Ganesh Chaturthi 2022: ಬಾಗಲಕೋಟೆಯಲ್ಲಿ ಐದುನೂರಕ್ಕೂ ಅಧಿಕ ಸಾರ್ವಜನಿಕ ಗಣಪ ಪ್ರತಿಷ್ಠಾಪನೆ; ಎಲ್ಲದಕ್ಕೂ ಆರ್​ಎಸ್ಎಸ್ ಗಣಪನೇ ಒಡೆಯ

Ganesh Chaturthi 2022: ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಮಂಕಾಗಿದ್ದ ಬಾಗಲಕೋಟೆ ಗಣೇಶೋತ್ಸವ ಈ ಭಾರಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.

Ganesh Chaturthi 2022: ಬಾಗಲಕೋಟೆಯಲ್ಲಿ ಐದುನೂರಕ್ಕೂ ಅಧಿಕ ಸಾರ್ವಜನಿಕ ಗಣಪ ಪ್ರತಿಷ್ಠಾಪನೆ; ಎಲ್ಲದಕ್ಕೂ ಆರ್​ಎಸ್ಎಸ್ ಗಣಪನೇ ಒಡೆಯ
ಬಾಗಲಕೋಟೆ ಗಣೇಶ
Follow us
TV9 Web
| Updated By: ವಿವೇಕ ಬಿರಾದಾರ

Updated on: Aug 28, 2022 | 7:00 AM

ಇನ್ನೂ ಎರಡು ದಿನ ವಿಘ್ನನಿವಾರಕ ಎಲ್ಲ ಮನೆ, ಗಲ್ಲಿಗಳಲ್ಲಿ ಪ್ರತಿಷ್ಠಾಪಿತನಾಗುತ್ತಾನೆ. ಎಲ್ಲ ಕಡೆ ಗಣೇಶ ಹಬ್ಬದ  (Ganesh Festival) ಸಡಗರ ಸಂಭ್ರಮ ಮನೆ ಮಾಡಿದೆ. ಗಲ್ಲಿ ಗಲ್ಲಿಗಳಲ್ಲೂ ಈ ಬಾರಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಿ ಭರ್ಜರಿಯಾಗಿ ಗಣೇಶ ಹಬ್ಬ ಆಚರಿಸೋಕೆ ಜನರು ಸಿದ್ದರಾಗಿದ್ದಾರೆ. ಇನ್ನು ಇದಕ್ಕೆ ತಕ್ಕಂತೆ ಈಗಾಗಲೇ ಮಾರುಕಟ್ಟೆಯಲ್ಲಿ ತರಹೇವಾರಿ ಕಲರ್ ಪುಲ್ ಗಣಪನ ಮೂರ್ತಿಗಳು ಜನರನ್ನು ಸೆಳೆಯುತ್ತಿವೆ. ವಿವಿಧ ರೂಪದ, ಆಕಾರದ ಗಣೇಶ ಜನರನ್ನು ಸೆಳೆಯುತ್ತಿದ್ದಾನೆ.

ಬಾಗಲಕೋಟೆಯಲ್ಲಂತೂ (Bagalakote) ಗಣೇಶ ಹಬ್ಬದ ಸಂಭ್ರಮಕ್ಕೇನು ಕಡಿಮೆಯಿಲ್ಲ. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆ ಕಳೆಗುಂದಿದ್ದ ಗಣೇಶೋತ್ಸವ ಈ ಸಾರಿ ಬಾರಿ ವಿಜೃಂಭಣೆಯಿಂದ ನಡೆಯಲಿದೆ. ಬಾಗಲಕೋಟೆ ನಗರವೊಂದರಲ್ಲೇ ಐದುನೂರು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲು ಯುವಕರು ವಿವಿಧ ಗಜಾನನ ಮಂಡಳಿಯವರು ಸನ್ನದ್ದರಾಗಿದ್ದಾರೆ. ಅದಕ್ಕಾಗಿ ಗಣೇಶ ಮೂರ್ತಿಗಾಗಿ ಆರ್ಡರ್ ಕೊಟ್ಟಿದ್ದಾರೆ. ಆದರೆ ಬಾಗಲಕೋಟೆಯಲ್ಲಿ ಎಲ್ಲ ಗಣೇಶನಿಗೂ ಒಡೆಯ ಅಂದರೆ ಶಹರ ಗಜಾನನ.

