ಮುಸ್ಲಿಂ ವ್ಯಕ್ತಿಯನ್ನು ಲವ್ ಮಾಡಿ ಮತಾಂತರಗೊಂಡ ವಿವಾಹಿತ ಮಹಿಳೆ: ಈಗ ಅಸಲಿ ರೂಪ ತೋರಿಸಿದ ಪತಿ

ಬಾಗಲಕೋಟೆಯ ಶ್ರೀದೇವಿ, ಮತಾಂತರಗೊಂಡು 'ಹಬೀಬಾ' ಹೆಸರಿನಲ್ಲಿ ಮದುವೆಯಾದ ನಂತರ ಪತಿಯಿಂದ ವಂಚನೆ ಹಾಗೂ ಕಿರುಕುಳ ಅನುಭವಿಸಿದ್ದಾರೆ. ಹಣ-ಬಂಗಾರ ದೋಚಿ ಬೀದಿಗೆ ತಳ್ಳಿದ ಪತಿ ವಿರುದ್ಧ ಮಹಿಳೆ ಎಸ್ಪಿ ಕಚೇರಿ ಮುಂದೆ ಕಣ್ಣೀರಿಟ್ಟಿದ್ದಾರೆ. ಮುಧೋಳ ಪೊಲೀಸರು ಸ್ಪಂದಿಸದ ಕಾರಣ, ಎಸ್ಪಿ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.

ಮುಸ್ಲಿಂ ವ್ಯಕ್ತಿಯನ್ನು ಲವ್ ಮಾಡಿ ಮತಾಂತರಗೊಂಡ ವಿವಾಹಿತ ಮಹಿಳೆ: ಈಗ ಅಸಲಿ ರೂಪ ತೋರಿಸಿದ ಪತಿ
ಬಾಗಲಕೋಟೆ
Edited By:

Updated on: Mar 08, 2026 | 5:40 PM

ಬಾಗಲಕೋಟೆ, ಮಾ.8: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಪತಿ ತನಗೆ ಚಿತ್ರಹಿಂಸೆ ನೀಡಿ, ಹಣ ಹಾಗೂ ಬಂಗಾರವನ್ನೆಲ್ಲಾ ದೋಚಿ ಬೀದಿಗೆ ಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾದ ಶ್ರೀದೇವಿ (ಈಗಿನ ಹೆಸರು ಹಬೀಬಾ) ಮೂಲತಃ ಕುರುಬ ಸಮುದಾಯದವರು. 14 ವರ್ಷಗಳ ಹಿಂದೆ ಇವರಿಗೆ ಸ್ವಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಿ ಮಕ್ಕಳಿದ್ದರು. ಆದರೆ, ಮುಧೋಳದಲ್ಲಿ ಕೆಲಸಕ್ಕೆ ಬಂದಾಗ ಮುಸ್ಲಿಂ ಸಮುದಾಯದ ಸವಿಫ್ ಪತ್ತೆ ಎಂಬಾತನ ಪರಿಚಯವಾಗಿತ್ತು. ಸವಿಫ್‌ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ, ಶ್ರೀದೇವಿಯವರನ್ನು ಪ್ರೀತಿಸುವುದಾಗಿ ನಂಬಿಸಿ ಮತಾಂತರ ಮಾಡಿದ್ದ ಎನ್ನಲಾಗಿದೆ.

ಸವಿಫ್ ತನ್ನನ್ನು ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಶ್ರೀದೇವಿ ಎಂಬ ಹೆಸರನ್ನು ‘ಹಬೀಬಾ’ ಎಂದು ಬದಲಿಸಿ, ಫೆಬ್ರವರಿ 7, 2023 ರಂದು ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಂಡಿದ್ದ ಎಂದು ಮಹಿಳೆ ತಿಳಿಸಿದ್ದಾರೆ. ಮದುವೆಯಾದ ಕೆಲವು ದಿನಗಳ ನಂತರ ಸವಿಫ್ ತನ್ನ ಅಸಲಿ ರೂಪ ತೋರಿಸಿದ್ದಾನೆ. ತನ್ನ ಬಳಿಯಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲೆ ಚಿನ್ನದ ಆಭರಣಗಳನ್ನು ಒಯ್ದು, ಈಗ ಮೊದಲ ಪತ್ನಿ ಜೊತೆ ಸೇರಿಕೊಂಡಿದ್ದಾನೆ. ನನಗೆ ಹೊಡೆದು ಬಡಿದು ಬೀದಿಗೆ ತಳ್ಳಿದ್ದಾನೆ ಎಂದು ಶ್ರೀದೇವಿ ಗೋಳಾಡಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

“ನನಗೆ ಈಗ ಮೊದಲ ಗಂಡನೂ ಇಲ್ಲ, ಎರಡನೇ ಪತಿಯೂ ಕೈಕೊಟ್ಟಿದ್ದಾನೆ. ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ?” ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಮುಧೋಳ ಠಾಣೆಯಲ್ಲಿ ದೂರು ನೀಡಲು ಹೋದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯ ಗೋಳು ಆಲಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, “ಮಹಿಳೆಗೆ ಪತಿಯಿಂದ ಕಿರುಕುಳವಾಗಿರುವ ಬಗ್ಗೆ ದೂರು ಬಂದಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಹಿಳಾ ಠಾಣೆಯ ಮೂಲಕವೂ ಈ ಕೇಸನ್ನು ಪರಿಶೀಲಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us