ಇನ್ಸ್ಟಾದಲ್ಲಿ ಲವ್ ಮಾಡಿ ಬಿಹಾರದಲ್ಲಿ ಮದುವೆ, ಬಾಗಲಕೋಟೆಗೆ ಕರೆದಂದು ಐದೇ ದಿನಕ್ಕೆ ಪತ್ನಿ ಬಿಟ್ಟುಹೋದ ಪತಿ; ಮಹಿಳೆ ಕಂಗಾಲು
ನಾರಿಜಾ ಬೇಗಮ್ ಇನ್ಸ್ಟಾಗ್ರಾಮ್ ಫೋಟೋ ನೋಡಿ ಮಹ್ಮದ್ ಇಮ್ರಾನ್, ಸಲಾಮ್ ವಲೈಕುಮ್ ಎಂದು ವಿಷ್ ಮಾಡಿದ್ದ. ಇದಕ್ಕೆ ನಾರಿಜಾ ಕೂಡ ವಲೈಕುಮ್ ಅಸ್ಸಲಾಮ್ ಎಂದು ಪ್ರತಿಕ್ರಿಯೆ ನೀಡಿದ್ದಳು. ಆ ಚಾಟ್ ಮೂಲಕ ಪರಿಚಯವಾಗಿತ್ತು. ಬಳಿಕ ಸ್ನೇಹವಾಗಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ನಂತರ ಪರಸ್ಪರ ವಿಡಿಯೋ ಕಾಲ್ ಮಾಡುವುದು ನಡೆದಿತ್ತು.
ಬಾಗಲಕೋಟೆ, ಅ.07: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಾಟಿಂಗ್, ಡೇಟಿಂಗ್ ಸಾಮಾನ್ಯವಾಗಿದೆ. ಆದರೆ ಈ ರೀತಿ ಹುಟ್ಟಿದ ಪ್ರೀತಿ ಬಹಳ ದಿನ ಬದುಕಿಲ್ಲದ ಉದಾಹರಣೆಗಳೇ ಹೆಚ್ಚು. ಇನ್ಸ್ಟಾಗ್ರಾಮ್ನಲ್ಲಿ ಪ್ರೀತಿ (Instagram Love) ಮಾಡಿ ಬಳಿಕ ಮದುವೆಯಾಗಿ ಕೇವಲ ಒಂದೇ ತಿಂಗಳಲ್ಲಿ ಪತ್ನಿ ಬಿಟ್ಟು ಪತಿ ಎಸ್ಕೇಪ್ ಆದ ಘಟನೆ ಬಾಗಲಕೋಟೆ (Bagalkot) ತಾಲೂಕಿನ ಸೀಗಿಕೇರಿ ಗ್ರಾಮದಲ್ಲಿ ನಡೆದಿದೆ. ಬಿಹಾರ (Bihar) ಮೂಲದ ಮಹಿಳೆಗೆ ಬಾಗಲಕೋಟೆ ಮೂಲದ ವ್ಯಕ್ತಿ ಮೋಸ (Cheating) ಮಾಡಿದ್ದಾನೆ ಎನ್ನಲಾಗುತ್ತಿದೆ. ಮಹ್ಮದ್ ಇಮ್ರಾನ್ ಎಂಬ ಯುವಕ ನಾರಿಜಾ ಬೇಗಮ್ಳನ್ನು ಮದುವೆಯಾಗಿ ಮೋಸ ಮಾಡಿದ್ದಾನೆ.
ಮಹ್ಮದ್ ಇಮ್ರಾನ್ ಬಿಹಾರ ಮೂಲದ ಮಹಿಳೆಯನ್ನು ಮದುವೆಯಾಗಿ ಆಕೆಯನ್ನು ಬಾಗಲಕೋಟೆಗೆ ಕರೆತಂದು ಜಿಲ್ಲೆಯ ಸೀಗಿಕೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ಇರಿಸಿ ಐದೇ ದಿನಕ್ಕೆ ಎಸ್ಕೇಪ್ ಆಗಿದ್ದಾನೆ. ಪತಿ ನಾಪತ್ತೆಯಾಗುತ್ತಿದ್ದಂತೆ ಗೊತ್ತಿಲ್ಲದ ಊರಲ್ಲಿ ಏನು ಮಾಡುವುದು, ಹೇಗೆ ಬಾಳುವುದು ಎಂದು ದಿಕ್ಕು ತೋಚದೆ ನಾರಿಜಾ ಬೇಗಮ್ ಕಣ್ಣೀರು ಹಾಕಿದ್ದಾರೆ. ಮಹ್ಮದ್ ಇಮ್ರಾನ್ ಫೋನ್ ಸ್ವಿಚ್ ಆಫ್ ಬರುತ್ತಿದೆ.
