ಬಾಗಲಕೋಟೆ: ಕುಡಚಿ ರೈಲು ಮಾರ್ಗಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು ಪರಿಹಾರ ನೀಡದ ವಿಚಾರಕ್ಕೆ ಸಂಬಂಧಿಸಿ ಎಸಿ ಕಚೇರಿಯ ಪಿಠೋಪಕರಣಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ. 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಿಂದ ಆದೇಶ ಹೊರಡಿಸಲಾಗಿದೆ.
ಯಲ್ಲಪ್ಪ ಚೊಳಚಗುಡ್ಡ ಅವರಿಗೆ ಸೇರಿದ 3 ಎಕರೆ 8 ಗುಂಟೆ ಜಮೀನನ್ನು ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕಾಗಿ ಕಂದಾಯ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಕೋರ್ಟ್ ಆದೇಶ ಇದ್ರೂ, ಮೂರು ತಿಂಗಳಿಂದ ಪರಿಹಾರ ನೀಡದ ವಿಚಾರಕ್ಕೆ ಸಂಬಂಧಿಸಿ ಬಾಗಲಕೋಟೆ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಎಸಿ ಕಚೇರಿ ಜಪ್ತಿಗೆ ಆದೇಶ ಹೊರಡಿಸಿದ್ದಾರೆ. ಭೂ ಮಾಲೀಕ ಯಲ್ಲಪ್ಪ ಚೊಳಚಗುಡ್ಡ ಅವರಿಗೆ 14 ಕೋಟಿ 23 ಲಕ್ಷ 70 ಸಾವಿರದ 807 ರೂ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಪರಿಹಾರ ನೀಡದ ಹಿನ್ನೆಲೆ ಎಸಿ ಕಚೇರಿ ಜಪ್ತಿಗೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ಎಸಿ ಕಚೇರಿ ಜಪ್ತಿ ಮಾಡುವಂತೆ ತಿಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇಂದು ನ್ಯಾಯವಾದಿಗಳು ಕಚೇರಿ ಜಪ್ತಿ ಮಾಡಿದರು. ಹೆಚ್ಚುವರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಅಧಿಕಾರಿಗಳು ಹೈ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಿದ್ದಾರೆ.
ಇದನ್ನೂ ಓದಿ: Gruha Jyothi Scheme: ಕರ್ನಾಟಕ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
ಧಾರವಾಡ: ಗದಗ ಜಿಲ್ಲೆಯ ಹಳ್ಳಿಕೇರಿ ಗ್ರಾಮದ ರಾಮಚಂದ್ರಪ್ಪ ಅಡ್ಡೇದಾರ್ ಎನ್ನುವವರ 3 ಎಕರೆ ಜಮೀನನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ 63ನ್ನು ನೀರ್ಮಾಣ ಮಾಡಲು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪ್ರತಿ ಚದರ ಅಡಿಗೆ 79 ರೂ. ಹಣವನ್ನ ನಿಗದಿ ಮಾಡಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿಯವರೆಗೆ ವಶಪಡಿಸಿಕೊಂಡ ಜಮೀನಿನ ಹಣವನ್ನ ನೀಡದ ಪರಿಣಾಮ ಕೋರ್ಟ್ಗೆ ಹೋಗಿದ್ದ ರಾಮಚಂದ್ರಪ್ಪ ಅಡ್ಡೇದಾರ್ ಇದೀಗ ಕೋರ್ಟ್, ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನ ಜಪ್ತಿ ಮಾಡಲು ಆದೇಶ ಹೊರಡಿಸಿದ್ದು, ಇಂದು ಜಪ್ತಿ ಮಾಡಲಾಗಿದೆ.
ಅತಿ ಕಡಿಮೆ ದರ ನಿಗದಿ ಮಾಡಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕುರಿತು ಡಿಸಿ ಕೋರ್ಟ್ಗೆ ಹೋಗಿದ್ದ ರಾಮಚಂದ್ರಪ್ಪ ಅಡ್ಡೇದಾರ್ ಡಿಸಿ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನಂತರ ಡಿಸಿ ಕೋರ್ಟ್ ಪ್ರತಿ ಚದರ ಅಡಿಗೆ 79 ರೂ. ನೀಡಲು ಆದೇಶಿಸಿತ್ತು. ಆದರೂ ಅಧಿಕಾರಿಗಳು ಇನ್ನು ಪರಿಹಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕೋರ್ಟ್ ಮೊರೆ ಹೋಗಿದ್ದ ರಾಮಚಂದ್ರಪ್ಪ, ಇದೀಗ ಕೋರ್ಟ್ ಕಚೇರಿ ಜಪ್ತಿಗೆ ಆದೇಶಿಸಿ ಕೋರ್ಟ್ ಸಿಬ್ಬಂದಿಯಿಂದ ಕಚೇರಿ ಪೀಠೋಪಕರಣ, ಕಂಪ್ಯೂಟರ್, ಪ್ರಿಂಟರ್ ಸೇರಿ ವಾಹನವನ್ನ ಜಪ್ತಿ ಮಾಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:17 pm, Wed, 14 June 23