ಶಹರ ಗಜಾನನ “ಆರ್ ಎಸ್ ಎಸ್ ಗಣಪ” ಎಂದೇ ಖ್ಯಾತಿ ಏನಿದರ ಹಿನ್ನೆಲೆ

ಬಾಗಲಕೋಟೆಯಲ್ಲಿ ಪ್ರತಿ ವರ್ಷ ೫೦೦ ಕಡೆ ಸಾರ್ವಜನಿಕ ಗಣೇಶನನ್ನು ಕೂರಿಸಲಾಗುತ್ತದೆ. ಮನೆ ಮನೆಗಳಲ್ಲಿ ಗಣೇಶ ಪ್ರತಿಷ್ಟಾಪನೆ ಬಗ್ಗೆ ಲೆಕ್ಕವೇ ಇಲ್ಲ. ಬಾಗಲಕೋಟೆಯಲ್ಲಿ ಎಲ್ಲ ಗಣಪಗಳ ರಾಜ ಅಂದರೆ ಅದು ವಲ್ಲಭಬಾಯಿ ವೃತ್ತದಲ್ಲಿ ಪ್ರತಿಷ್ಟಾಪನೆ ಮಾಡುವ ಶಹರ ಗಜಾನನ ಇದನ್ನು “ಆರ್ ಎಸ್ ಎಸ್ ಸಂಘದ ಗಣಪ” ಎಂದೇ ಕರೆಯುತ್ತಾರೆ. ಸತತ 69 ವರ್ಷಗಳಿಂದ ಗಜಾನನನ್ನು ಕೂಡಿಸಿದ್ದು, 70ನೇ ವರ್ಷದ ಗಣಪ ಕೂರಿಸಲು ಶಹರ ಗಜಾನನ ಉತ್ಸವ ಸಮಿತಿ ಸಜ್ಜಾಗಿದೆ.

70 ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಶಹರ ಗಜಾನನ ಕೂರಿಸಿದ್ದು ಆರ್ ಎಸ್ ಎಸ್ ಮುಖಂಡರು. ಅಖಂಡ ವಿಜಯಪುರ ಜಿಲ್ಲೆ ಆರ್ ಎಸ್ ಪ್ರಚಾರಕರಾದ ಜ್ಯೋತಿ ಪ್ರಕಾಶ್ ಸಾಳುಂಕೆ ಹಾಗೂ ಆರ್​ಎಸ್​ಎಸ್ ಮುಖಂಡರಾಗಿದ್ದ ಕಾಶಿನಾಥ ನಾವಲಗಿ, ಗಣಪತ್ ರಾವ್, ಮೇಲ್ನಾಡ ಮತ್ತು ಆರ್​ಎಸ್​ಎಸ್ ಕಾರ್ಯಕರ್ತರ ಪಡೆ ಕಟ್ಟೋದಕ್ಕಾಗಿ, ಯುವಪಡೆಗೆ ಹುರುಪು ತುಂಬವ ಉದ್ದೇಶ, ಜೊತೆಗೆ ಧಾರ್ಮಿಕತೆ ಭಕ್ತಿ ಹಿಂದು ಧರ್ಮ ರಕ್ಷಣೆ ಹೆಸರಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಲಾಯಿತು.

