ಬಾಗಲಕೋಟೆ: ಪತ್ರಿಕೆಯೊಂದರ ಸ್ಟ್ರಿಂಜರ್ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ ಶಂಕೆ, ಚಪ್ಪಲಿ ಬೈಕ್ ಪತ್ತೆ
ರಾಜ್ಯಮಟ್ಟದ ಪತ್ರಿಕೆಯೊಂದರ ಸ್ಟ್ರಿಂಜರ್ ಬೀಳಗಿ ತಾಲ್ಲೂಕಿನ ಅನಗವಾಡಿ ಬಳಿ ಘಟಪ್ರಭಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಬಾಗಲಕೋಟೆ: ರಾಜ್ಯಮಟ್ಟದ ಪತ್ರಿಕೆಯೊಂದರ ಸ್ಟ್ರಿಂಜರ್ ಬೀಳಗಿ ತಾಲ್ಲೂಕಿನ ಅನಗವಾಡಿ ಬಳಿ ಘಟಪ್ರಭಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ನದಿ ಸೇತುವೆ ಬಳಿ ಸ್ಟ್ರಿಂಜರ್ ಪ್ರಭು ಲಕ್ಷಟ್ಟಿ ಅವರ ಚಪ್ಪಲಿ ಬೈಕ್ ಪತ್ತೆಯಾಗಿದೆ. ಬೈಕ್‌ನಲ್ಲಿ ಬಂದು ಚಪ್ಪಲಿ ಬಿಟ್ಟು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಟ್ರಿಂಜರ್ ಪ್ರಭು ಲಕ್ಷಟ್ಟಿ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದರು. ಇದೀಗ ಅನಗವಾಡಿ ಸೇತುವೆ ಮೇಲೆ ಬೈಕ್ ಚಪ್ಪಲಿ ಪತ್ತೆಯಾಗಿದೆ.
ಸ್ಥಳಕ್ಕೆ ಬೀಳಗಿ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಯುವಕ ಸಾವು
ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕದೀರ್ (25) ಮೃತ ಯುವಕ. ಜುಲೈ 20ರಂದು ಎಚ್ಎಎಲ್ ಠಾಣಾ ವ್ಯಾಪ್ತಿಯ ಇಸ್ಲಾಂಪುರದಲ್ಲಿ ಕದೀರ್ ಗ್ಯಾಸ್ ರಿಫಿಲ್ಲಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ರಿಫಿಲ್ಲಿಂಗ್ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಕದೀರ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದ್ವಿಚಕ್ರವಾಹನಕ್ಕೆ ಅಪರಿಚಿತ ಕಾರು ಡಿಕ್ಕಿ; ಬೈಕ್ ಸವಾರರು ಗಂಭೀರ
ಹಾಸನ: ಹಾಸನ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರವಾಹನಕ್ಕೆ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಈ ವೇಳೆ ಬೈಪಾಸ್ ರಸ್ತೆಯಲ್ಲಿ ಸಚಿವ ಕೆ. ಗೋಪಾಲಯ್ಯ ಹಾಸನಕ್ಕೆ ತೆರಳುತ್ತಿದ್ದರು.
ಗಾಯಾಳುಗಳನ್ನು ಕಂಡ ಸಚಿವರು ತಮ್ಮ ಅಂಗರಕ್ಷಕರ ವಾಹನದಲ್ಲಿ ಗಾಯಾಳುಗಳನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಅಪರಿಚಿತ ಶವ ಪತ್ತೆ
ಆನೆಕಲ್: ನಿರ್ಜನ ಪ್ರದೇಶದಲ್ಲಿ ಗುರುತು ಸಿಗದಷ್ಟು ಕೊಳೆತು ಹೋಗಿರುವ ಅಪರಿಚಿತ ಶವ ಪತ್ತೆಯಾಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕನಾಗಮಂಗಲ ಎಮ್ ಜಿ ಅಪಾರ್ಟ್ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ಶವ ಪತ್ತೆಯಾಗಿದೆ. ಪಾರ್ಟಿ ಮಾಡಲು ಬಂದವರು ಶವ ನೋಡಿ ಶಾಕ್ ಆಗಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 4:42 pm, Sun, 24 July 22