ಬಾಗಲಕೋಟೆ: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಪ್ರಕರಣ; 11 ಆರೋಪಿಗಳ ವಿರುದ್ಧ ಎಫ್ಐಆರ್
ನಿನ್ನೆ(ಜು.11) ಬಾಗಲಕೋಟೆ(Bagalakote) ಜಿಲ್ಲೆಯ ಮುಧೋಳ ನಗರದ ನಾಲ್ಕು ಲಾಡ್ಜ್ಗಳ ಮೇಲೆ ಜಮಖಂಡಿ ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ಮೇಲೆ ದಾಳಿ ನಡೆದಿತ್ತು. ಈ ವೇಳೆ ಹತ್ತು ಜನ ಯುವತಿಯರನ್ನು ರಕ್ಷಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ, ಜು.12: ‘ಸ್ಪಾ’ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳ ವಿರುದ್ಧ ಮುಧೋಳ ಠಾಣೆಯಲ್ಲಿ ಎಫ್ಐಆರ್(FIR) ದಾಖಲಾಗಿದೆ. ನಿನ್ನೆ(ಜು.11) ಬಾಗಲಕೋಟೆ(Bagalakote) ಜಿಲ್ಲೆಯ ಮುಧೋಳ ನಗರದ ಓಂಕಾರ, ಸಪ್ತಗಿರಿ, ಶಿವದುರ್ಗಾ ಹಾಗೂ ಸುರಭಿ ಹೆಸರಿನ ನಾಲ್ಕು ಲಾಡ್ಜ್ಗಳ ಜಮಖಂಡಿ ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ಮೇಲೆ ದಾಳಿ ನಡೆದಿತ್ತು. ಈ ವೇಳೆ ಹತ್ತು ಜನ ಯುವತಿಯರನ್ನು ರಕ್ಷಣೆ ಮಾಡಲಾಗಿತ್ತು.
11 ಜನರ ವಿರುದ್ಧ ದಾಖಲಾಯ್ತು ಎಫ್ಐಆರ್
ಈ ದಾಳಿ ವೇಳೆ ರಕ್ಷಿಸಿದ ಯುವತಿಯರೆಲ್ಲರೂ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಮುಂಬೈ ಮೂಲದರಾಗಿದ್ದಾರೆ. ಇನ್ನು ಸುರಭಿ ಲಾಡ್ಜ್ನ ಶಿವಕುಮಾರ್ ಈಳಗಾರ, ನಿರಂಜನ್ ಪೂಜಾರಿ, ಶ್ರೀಕಾಂತ್ ಕಲಾಲ್, ಶಿವದುರ್ಗಾ ಲಾಡ್ಜ್ ಮ್ಯಾನೇಜರ್ ಚಂದು ಕಲಾಲ, ಓಂಕಾರ ಲಾಡ್ಜ್ ಮಾಲೀಕ ಹಣಮಂತ ಮಾರುತಿ ಭಜಂತ್ರಿ, ಓಂಕಾರ ಲಾಡ್ಜ್ ಮ್ಯಾನೇಜರ್ ಲವಿತ್ ಮೇತ್ರಿ, ಸಪ್ತಗಿರಿ ಲಾಡ್ಜ್ ಮ್ಯಾನೇಜರ್ ಆನಂದ್ ಮಾಂಗ್, ಮಾಲೀಕ ಸೇರಿ ಒಟ್ಟು 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ ಆನಂದ್ ಮಾಂಗ್, ಚಂದು ಕಲಾಲ, ಶಿವಕುಮಾರ ಈಳಗೇರ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಹರ್ಬಲ್ ಉತ್ಪನ್ನಗಳನ್ನು ಮಾರುವ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ?
ಇನ್ನು ಇತ್ತೀಚೆಗೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸರು ರೋರಾ ಲಕ್ಸುರಿ ಥಾಯ್ ಸ್ಪಾ ಹೆಸರಿನ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಜೊತೆಗೆ ಏಳು ಜನ ಯುವತಿಯರನ್ನು ರಕ್ಷಿಸಿದ್ದರು. ಇನ್ನು ಬಂಧಿತ ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದರು. ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