ಮೊಟ್ಟ ಮೊದಲ ಬಾರಿಗೆ ಕಿಲ್ಲಾ ಓಣಿಯ ಭವಾನಿ ದೇವಸ್ಥಾನದಲ್ಲಿ ಆರ್​ಎಸ್ಎಸ್ ಗಣೇಶನನ್ನು ಪ್ರತಿಷ್ಟಾಪನೆ ಮಾಡಿ ಹಿಂದು ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗಿತ್ತು. ನಂತರ ಕೆಲ ವರ್ಷ ಬಳಿಕ ೧೯೭೭ ರಿಂದ ವಲ್ಲಭಬಾಯಿ ವೃತ್ತದಲ್ಲಿ ಶಹರ ಗಜಾನನ ಸಂಘದ ಗಣೇಶನನ್ನು ಪ್ರತಿಷ್ಟಾಪನೆ ಮಾಡಿ ಪ್ರತಿ ವರ್ಷ ಗಣೇಶ ಉತ್ಸವವನ್ನು ಭರ್ಜರಿಯಾಗಿ ಮಾಡುತ್ತಾ ಹೊರಟಿದ್ದಾರೆ. ಕೋವಿಡ್ ಕಾಲದಲ್ಲಿ ಎರಡು ವರ್ಷದ ಎಮ್​ಜಿ ರಸ್ತೆಯ ಸಂಬಾಭವಾನಿ ದೇವಸ್ಥಾನದಲ್ಲಿ ಕೂರಿಸಲಾಗಿತ್ತು.

ಶಹರ ಗಜಾನನ ಉತ್ಸವ ಸಮಿತಿ ಹೆಸರಲ್ಲಿ ಪ್ರತಿ ವರ್ಷ ಐದು ದಿನಗಳ ಕಾಲ ಸಂಘದ ಗಣೇಶನನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಪುನಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಗಣಪ ಕೇವಲ ಗಣೇಶ ಉತ್ಸವಕ್ಕಾಗಿ ಮಾತ್ರವಲ್ಲದೇ ಹಿಂದು ಧರ್ಮದ ರಕ್ಷಣಾ ಕೆಲಸ, ಹಿಂದು ಯುವಕರನ್ನು ಆರ್​ಎಸ್​​ಎಸ್​ಗೆ ಸೆಳೆಯುವ ಉದ್ದೇಶ ಅಡಗಿತ್ತು. ಅದರಲ್ಲಿ ಆರ್​ಎಸ್​​ಎಸ್​ ಪ್ರಮುಖರು ಯಶಸ್ವಿ ಕೂಡ ಆದರು. ಈ ಕಾರಣಕ್ಕಾಗಿಯೇ ಬಾಗಲಕೋಟೆಯಲ್ಲಿ ಸಂಘದ ಗಣಪ ಬಹಳ ಪ್ರಸಿದ್ದಿ ಪಡೆದು ಎಲ್ಲ ಗಣೇಶಗಳ ಒಡೆಯನಾಗಿದ್ದಾನೆ.

ಸಂಘದ ಗಣಪತಿಗೆ ಐದು ನವಜೋಡಿಗಳಿಂದ ಐದು ದಿನ ವಿಶೇಷ ಪೂಜೆ 

ಪ್ರತಿ ವರ್ಷ ಐದು ದಿನ ಸಂಘದ ಗಣಪನ ಕೂರಿಸಲಾಗುತ್ತದೆ. ಐದು ದಿನವೂ ಪೂಜೆ ಪ್ರಾರ್ಥನೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಅಂದರೆ ಐದು ದಿನವೂ ಇಲ್ಲಿ ಒಂದೊಂದು ನವಜೋಡಿಗಳಿಂದ ವಿಶೇಷ ಪೂಜೆ ಮಾಡಿಸಲಾಗುತ್ತದೆ. ನವಜೋಡಿಗಳಿಗೆ ಗಣಪನ ಆಶಿರ್ವಾದ ಇರಲಿ, ಆರೋಗ್ಯವಂತ ಮಕ್ಕಳು ಜನಿಸಲಿ, ಸಂಸಾರ ಚೆನ್ನಾಗಿರಲಿ ಅಂತ ಪೂಜೆ ಮಾಡಿಸುತ್ತಾರೆ. ನವಜೋಡಿಗಳು ಮೊದಲೇ ಹೆಸರು ನೊಂದಾಯಿಸಿ ಪೂಜೆ ಮಾಡಿ ಪುನೀತರಾಗುತ್ತಾರೆ. ಜೊತೆಗೆ ಗಣೇಶನನ್ನು ಪ್ರತಿಷ್ಟಾಪನೆ ಮಾಡಿ ಮೂರನೇ ದಿನಕ್ಕೆ ಗಣಹೋಮ ಏರ್ಪಡಿಸಲಾಗಿರುತ್ತದೆ. ನಂತರ ಐದನೇ ದಿನ ಅದ್ದೂರಿ ಮೆರವಣಿಗೆ ಮೂಲಕ ಗಣಪನ ವಿಸರ್ಜನೆ ಮಾಡುತ್ತಾರೆ.

