ವಿಜಯಾನಂದ ಕಾಶಪ್ಪನವರ 2 ಮದುವೆ ಪ್ರಕರಣ; ಪೂಜಾಶ್ರಿ ಗರ್ಭವತಿಯಾಗಿದ್ದಾಗ ಸ್ಕ್ಯಾನಿಂಗ್ ಮಾಡಿಸಿದ್ದ ರಿಪೋರ್ಟ್ ಬಹಿರಂಗ
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾಶ್ರಿ ಗರ್ಭವತಿಯಾಗಿದ್ದಾಗ ಬೆಂಗಳೂರಿನ ಮದರ್‌ಹುಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದ ರಿಪೋರ್ಟ್ ಬಹಿರಂಗಗೊಂಡಿದೆ.
ಬಾಗಲಕೋಟೆ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ (Vijayanand Kashappanavar) ಎರಡನೇ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾಶ್ರಿ ಗರ್ಭವತಿಯಾಗಿದ್ದಾಗ ಬೆಂಗಳೂರಿನ (Bengaluru) ಮದರ್‌ಹುಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದ ರಿಪೋರ್ಟ್ ಬಹಿರಂಗಗೊಂಡಿದೆ. ರಿಪೋರ್ಟ್ನಲ್ಲಿ ಪೇಷಂಟ್ ಹೆಸರಲ್ಲಿ ಸಾನಿಕಾ ಕಾಶಪ್ಪನವರ ಎಂದು ಹೆಸರು ಉಲ್ಲೇಖವಾಗಿದೆ. ಸಿನಿಮಾಗಾಗಿ ಸಾನಿಕಾ, ಪೂಜಾಶ್ರಿ ಎಂದು ಹೆಸರು ಬದಲಿಸಿಕೊಂಡಿದ್ದರು. ವಿಜಯಾನಂದ ಕಾಶಪ್ಪನವರ ಹಾಗೂ ನಟಿ ಪೂಜಾಶ್ರಿಗೆ ಜನಿಸಿದ ಮಗು ಹಸುಗೂಸು ಇದ್ದಾಗಿನ ಪೊಟೊ ವೈರಲ್ ಆಗಿದೆ.
ಏನಿದು ಪ್ರಕರಣ
ತಂದೆಯ ಕಾಲಂ ಎದುರಿನಲ್ಲಿ ‘ವಿಜಯಾನಂದ ಕಾಶಪ್ಪನವರ’ ಎಂಬ ಉಲ್ಲೇಖವಿರುವ ಜನನ ಪ್ರಮಾಣಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹೆಸರು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರದೇ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವೈರಲ್ ಆಗಿರುವ ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ‘ಪೂಜಾಶ್ರಿ ಎಸ್’ ಎಂದು ಉಲ್ಲೇಖಗೊಂಡಿದೆ. ಇದು ವಿಜಯಾನಂದ ಕಾಶಪ್ಪನವರ ಅವರು ಪೂಜಾಶ್ರಿ ಎಂಬ ನಟಿಯ ಜೊತೆ ಎರಡನೇ ಮದುವೆ ಆಗಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಇವರ ಮದುವೆ ಒಂದು ವರ್ಷದ ಹಿಂದೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಜನನ ಪ್ರಮಾಣ ಪತ್ರದಲ್ಲಿ ಮಗು 1-9-2021 ರಲ್ಲಿ ಹುಟ್ಟಿದ್ದು, ಹೆಣ್ಣುಮಗುವಿನ ಹೆಸರು ಉಲ್ಲೇಖವಾಗಿದೆ. ಜನ್ಮಸ್ಥಳ ಮದರ್ ಹುಡ್ ಆಸ್ಪತ್ರೆ ಬೆಂಗಳೂರು. ನೊಂದಣಿ ದಿನಾಂಕ 22-09-2021 ಎಂದು ಉಲ್ಲೇಖವಾಗಿದೆ. ವಿಜಯಾನಂದ ಕಾಶಪ್ಪನವರ ಮತ್ತು ಮೊದಲ ಪತ್ನಿ ವೀಣಾ ಕಾಶಪ್ಪನವರ ಅವರ ಮಧ್ಯೆ ಒಂದು ವರ್ಷದ ಹಿಂದೆ ಜಗಳವಾಗಲು 2ನೇ ಮದುವೆಯೇ ಮುಖ್ಯ ಕಾರಣ ಎಂಬ ಮಾತು ಬಾಗಲಕೋಟೆಯಲ್ಲಿ ಈ ಹಿಂದೆ ಕೇಳಿಬಂದಿತ್ತು.

ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿದ್ದ ವೀಣಾ ಕಾಶಪ್ಪನವರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
Published On - 10:06 pm, Sat, 23 July 22