ಜಿಲ್ಲಾ ಕಾರಾಗೃಹದ ಕೈದಿಗಳನ್ನು ಮನೆ ಕೆಲಸಕ್ಕೆ ಒಳಸಿಕೊಂಡ ಜೈಲು ಅಧೀಕ್ಷಕ: ವಿಡಿಯೋ ವೈರಲ್

ಜೈಲು ಅಧೀಕ್ಷಕ ದತ್ತಾತ್ರಿ ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ಖೈದಿಗಳನ್ನು ಹೊರಗೆ ಬಿಡುವುದೇ ದೊಡ್ಡ ರಿಸ್ಕ್ ಅಂತಹದರಲ್ಲಿ ಖೈದಿಗಳನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ.

ಜಿಲ್ಲಾ ಕಾರಾಗೃಹದ ಕೈದಿಗಳನ್ನು ಮನೆ ಕೆಲಸಕ್ಕೆ ಒಳಸಿಕೊಂಡ ಜೈಲು ಅಧೀಕ್ಷಕ: ವಿಡಿಯೋ ವೈರಲ್
ಮನೆ ಕೆಲಸ ಮಾಡಿ ಖೈದಿಗಳು ಹೊರಬರುತ್ತಿರುವ ವಿಡಿಯೋ ಲಭ್ಯ
Follow us
TV9 Web
| Updated By: ಆಯೇಷಾ ಬಾನು

Updated on: Sep 18, 2022 | 1:08 PM

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕಾರಾಗೃಹ ಅಧೀಕ್ಷಕನ ಅಂದಾ ದರ್ಬಾರ್ ಬಯಲಾಗಿದೆ. ಜೈಲು ಅಧೀಕ್ಷಕ ದತ್ತಾತ್ರಿ ಮೇದಾ ಜಿಲ್ಲಾ ಕಾರಾಗೃಹದ ಕೈದಿಗಳನ್ನು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಲಭ್ಯವಾಗಿದೆ. ದತ್ತಾತ್ರಿ ವಿಚಾರಣಾಧೀನ ಖೈದಿಗಳಿಂದ‌ ಮನೆ ಕೆಲಸ ‌ಮಾಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.

ಜೈಲು ಅಧೀಕ್ಷಕ ದತ್ತಾತ್ರಿ ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ಖೈದಿಗಳನ್ನು ಹೊರಗೆ ಬಿಡುವುದೇ ದೊಡ್ಡ ರಿಸ್ಕ್ ಅಂತಹದರಲ್ಲಿ ಖೈದಿಗಳನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ. ವಿಚಾರಣಾಧೀನ ಖೈದಿಗಳಿಂದ‌ ತಮ್ಮ ಮನೆ ಕೆಲಸ ‌ಮಾಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮನೆ ಕೆಲಸ ಮಾಡಿ ಖೈದಿಗಳು ಹೊರಬರುತ್ತಿರುವ ವಿಡಿಯೋ ಲಭ್ಯವಾಗಿದೆ. ಇದನ್ನೂ ಓದಿ: Facebook: ಯಾರ ದಾಂಪತ್ಯ ಹೇಗಿದೆ ಎಂಬುದು ನಿಮಗೆ ಹೇಗೆ ತಿಳಿಯುತ್ತೆ? ನ್ಯಾಯಾಧೀಶರ ಹೇಳಿಕೆಗೆ ಫೇಸ್​ಬುಕ್ ಪ್ರತಿನಿಧಿ ತಬ್ಬಿಬ್ಬು

ಬಾಗಲಕೋಟೆಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಬಾಗಲಕೋಟೆಯ ನವನಗರದಲ್ಲಿರುವ ದತ್ತಾತ್ರಿ ಮೇದಾ ಅವರ ಮನೆಯಿಂದ ನಾಲ್ಕರಿಂದ ಐದು ಜನ ಖೈದಿಗಳು ಮನೆ ಕೆಲಸ ಮುಗಿಸಿ ಹೊಡರುವಾಗ ವಿಡಿಯೋ ಸೆರೆ ಹಿಡಿಯಲಾಗಿದೆ. ಖೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಕೇಳೋಕೆ ಹೋದ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರಿಗೆ ಹೋಗಿ ಪ್ಲೀಜ್. ದಿನಲೂ ಬರೋದಿಲ್ಲ ಯಾವಾಗಲೋ ಒಮ್ಮೆ ಕರೆದುಕೊಂಡು ಬಂದಿದ್ದೀನಿ. ಅವರನ್ನೆಲ್ಲ ಕಳಿಸಿದ್ದೀನಿ. ಸುಮ್ನೆ ಬಿಟ್ಟು ಬಿಡಿ ಎಂದಿದ್ದಾರೆ. ಈ ಮೂಲಕ ತಾವು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