ಇನ್ನು ಈ ಬಗ್ಗೆ ಮಾತಾಡಿದ ಶಹರ ಗಜಾನನ ಉತ್ಸವ ಸಮಿತಿ ಸದಸ್ಯರಾದ ಗಣಪತ್ ಸಾ ದಾನಿ ಅವರು “ಶಹರ ಗಜಾನನ ನಮ್ಮ ಬಾಗಲಕೋಟೆಯ ಹೆಮ್ಮೆ,ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಹಿಂದು ಕಾರ್ಯಕರ್ತರ, ಆರ್​ಎಸ್​​ಎಸ್​ ಮೂಲ ಇದರಲ್ಲಿದೆ. ಹಿಂದು ಧರ್ಮ ರಕ್ಷಣೆ ಹಿಂದು ಯುವಕರಲ್ಲಿ ಒಗ್ಗಟ್ಟು, ಸ್ವಾಭಿಮಾನ ಜೊತೆಗೆ ಗಣೇಶನ ಮೇಲಿನ ಭಕ್ತಿ ಎಲ್ಲ ಉದ್ದೇಶದಿಂದ ನಮ್ಮ ಆರ್​ಎಸ್​​ಎಸ್​ಮುಖಂಡರು ಅಂದು 70 ವರ್ಷಗಳ ಹಿಂದೆ ಪ್ರತಿಷ್ಟಾಪನೆ ಮಾಡಿ ಎಲ್ಲರನ್ನೂ ಒಂದು ಮಾಡಿದ್ದಾರೆ. ಅಂದಿನಿಂದಲೂ ಈ ಉತ್ಸವ ಮುಂದುವರೆದಿದೆ. ಮುಂದೆಯೂ ಇದೇ ಮಾದರಿಯಲ್ಲಿ, ಇದೆ ವಿಚಾರದಲ್ಲಿ ಶಹರ ಗಜಾನನ ಉತ್ಸವ ಸಮಿತಿ ಮೂಲಕ ಗಣೇಶ ಉತ್ಸವ ಮುಂದುವರೆಯುತ್ತದೆ”. ಎಂದರು

70 ವರ್ಷದಿಂದಲೂ ಜೇಡಿಮಣ್ಣಲ್ಲೇ ತಯಾರಾಗುತ್ತಿದೆ ಸಂಘದ ಗಣಪ, ಕೈಯಲ್ಲೇ ಅರಳುತ್ತಾನೆ ವಿಘ್ನವಿನಾಶಕ

ಸಹಜವಾಗಿ ಸಾರ್ವಜನಿಕ ಗಣಪಗಳನ್ನು ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂಲಕ ತಯಾರಿ ಮಾಡಲಾಗುತ್ತಿತ್ತು. ಎತ್ತರದ ಗಣಪಗಳನ್ನು ಮಣ್ಣಿನಿಂದ ತಯಾರಿಸೋದು ಅಷ್ಟು ಸುಲಭವಲ್ಲ. ಇದರಿಂದ ಬೃಹತ್ ಗಣೇಶನ ಮೂರ್ತಿಗಳನ್ನು ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂಲಕ ತಯಾರು ಮಾಡೋದು ದಂದೆಯಾಗಿದೆ. ಆದರೆ ಈಗ ಅದಕ್ಕೆ ನಿಷೇಧ ಹೇರಿದ ಮೇಲೆ ಸ್ವಲ್ಪ ನಿಯಂತ್ರಣದಲ್ಲಿದೆ. ಇನ್ನು ಬಾಗಲಕೋಟೆ ಸಂಘದ ಗಣಪತಿಯನ್ನು ಕಳೆದ 70 ವರ್ಷದಿಂದಲೂ ಜೇಡಿ ಮಣ್ಣಿನಿಂದಲೇ ತಯಾರು ಮಾಡಲಾಗುತ್ತಿದೆ. ಒಂದು ವರ್ಷವೂ ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣೇಶನನ್ನು ಕೂರಿಸಿಲ್ಲ. ಮೊದಲಿಗೆ ಗೂಳಯ್ಯ ಎಂಬುವರು ಸಂಘದ ಗಣೇಶ ತಯಾರಿ ಮಾಡುತ್ತಿದ್ದರು, ನಂತರ ಮಾಯಾಚಾರಿ ಎಂಬುವರು ಗಣೇಶ ತಯಾರು ಮಾಡುತ್ತಿದ್ದರು.

