ಅಧಿಕಾರದಿಂದ ಪದಚ್ಯುತಿ ಆಗೋದು ಬೊಮ್ಮಾಯಿಗೆ ಬರಬಾರದು ಎಂದಾದರೆ, 2ಎ ಮೀಸಲಾತಿ ನೀಡಲಿ: ಯತ್ನಾಳ್
ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆದರೆ ಸರಿ. ಇಲ್ಲದಿದ್ದರೆ ಡಿ.22ರಂದು ಏನು ಮಾಡಬೇಕೆಂದು ನಿರ್ಣಯ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬಾಗಲಕೋಟೆ: ಸಿಎಂ ಬಸವರಾಜ ಬೊಮ್ಮಾಯಿ (CM Bommai) ಕೊಟ್ಟ ಮಾತಿನಂತೆ ನಡೆದರೆ ಸರಿ. ಇಲ್ಲದಿದ್ದರೆ ಡಿ.22ರಂದು ಏನು ಮಾಡಬೇಕೆಂದು ನಿರ್ಣಯ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಅವರು ಮಾತನಾಡಿ, ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದವರು ನಮಗೆ ಮೋಸ ಮಾಡಿದರು. 6 ತಿಂಗಳೊಳಗೆ ಮೀಸಲಾತಿ ಕೊಡುತ್ತೇನೆ ಅಂತೇಳಿ ಮೋಸ ಮಾಡಿದ್ರು. ನಮಗೆ ಮೋಸ ಮಾಡಿದ್ದಕ್ಕೆ ಅಧಿಕಾರದಿಂದಲೇ ಪದಚ್ಯುತಿ ಆದರು. ಸಿಎಂ ಬಸವರಾಜ ಬೊಮ್ಮಾಯಿಗೂ ಇಂತಹ ಪರಿಸ್ಥಿತಿ ಬರಬಾರದು. 25 ಲಕ್ಷ ಜನ ಸುವರ್ಣ ಸೌಧದ ಪ್ರತಿಭಟನೆ ವೇಳೆ ಸೇರುವ ನಿರೀಕ್ಷೆ ಇದೆ. 22ಕ್ಕೆ ದಾಖಲೆ ರೀತಿಯಲ್ಲಿ ನಮ್ಮ ಜನ ಸೇರುತ್ತದೆ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ಗಡುವು ಕೊಡಬೇಕಾಗುತ್ತದೆ ಎಲ್ಲವೂ ಒಮ್ಮೆಲೆ ಆಗೋದಿಲ್ಲ ಎಂದು ಹೇಳಿದರು.
2. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತಾಡುವ ನೈತಿಕತೆಯಿಲ್ಲ
ಸುವರ್ಣ ಸೌಧದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣಕ್ಕೆ ಡಿ.ಕೆ.ಶಿವಕುಮಾರ್ ವಿರೋಧಿ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ವೀರ ಸಾವರ್ಕರ್, ಅಂಬೇಡ್ಕರ್ ತ್ಯಾಗದಿಂದ ಇವರು ಐವತ್ತು ವರ್ಷ ಅಧಿಕಾರ ಅನುಭವಿಸಿದ್ದಾರೆ. ಮಾನ ಮರ್ಯಾದೆ ಇದ್ರೆ ಸಾವರ್ಕರ್ ಬಗ್ಗೆ ಮಾತಾಡೋದು ಬಿಡಬೇಕು. ವಿಧಾನಸೌಧ, ಸುವರ್ಣ ಸೌಧ, ಸಂಸತ್ನಲ್ಲೂ ಫೋಟೋ ಹಾಕಿದಿವಿ. ಇಂದಿರಾಗಾಂಧಿ ಕೂಡ ಸಾವರ್ಕರ್ ಸ್ಟಾಂಪ್ ಬಿಡುಗಡೆ ಮಾಡಿದಾರೆ.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ? ಪಟ್ಟು ಬಿಡದ ಬಿಜೆಪಿ: ಸರ್ಕಾರವನ್ನು ಹಣಿಯಲು ಸಿದ್ದವಾದ ಕಾಂಗ್ರೆಸ್
ಇಂದಿರಾಗಾಂಧಿ ತಮ್ಮ ಪತ್ರದಲ್ಲಿ ಕೋಟ್ ಮಾಡಿದ್ದಾರೆ. ಈ ದೇಶದ ಕಠಿಣ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅಂತ ಹೇಳಿದಾರೆ. ಆದ್ದರಿಂದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜೈಲಿಗೆ ಹೋಗಿ ಬಂದ ಭ್ರಷ್ಟರಿಗೆ ಮಾತಾಡುವ ನೈತಿಕತೆಯಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಯಡಿಯೂರಪ್ಪರಿಂದ 10 ಕೋಟಿ ರೂ ವಸೂಲಿ: ಅಧಿವೇಶನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದ ಯತ್ನಾಳ್
3. ಸೋನಿಯಾ ಗಾಂಧಿಗೂ ಭಾರತ ದೇಶಕ್ಕೂ ಏನ್ ಸಂಬಂಧ: ಯತ್ನಾಳ್ ತಿರುಗೇಟು
ಇನ್ನು ಕರ್ನಾಟಕಕ್ಕೂ ಸಾವರ್ಕರ್ಗೂ ಏನು ಸಂಬಂಧ ಹೇಳಿಕೆ ವಿಚಾರಕ್ಕೆ ಯತ್ನಾಳ್ ತಿರುಗೇಟು ನೀಡಿದ್ದು, ಸೋನಿಯಾ ಗಾಂಧಿಗೂ ಭಾರತ ದೇಶಕ್ಕೂ ಏನ್ ಸಂಬಂಧ. ಮಹಾರಾಷ್ಟ್ರ ರಾಜ್ಯದಲ್ಲಿ ಬಹಳಷ್ಟು ಸತ್ಪುರುಷರು ಹುಟ್ಟಿದ್ದಾರೆ. ಸರ್ದಾರ್ ಪಟೇಲ್ ಗುಜರಾತ್, ಅಂಬೇಡ್ಕರ್ ಮಹಾರಾಷ್ಟ್ರದವರು. ಯಾರು ಎಲ್ಲಿ ಹುಟ್ಟಿದರು ಎಂಬುವುದು ಮುಖ್ಯವಲ್ಲ. ಕೋಟ್ಯಂತರ ಜನರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ವಿ.ಡಿ.ಸಾವರ್ಕರ್ ಇತಿಹಾಸ ಓದಿದವರಿಗೆ ಅವರ ಬಗ್ಗೆ ಗೊತ್ತಿದೆ. ರಾಹುಲ್, ಡಿ.ಕೆ.ಶಿವಕುಮಾರ್ 1 ತಿಂಗಳು ಆ ಜೈಲಿನಲ್ಲಿದ್ದು ಬರಲಿ. ವಿ.ಡಿ.ಸಾವರ್ಕರ್ ಗಾಣದ ಎತ್ತಿನ ರೀತಿ ಶಿಕ್ಷೆ ಅನುಭವಿಸಿದ್ದಾರೆ. ಕಾಲಪಾನಿ ಶಿಕ್ಷೆ ಎದುರಿಸಿ ಸಾವರ್ಕರ್ ಕುಟುಂಬ ತ್ಯಾಗ ಮಾಡಿದೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.