ಸರಕಾರಿ ಐಬಿಯಲ್ಲೇ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ ಪ್ರಕರಣ; ಶೋಕಾಸ್ ನೋಟಿಸ್ ಜಾರಿ

ನೀತಿ‌ಸಂಹಿತೆ ಮಧ್ಯೆ ಜಮಖಂಡಿ ಸರಕಾರಿ ಐಬಿ(Jamkhandi Government IB)ಯಲ್ಲೇ ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿದ ಘಟನೆ ಕುರಿತು ಟಿವಿ9 ಕನ್ನಡ ಡಿಜಿಟಲ್​ ಸುದ್ದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಅವರು ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಾರೆ.

ಸರಕಾರಿ ಐಬಿಯಲ್ಲೇ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ ಪ್ರಕರಣ; ಶೋಕಾಸ್ ನೋಟಿಸ್ ಜಾರಿ
ಬಾಗಲಕೋಟೆಯಲ್ಲಿ ಎಣ್ಣೆ ಪಾರ್ಟಿ ಪ್ರಕರಣ; ಶೋಕಾಸ್ ನೋಟಿಸ್ ಜಾರಿ
Edited By: ಕಿರಣ್ ಹನುಮಂತ್​ ಮಾದಾರ್

Updated on: May 23, 2024 | 9:40 PM

ಬಾಗಲಕೋಟೆ, ಮೇ.23: ನೀತಿಸಂಹಿತೆ ನಡುವೆಯೇ ಜಮಖಂಡಿ ವಿಭಾಗದ ಜಿಲ್ಲಾ ಪಂಚಾಯತಿ ಇಂಜಿನಿಯರ್​ಗಳು ಕಚೇರಿಗೆ ಚಕ್ಕರ್ ಹೊಡೆದು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಹಾಡಹಗಲೇ ಮದ್ಯಸೇವಿಸಿ ಮೋಜು ಮಸ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಎಇಇ​ ಎಂ.ಎಸ್​.ನಾಯಕ್, ಇಂಜಿನಿಯರ್​ಗಳಾದ ರಾಮಪ್ಪ​ ರಾಠೋಡ್, ಗಜಾನನ ಪಾಟೀಲ್, ಜಗದೀಶ್ ನಾಡಗೌಡ, ಶ್ರೀಶೈಲ್​ ಹೂಗಾರ್​ ಸೇರಿದಂತೆ ಇನ್ನಿತರರಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಅವರು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ಕೆಲಸಕ್ಕೆ ಚಕ್ಕರ್​ ಹೊಡೆದು ಗುತ್ತಿಗೆದಾರರ ಜೊತೆ ಸೇರಿ ಮದ್ಯಸೇವನೆ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ದೂರುಗಳು ಸ್ವೀಕೃತವಾಗಿವೆ. ಮಾದರಿ ನೀತಿ ಸಂಹಿತೆ ಹಿನ್ನೆಲೆ ಸರ್ಕಾರಿ ವಸತಿ ಗೃಹಗಳಲ್ಲಿ ಹೊರಗಿನವರಿಗೆ ಅವಕಾಶ ಇರುವುದಿಲ್ಲ. ಆದರೂ ಸರ್ಕಾರಿ ವಸತಿ ಗೃಹಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದೀರಿ. ನಿಮ್ಮ ಅನುಮತಿ ಇಲ್ಲದೇ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೇಗೆ ಸರ್ಕಾರಿ ವಸತಿ ಗೃಹಕ್ಕೆ ಹೋಗಿದ್ದಾರೆ?. 1951ರ ಕಲಂ 134ರ ಪ್ರಕಾರ ಯಾಕೆ ಕ್ರಮ ಜರುಗಿಸಬಾರದು. ಹೀಗಾಗಿ ನೋಟಿಸ್​​ ತಲುಪಿದ 24 ತಾಸಿನೊಳಗೆ ಉತ್ತರ ನೀಡಿ. ತಪ್ಪಿದ್ದಲ್ಲಿ ನಿಮ್ಮ ಮೇಲೆ‌ ಶಿಸ್ತು ಕ್ರಮ‌ಕೈಗೊಳ್ಳುವುದಾಗಿ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:ನೀತಿ‌ಸಂಹಿತೆ ಮಧ್ಯೆ ಸರಕಾರಿ ಐಬಿಯಲ್ಲೇ ಅಧಿಕಾರಿಗಳಿಂದ ಎಣ್ಣೆ ಪಾರ್ಟಿ; ವಿಡಿಯೋ ವೈರಲ್​

ಘಟನೆ ವಿವರ

ಸರಕಾರಿ ವಸತಿ ಗೃಹದಲ್ಲಿ ನಿನ್ನೆ(ಮೇ.22) ಮಧ್ಯಾಹ್ನ 3 ಗಂಟೆ ಸುಮಾರಿಗೆ ಸರಕಾರಿ ಐಬಿ ರಮಾ ನಿವಾಸದಲ್ಲಿ ಜಿಲ್ಲಾ ಪಂಚಾಯತಿ ವಿಭಾಗ ಜಮಖಂಡಿ ಎಇಇ ಎಮ್​ಎಸ್​ ನಾಯಕ, ಇಂಜಿನಿಯರ್​ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟೀಲ್, ಶ್ರೀಶೈಲ್ ಹೂಗಾರ ಹಾಗೂ ಗುತ್ತಿಗೆದಾರರಾದ ಸಾಗರ, ಶೀತಲ ಹರಿಜನ ಸೇರಿದಂತೆ ಆರು ಜನ ಗುತ್ತಿಗೆದಾರರು ಸೇರಿಕೊಂಡು ಮದ್ಯಸೇವನೆ ಮಾಡಿದ್ದರು. ಈ ಹಿನ್ನಲೆ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 pm, Thu, 23 May 24

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us