ಬಾಗಲಕೋಟೆ: 2012ರಲ್ಲಿ ನಡೆದ ಕೊಲೆ ಪ್ರಕರಣದ 7 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ
ಯಲ್ಲಪ್ಪ ಗಾಳಿ (55) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಗಲಕೋಟೆ 2ನೇ ಹೆಚ್ಚುವರಿ ಕೋರ್ಟ್ ಜೀವಾವಧಿ ಶಿಕ್ಷೆಯ ಆದೇಶ ನೀಡಿದೆ. 2012 ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಶಿಕ್ಷೆ ನೀಡಲಾಗಿದೆ.
ಬಾಗಲಕೋಟೆ: ಇಲ್ಲಿನ ಶಿರೂರು ಗ್ರಾಮದಲ್ಲಿ ಎಸ್‌ಡಿಎಸ್ ಅಧ್ಯಕ್ಷರ ಆಯ್ಕೆ ವೇಳೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7 ಜನ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಯಲ್ಲಪ್ಪ ಗಾಳಿ (55) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಗಲಕೋಟೆ 2ನೇ ಹೆಚ್ಚುವರಿ ಕೋರ್ಟ್ ಜೀವಾವಧಿ ಶಿಕ್ಷೆಯ ಆದೇಶ ನೀಡಿದೆ. 2012 ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಶಿಕ್ಷೆ ನೀಡಲಾಗಿದೆ. ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಂತೋಷ ಸಿಬಿ ಅವರಿಂದ ಆದೇಶ ನೀಡಲಾಗಿದೆ.
ಸರಕಾರಿ ಅಭಿಯೋಜಕರಾದ ಸುನಿಲ್ ಹಂಜಿ ಕೊಲೆಯಾದವರ ಪರ ವಾದ ಮಂಡಿಸಿದ್ದರು. ಶಿರೂರು ಗ್ರಾಮದಲ್ಲಿ ಫೆಬ್ರವರಿ 1 2012 ರಂದು ರಾತ್ರಿ 1 ಗಂಟೆಗೆ ಕೊಲೆ ಪ್ರಕರಣ ನಡೆದಿತ್ತು. ಶಿರೂರು ಸರಕಾರಿ ಪ್ರಾಥಮಿಕ ಶಾಲೆ ಎಸ್ಡಿಎಮ್ಸಿ ಅಧ್ಯಕ್ಷ ಆಯ್ಕೆ ವೇಳೆ ಯಲ್ಲಪ್ಪ ಗಾಳಿ ಎಂಬುವರ ಕೊಲೆ ನಡೆದಿತ್ತು. ಮನೆಗೆ ಪೆಟ್ರೋಲ್ ಎರಚಲಾಗಿತ್ತು. ಇಡೀ ಕುಟುಂಬಕ್ಕೆ ಬೆಂಕಿ ಹಚ್ಚಿ ಕೊಲೆಗೈಯ್ಯವ ಉದ್ದೇಶವಿತ್ತು. ಜೀವನ್ಮರಣ ಹೋರಾಟದ ಮಧ್ಯೆ ಯಲ್ಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಫೆಬ್ರವರಿ 4 2012 ರಂದು ಮಿರಜ್ನಲ್ಲಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದ ಯಲ್ಲಪ್ಪ ಗಾಳಿ ಸಾವನ್ನಪ್ಪಿದ್ದರು.
ರಾಯಚೂರು: ಇಬ್ಬರು ಹಂತಕರ ಬಂಧನ ನಿವೃತ್ತ ಶಿರಸ್ತೇದಾರನ ಹತ್ಯೆಗೈದಿದ್ದ ಇಬ್ಬರು ಹಂತಕರನ್ನು ಬಂಧಿಸಲಾಗಿದೆ. ರಾಯಚೂರು ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ ಮಾಡಲಾಗಿದೆ. ನವೆಂಬರ್ 12 ರಂದು ನಿವೃತ್ತ ಶಿರಸ್ತೇದಾರ ಪಂಪಾಪತಿ ಬರ್ಬರ ಕೊಲೆ ಆಗಿದ್ದರು. ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿ ಹತ್ಯೆ ನಡೆದಿತ್ತು. ಇದೀಗ ಪ್ರಕರಣ ಸಂಬಂಧ ಪಂಪಾಪತಿ ಮೊಮ್ಮಗ ಅಖಿಲೇಶ್, ಗೌತಮ್ ಬಂಧನ ಮಾಡಲಾಗಿದೆ. ಕುಡಿಯಲು ಹಣಕ್ಕಾಗಿ ಮೊಮ್ಮಗ ಅಖಿಲೇಶ್ ತಾತನ ಕತ್ತುಸೀಳಿದ್ದ. ಗೌತಮ್, ದೋಚಿದ ಹಣದಿಂದ ಕಾಲೇಜು ಫೀಸ್ ಕಟ್ಟಿದ್ದ ಹಾಗೂ ಅದೇ ದುಡ್ಡಲ್ಲಿ ಗರ್ಲ್ಫ್ರೆಂಡ್ಗೆ ಫೋನ್ ಕೊಡಿಸಿದ್ದ. ಈ ಬಗ್ಗೆ ರಾಯಚೂರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೇವನಹಳ್ಳಿ: ಮದ್ಯಸೇವಿಸಿ ಕೆರೆಯಲ್ಲಿ ಈಜಿಗಿಳಿದಿದ್ದ ವ್ಯಕ್ತಿ ಮುಳುಗಿ ಸಾವು ಮದ್ಯಸೇವಿಸಿ ಕೆರೆಯಲ್ಲಿ ಈಜಿಗಿಳಿದಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಕೆರೆಯಲ್ಲಿ ನಡೆದಿದೆ. ಮದ್ಯಸೇವಿಸಿ ಕೆರೆಗಿಳಿದಿದ್ದ ಕೇಶವ (36) ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಅರೆಸ್ಟ್
ಇದನ್ನೂ ಓದಿ: ಬಾಗಲಕೋಟೆ: ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್