ಈಗ ಗೂಳಯ್ಯಜ್ಜನ ಶಿಷ್ಯ ಶಿವಪ್ಪ ಕರಿಗಾರ ೫೮ ವರ್ಷದಿಂದ ಸಂಘದ ಗಣಪನನ್ನು ಮಣ್ಣಿಂದಲೇ ತಯಾರು ಮಾಡುತ್ತಿದ್ದು, ೮೦ ವರ್ಷದ ಇಳಿ ವಯಸ್ಸಲ್ಲೂ ಸಂಘದ ಗಣೇಶ ಮೂರ್ತಿಯನ್ನು ಕೈಯಲ್ಲೇ ನಿರ್ಮಾಣ ಮಾಡುತ್ತಾರೆ. ಇದರಿಂದ ಸಂಘದ ಗಣೇಶ ಒಂದು ಪರಿಸರ ಸ್ನೇಹಿ ಗಣೇಶನಾಗಿದೆ. 7 ಅಡಿ ಗಣೇಶನ ಮೂರ್ತಿ ಬೆಲೆ ೩೫ ಸಾವಿರ ಇದ್ದು ಮತ್ತೆ ವಲ್ಲಭಭಾಯಿ ವೃತ್ತದಲ್ಲಿ ಸಂಭ್ರಮ ಮೇಳೈಸಲಿದೆ.

ಗಣೇಶ ತಯಾರಕರಾದ ಶಿವಪ್ಪ ಕರಿಗಾರ ಹೇಳುವ ಪ್ರಕಾರ

“ನಾನು ಕಳೆದ ೫೮ ವರ್ಷದಿಂದ ಸಂಘದ ಗಣೇಶ ಮೂರ್ತಿ ತಯಾರಿ‌ ಮಾಡುತ್ತಿದ್ದೇನೆ. ಇದುವರೆಗೂ ಗಣೇಶನನ್ನು ಜೇಡಿ ಮಣ್ಣಲ್ಲೇ ತಯಾರಿ ಮಾಡುತ್ತಿದ್ದು, ಯಾವುದೇ ಮಷಿನ್ ಬಳಸೋದಿಲ್ಲ ಕೈಯಿಂದಲೇ ಗಣೇಶನನ್ನು ತಯಾರಿ ಮಾಡುತ್ತಿದ್ದೇನೆ. ಕಳೆದ 58 ವರ್ಷದಿಂದ ಬೇರೆ ಯಾರ ಕಡೆಯೂ ಸಂಘದ ಗಣೇಶನನ್ನು ಸಮಿತಿಯವರು ಖರೀಧಿ ಮಾಡಿಲ್ಲ. ನಮ್ಮ ಬಳಿಯೆ ಖರೀದಿ ಮಾಡುತ್ತಿದ್ದಾರೆ. ಸಂಘದ ಗಣಪ ಮಾಡೋದು ನಮಗೆ ಹೆಮ್ಮೆಯ ವಿಷಯ” ಅಂತಾರೆ.

ಒಟ್ಟಾರೆ ಬಾಗಲಕೋಟೆಯಲ್ಲಿ ಎರಡು ವರ್ಷದ ಕೋವಿಡ್ ಬಳಿಕ ಮತ್ತೆ ಗಣಪನ ಉತ್ಸವ ಭರ್ಜರಿಯಾಗಿ ನಡೆಯಲಿದ್ದು, ಸಂಘದ ಗಣಪ ಮತ್ತೆ ನಗರದಲ್ಲಿ ವಿಜೃಂಭಿಸಲಿದ್ದಾನೆ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