ಮಾಧುಸ್ವಾಮಿ ವಿರುದ್ಧ ಕಿಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಜೆ.ಸಿ.ಮಾಧುಸ್ವಾಮಿ ಬಹುಶಃ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಾನು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿ ಒಂದು ತಿಂಗಳಾಗಿದೆ. ಒಂದು ತಿಂಗಳ ಬಳಿಕ ಅವರು ಈ ರೀತಿ ಮಾತಾಡ್ತಿದ್ದಾರೆ. ಅಪ್ಪ, ಮಕ್ಕಳು, ಮೊಮ್ಮಕ್ಕಳು ದೋಚಿದ್ದಾರೆ ಎಂಬ ಪದ ಬಳಸಿದ್ದಾರೆ. ಯಾರು ದೋಚುತ್ತಿದ್ದಾರೆ, ಲೂಟಿ ಮಾಡ್ತಿದ್ದಾರೆಂದು ಜನ ನೋಡ್ತಿದ್ದಾರೆ. ರೈತರು ಹಣ ಕಟ್ಟದಿದ್ದರೆ ನೋಟಿಸ್ ಕೊಟ್ರೆ ತಪ್ಪಿಲ್ಲ ಅಂತಾ ಹೇಳಿದ್ದಾರೆ. ಇವರೆಲ್ಲ ವಿಕೃತ ಮನಸ್ಸಿನವರು, ಅವರ ಸರ್ಟಿಫಿಕೆಟ್ ನನಗೆ ಬೇಕಾಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಉಡುಪಿ: ಕರಾವಳಿ ಹಿಂದೂ ಧರ್ಮದ ಪ್ರಯೋಗಶಾಲೆ ಎಂದ ಸಿದ್ದರಾಮಯ್ಯ
ಇನ್ನು ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ‘ಕೈ’ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಂದು ರಾಜ್ಯದಲ್ಲಿ ಈ ಸರ್ಕಾರ ಬರುವುದಕ್ಕೆ ಕಾರಣ ಯಾರು? ಈ ಬಗ್ಗೆ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿಲ್ವಾ ಎಂದು ಪ್ರಶ್ನಿಸಿದರು. ನಮ್ಮ ದೇಶದ ಸಂಪತ್ತು ಕೇವಲ 166 ಜನರ ಕೈಯಲ್ಲಿದೆ. ಕೊವಿಡ್ಗೂ ಮುನ್ನ 106 ಜನರಿದ್ದರು, ಈಗ 166ಕ್ಕೆ ಏರಿಕೆಯಾಗಿದೆ. ಬಡವರ ಆದಾಯ ಹೆಚ್ಚಿಸುವುದೇ ಪಂಚರತ್ನ ಯಾತ್ರೆ ಮೂಲ ಉದ್ದೇಶ ಎಂದರು.
ಇದನ್ನೂ ಓದಿ: ಕನಕಪುರ ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಕೆಶಿಗೆ ಆಫರ್, ನಿಜ ಎಂದ ಡಿಕೆ ಶಿವಕುಮಾರ್
ರಾಜಕೀಯ ಮುಖಂಡರ ಎಲ್ಲೆ ಮೀರಿದ ಮಾತಿನ ದಾಟಿ ವಿಚಾರಕ್ಕೆ ಹೇಳಿಕೆ ನೀಡಿದ್ದು, ಬಿಜೆಪಿ, ಕಾಂಗ್ರೆಸ್ನಲ್ಲಿ ಪರಸ್ಪರ ಕಿತ್ತಾಟ ಇದೆಯಲ್ಲ. ಅದು ಅವರನ್ನೆ ಆಪೋಶನ ತೆಗೆದುಕೊಳ್ಳುತ್ತೆ. ನಾನು ವೈಯಕ್ತಿಕವಾಗಿ ಚರ್ಚೆಗೆ ಹೋಗಿಲ್ಲ. ನನ್ನ ಪಂಚರತ್ನ ಯೋಜನೆಗೆ ಬೆಂಬಲ ಕೋರುತ್ತಿದ್ದೇನೆ. ಯಾವ ಪಕ್ಷದಲ್ಲಿ ಯಾರು ಟೀಕೆ ಮಾಡ್ತಾರೆ ಅವರಿಗೆ ಬಿಟ್ಟಿದ್ದೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.