ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್​; ಆರೋಪಿ ಜೆಡಿಎಸ್ ಮುಖಂಡನ ಮತ್ತಷ್ಟು ಹಗರಣ ಬಿಚ್ಚಿಟ್ಟ ಸಚಿವ ಆರ್.ಬಿ ತಿಮ್ಮಾಪುರ

ಅದು ರಾಮಾರೂಢ ಮಠ, ಆ ಮಠದ ಪರಮರಾಮಾರೂಢ ಸ್ವಾಮೀಜಿಗೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಕೋಟಿ ರೂ. ಪಂಗನಾಮ‌ ಹಾಕಿದ್ದು, ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಇದೀಗ ಬಗೆದಷ್ಟು ಆರೋಪಿ ಪ್ರಕಾಶ್ ಮುಧೋಳ ಬಣ್ಣ ಬಯಲಾಗ್ತಿದ್ದು, ಸಚಿವ ಆರ್.ಬಿ. ತಿಮ್ಮಾಪುರ ಹೆಸರಲ್ಲೂ ಮೋಸ ಮಾಡಿರುವ ಕುರಿತು ಖುದ್ದು ತಿಮ್ಮಾಪುರ ಅವರು ಈ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್​; ಆರೋಪಿ ಜೆಡಿಎಸ್ ಮುಖಂಡನ ಮತ್ತಷ್ಟು ಹಗರಣ ಬಿಚ್ಚಿಟ್ಟ ಸಚಿವ ಆರ್.ಬಿ ತಿಮ್ಮಾಪುರ
ಆರೋಪಿ ಜೆಡಿಎಸ್ ಮುಖಂಡನ ಮತ್ತಷ್ಟು ಹಗರಣವನ್ನ ಬಿಚ್ಚಿಟ್ಟ ಸಚಿವ ಆರ್.ಬಿ ತಿಮ್ಮಾಪುರ
Edited By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2024 | 2:47 PM

ಬಾಗಲಕೋಟೆ, ಅ.02: ಬಾಗಲಕೋಟೆ (Bagalkote) ತಾಲೂಕಿನ ತುಳಸಿಗೇರಿ ಬಳಿ ಇರುವ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿ (Paramramarudh Swamiji) ಅವರಿಗೆ ಒಂದು ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ ಮುಧೋಳ ಬಣ್ಣ ಬಗೆದಷ್ಟು ಬಯಲಾಗುತ್ತಿದೆ. ಹೌದು, ಸಚಿವ ಆರ್.ಬಿ. ತಿಮ್ಮಾಪುರ(RB Timmapur) ಹೆಸರಲ್ಲೂ ಮೋಸ ಮಾಡಿರುವ ಕುರಿತು ಖುದ್ದು ತಿಮ್ಮಾಪುರ ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ, ‘2018ರಲ್ಲಿ ನನ್ನ ಸಹೋದರಿಗೆ ಕಾರು ಕೊಡಿಸಬೇಕಿದೆ. ಹಾಗಾಗಿ ಹಣ ಬೇಕೆಂದು ಬ್ಯಾಂಕ್ ಮ್ಯಾನೇಜರ್ ಬಳಿ ಹಣ ವಸೂಲಿ ಮಾಡಿದ್ದನಂತೆ. ಅಷ್ಟೇ ಅಲ್ಲ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಹೋದರನೆಂದು, ಬಾದಾಮಿ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೆಸರಲ್ಲೂ ಆರೋಪಿ ದೋಖಾ ಮಾಡಿದ್ದಾನೆ. ಇದರ ಜೊತೆಗೆ ಹಾಲಿನ ಪುಡಿಯಲ್ಲಿ ಯೂರಿಯಾ ಮಿಕ್ಸ್ ಮಾಡಿದ್ದ ಪ್ರಕರಣದಲ್ಲೂ ಭಾಗಿಯಾಗಿದ್ದ.

ಇದನ್ನೂ ಓದಿ:ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್: ಆರೋಪಿ ಜೆಡಿಎಸ್​ ಮುಖಂಡನ ಕ್ರೈಂ ಡೈರಿ ಬಿಚ್ಚಿಟ್ಟ ಐಜಿಪಿ

ಜಗದೀಶ್ ಶೆಟ್ಟರ್ ಹೆಸರಲ್ಲೂ ವಂಚಿಸಲು ಪ್ರಯತ್ನ

ಈ ಹಿಂದೆ ಜಗದೀಶ್ ಶೆಟ್ಟರ್ ಹೆಸರಲ್ಲೂ ಬಾಗಲಕೋಟೆ ಜಿಲ್ಲೆಯ ಒಂದು ಸಿಮೆಂಟ್ ಫ್ಯಾಕ್ಟರಿಗೆ ಹೋಗಿದ್ದ. ಅಲ್ಲಿ ಜಗದೀಶ್ ಶೆಟ್ಟರ್ ಕಳಿಸಿದ್ದಾರೆ ಎಂದು ತಕ್ಷಣ 25 ಲಕ್ಷ ರೂ. ಕೊಟ್ಟು ಕಳಿಸಬೇಕಂತೆ ಎಂದು ಪ್ಯಾಕ್ಟರಿ ಆಡಳಿತ ಮಂಡಳಿ ಬಳಿ‌ ಕೇಳಿದ್ದ. ಸಿಮೆಂಟ್ ಪ್ಯಾಕ್ಟರಿಯವರು ಸಂಶಯ ಬಂದು ಕೂರಿಸಿ ಪೊಲೀಸರಿಗೆ ಕರೆ ಮಾಡಿ ವಿಚಾರಿಸಿದಾಗ ಬಣ್ಣ ಬಯಲಾಗಿತ್ತು. ಇನ್ನು 2019 ರ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ತಂದಿಟ್ಟ ಅಕ್ಕಿಯನ್ನೂ ಕಳ್ಳತನ ಮಾಡಿದ್ದನಂತೆ. ಈ ಕುರಿತು ಆರೋಪಿ ಪ್ರಕಾಶ್ ಮುಧೋಳ ಹಗರಣಗಳನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಬಿಚ್ಚಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us