದೆ. ಅದನ್ನು ಹರಗಿ ಈಗ ಅದೇ ಜಾಗದಲ್ಲಿ ಜೋಳ ಬಿತ್ತಿದ್ದಾರೆ. ಒಂದು ವೇಳೆ ಈರುಳ್ಳಿ ಮಳೆಯಾಗಿ ಸರಿಯಾಗಿ ಬೆಳೆ ಬಂದಿದ್ದರೆ 5 ಲಕ್ಷ ಲಾಭ ಬರ್ತಿತ್ತು. ಆಗ ಟ್ರ್ಯಾಕ್ಟರ್ ಕಂತು ತುಂಬೋದು ದೊಡ್ಡದಾಗಿರಲಿಲ್ಲ. ಆದರೆ ಪರಿಸ್ಥಿತಿ ಬರದಿಂದ ಚಿಂತಾಜನಕವಾಗಿದೆ.

ಆದರೂ ಇನ್ನೊಂದು ವಾರ ಕಾಲಾವಕಾಶ ಕೇಳಿದ್ದರು. ಆದರೆ ಮನೆಯಲ್ಲಿ ಮಕ್ಕಳು ಇಲ್ಲದ‌ ಸಮಯ ನೋಡಿ ಟ್ರ್ಯಾಕ್ಟರ್ ಒಯ್ದಿದ್ದಾರೆ. ಇದರಿಂದ ನೊಂದ ರೈತಮಹಿಳೆ ಮಗ ನಮಗೆ ಸ್ವಲ್ಪ ಕಾಲಾವಕಾಶ ಕೊಡಿ ಕಂತು ತುಂಬುತ್ತೇವೆ ಟ್ರ್ಯಾಕ್ಟರ್ ವಾಪಸ್ ಕೊಡಿ ಅಂತಿದ್ದಾರೆ. ಇದಕ್ಕೆ ಬ್ಯಾಂಕ್ ಸಿಬ್ಬಂದಿ‌ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ‌. ರೈತಸಂಘ ರೈತ ಮಹಿಳೆ ಬೆನ್ನಿಗೆ ನಿಂತಿದ್ದು ಬರದ ಸಮಯದಲ್ಲಿ ರೈತರ ಯಾವುದೇ ವಸ್ತು ಜಪ್ತಿ ಮಾಡದು ಅಂತ ನಿಯಮವಿದೆ. ಹೇಗೆ ಟ್ರ್ಯಾಕ್ಟರ್ ಒಯ್ದಿದ್ದಾರೆ ಹಾಗೆ ತಂದು ಬಿಡಬೇಕು ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ‌. ಜೊತೆಗೆ ಡಿಸಿ ಅವರಿಗೂ ಈ ಬಗ್ಗೆ ಮನವಿ‌ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:16 pm, Sat, 14 October 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್