ಕಾರು ಚಾಲಕನಾಗಿರುವ ಮಹ್ಮದ್ ಇಮ್ರಾನ್ ಹಾಗೂ ನಾರಿಜಾ ಬೇಗಮ್ ಇಬ್ಬರಿಗೂ ಈ ಹಿಂದೆ ಬೇರೊಬ್ಬರ ಜೊತೆ ಮದುವೆಯಾಗಿತ್ತು. ಇಬ್ಬರೂ ಅವರವರ ಜೋಡಿಗಳಿಂದ ತಲಾಕ್ ತೆಗೆದುಕೊಂಡಿದ್ದರು. ಸದ್ಯ ಒಂದು ತಿಂಗಳ ಹಿಂದೆ ಬಿಹಾರದಲ್ಲಿ ಇಬ್ಬರೂ ಮದುವೆಯಾಗಿದ್ದು ಪತ್ನಿಯನ್ನು ಬಿಟ್ಟು ಪತಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಡ್ರಗ್ ದಂಧೆ ಜಾಲ ಭೇದಿಸಿದ ಮುಂಬೈ ಪೊಲೀಸರು, 300 ಕೋಟಿ ಮೌಲ್ಯದ ಡ್ರಗ್ಸ್ ವಶ
ಇನ್ಸ್ಟಾಗ್ರಾಮ್ನಲ್ಲಿ ಹುಟ್ಟಿದ ಪ್ರೀತಿ ಮದುವೆಯಲ್ಲಿ ಅಂತ್ಯ
ನಾರಿಜಾ ಬೇಗಮ್ ಇನ್ಸ್ಟಾಗ್ರಾಮ್ ಫೋಟೋ ನೋಡಿ ಮಹ್ಮದ್ ಇಮ್ರಾನ್, ಸಲಾಮ್ ವಲೈಕುಮ್ ಎಂದು ವಿಷ್ ಮಾಡಿದ್ದ. ಇದಕ್ಕೆ ನಾರಿಜಾ ಕೂಡ ವಲೈಕುಮ್ ಅಸ್ಸಲಾಮ್ ಎಂದು ಪ್ರತಿಕ್ರಿಯೆ ನೀಡಿದ್ದಳು. ಆ ಚಾಟ್ ಮೂಲಕ ಪರಿಚಯವಾಗಿತ್ತು. ಬಳಿಕ ಸ್ನೇಹವಾಗಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ನಂತರ ಪರಸ್ಪರ ವಿಡಿಯೋ ಕಾಲ್ ಮಾಡುವುದು ನಡೆದಿತ್ತು. ಇನ್ಸ್ಟಾಗ್ರಾಮ್ ಲವ್ ಆಗಿ ಆರೇ ದಿನದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಸಂಬಂಧಿಕರನ್ನು ಒಪ್ಪಿಸಿ ಮದುವೆಯಾಗಲು ಮುಂದಾದರು. ಮಹ್ಮದ್ ಇಮ್ರಾನ್ ತನ್ನ ಮಾವ ಹಾಗೂ ಕೆಲವರ ಜೊತೆ ಬಿಹಾರಕ್ಕೆ ಹೋಗಿ ನಾರಿಜಾ ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ನಿಖಾ ಮಾಡಿಕೊಂಡಿದ್ದ. ನಂತರ ಪತ್ನಿಯನ್ನು ಬಾಗಲಕೋಟೆಗೆ ಕರೆತಂದು ನವನಗರದಲ್ಲಿ ವಾಸವಿದ್ದ. ಕಳೆದ ಐದು ದಿನದ ಹಿಂದೆ ಸೀಗಿಕೇರಿ ಗ್ರಾಮದಲ್ಲಿ ಬಾಡಿಗೆ ಮನೆಗೆ ದಂಪತಿ ಶಿಫ್ಟ್ ಆಗಿದ್ದರು. ಐದನೇ ದಿನಕ್ಕೆ ಇದೀಗ ಪತಿ ಎಸ್ಕೇಪ್ ಆಗಿದ್ದಾನೆ.
ನನಗೆ ಪತಿ ಬೇಕು, ನಾ ಸತ್ತರೂ ಇಲ್ಲೇ ಸಾಯ್ತಿನಿ. ವಾಪಸ್ ಬಿಹಾರಗೆ ಹೋಗಲ್ಲ. ನನ್ನ ಪತಿ ನನಗೆ ಹುಡುಕಿ ಕೊಡಿ ಎಂದು ನಾರಿಜಾ ಬೇಗಮ್ ಕಣ್ಣೀರು ಹಾಕಿದ್ದಾರೆ. ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ಪತಿ ಬಗ್ಗೆ ದೂರು ಅರ್ಜಿ ಸಲ್ಲಿಸಿದ್ದಾರೆ. ಆತನಿಗೆ ಹೊಡಿಬೇಡಿ ತೊಂದರೆ ಕೊಡಬೇಡಿ. ನನ್ನ ಜೊತೆ ಬದುಕುವಂತೆ ಮಾಡಿ ಎಂದು ನಾರಿಜಾ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