
ಬಾಗಲಕೋಟೆ, ಮೇ 31: ಹಿಟ್ ಆ್ಯಂಡ್ ರನ್ಗೆ (Hit and run) ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬಸವರಾಜ ಬಂಡಿವಡ್ಡರ್(26) ಮತ್ತಿ ಹುಲಿಗೆಮ್ಮ(3) ಮೃತಪಟ್ಟಿದ್ದಾರೆ. ತಂದೆ, ಮಗಳು ಹಳಗೇರಿ ಆಂಜನೇಯ ದೇವಸ್ಥಾನಕ್ಕೆ ಹೊರಟಿದ್ದಾಗ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ಗೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಡಾಬಾ ಬಳಿ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಓಬಳಾರೆಡ್ಡಿ(35) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ: ಅಧಿಕಾರಿಗಳೇ ಹೊಣೆ, ಠಾಣೆಗೆ ದೂರು
ಕಾರಿನಲ್ಲಿದ್ದ ಸುನೀಲ್ ಮತ್ತು ದಿವ್ಯಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬೇವಿನ ಮರದಡಿ ಇರಿಸಿದ್ದ ಮಾರಿಯಮ್ಮ ದೇವಿಯ ಕಲ್ಲಿನ ಮೂರ್ತಿ ಕಳ್ಳತನ ಮಾಡಿ ಎಸೆದಿದ್ದ ಕಿಡಿಗೇಡಿಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ. ಶಾಂತಿನಗರದಲ್ಲಿ ಘಟನೆ ನಡೆದಿತ್ತು. ಅನೀಸ್ ಬಂಧಿತ ಆರೋಪಿ. ಎಫ್ಐಆರ್ ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಮಕ್ಕಳ ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ
ವರ್ಷದಲ್ಲಿ ಒಮ್ಮೆ ಮಾತ್ರ ದೇವಾಲಯದಿಂದ ಮೂರ್ತಿ ಹೊರ ತೆಗೆದು ಬೇವಿನ ಮರದಡಿ ನಿವಾಸಿಗಳು ಇರಿಸುತ್ತಿದ್ದರು. ಇದಕ್ಕೆ ಅನೀಸ್ ವಿರೋಧ ವ್ಯಕ್ತಪಡಿಸಿದ್ದ. ಬಡಾವಣೆಯಲ್ಲಿ ಗಲಾಟೆ ಎಬ್ಬಿಸಲು ಸಂಚು ಮಾಡಿ ರಾತ್ರೋರಾತ್ರಿ ಕಲ್ಲಿನ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದ. ಎಫ್ಐಆರ್ ದಾಖಲಿಸಿ ಪೊಲೀಸರು ಅನೀಸ್ನನ್ನು ಬಂಧಿಸಿದ್ದು, ತನಿಖೆ ವೇಳೆ ತಾನೇ ಕದ್ದು ಮೂರ್ತಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Sat, 31 May 25