ಬಾಗಲಕೋಟೆ: ಅಸ್ಸಾಂನಲ್ಲಿ (Assam) ಸಿಡಿಲು ಬಡಿದು ರಾಜ್ಯದ ಬಿಎಸ್ಎಫ್ ಯೋಧ (BSF Army) ಹುತಾತ್ಮರಾಗಿದ್ದಾರೆ. 41 ವರ್ಷದ ಅಶೋಕ್ ಮುಂಡಾ ಮೃತ ಬಿಎಸ್ಎಫ್ ಯೋಧ. ಅಶೋಕ್ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ನಿವಾಸಿ. ನಿನ್ನೆ (ಜೂನ್ 04) ರಾತ್ರಿ 12 ಗಂಟೆಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಶೋಕ್ ಬಿಎಸ್ಎಫ್ 31 ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಅಶೋಕ್ ಪಾರ್ಥಿವ ಶರೀರ ನಾಳೆ ಬೆಳಿಗ್ಗೆ ಸ್ವಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ.
ಈಜಲು ಇಳಿದಿದ್ದ ವಿದ್ಯಾರ್ಥಿ ಸಾವು:
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಕೆರೆಯಲ್ಲಿ ಈಜಲು ಇಳಿದಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬೆಂಗಳೂರಿನ ಉದಯನಗರದ ಬಿವಿನ್(18) ಮೃತ ದುರ್ದೈವಿ. ನಿನ್ನೆ ಶನಿಮಹಾತ್ಮ ದೇವಸ್ಥಾನಕ್ಕೆ ನಾಲ್ವರು ವಿದ್ಯಾರ್ಥಿಗಳು ಬಂದಿದ್ದರು. ಕೆರೆ ಬಳಿ ಚಿಕನ್ ಬೇಯಿಸಿಕೊಂಡು ತಿಂದಿದ್ದರು. ನಂತರ ಕೆರೆಯಲ್ಲಿ ಈಜಲು ಇಳಿದಿದ್ದ ವೇಳೆ ಬಿವಿನ್ ನೀರುಪಾಲಾಗಿದ್ದಾನೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸುತ್ತಿದೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳದ ಜೊತೆಗೆ ಅನಿಷ್ಟವೆಂದು ನಿಂದಿಸಿದಕ್ಕೆ ಫ್ಯಾನ್ಗೆ ನೇಣುಬಿಗಿದುಕೊಂಡು ಮಹಿಳೆ ಸೂಸೈಡ್
ಮೊಸಳೆ ಎಳೆದೊಯ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ:
ವಿಜಯಪುರ: ಕೃಷ್ಣಾ ನದಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮುದ್ದೇಬಿಹಾಳ ತಾಲೂಕಿನನಾಗರಾಳ ಗ್ರಾಮದ ಬಳಿ ಮಲ್ಲನಗೌಡ ಬಿರಾದಾರ(47) ಎಂಬುವವರ ಶವ ಪತ್ತೆಯಾಗಿದೆ. 3 ದಿನಗಳ ಹಿಂದೆ ಮಲ್ಲನಗೌಡ ಬಿರಾದಾರ ನದಿಯಲ್ಲಿ ಸ್ನಾನಕ್ಕೆ ಇಳಿದಾಗ ನಾಪತ್ತೆಯಾಗಿದ್ದರು. ಅಗ್ನಿಶಾಮಕ ದಳ, ಪೊಲೀಸರು ನಿರಂತರವಾಗಿ ಶೋಧ ನಡೆಸಿದ್ದರು. ಮಲ್ಲನಗೌಡ ಬಿರಾದಾರನ ದೇಹವನ್ನು ಮೊಸಳೆ ಅರ್ಧ ತಿಂದಿದೆ. ಸದ್ಯ ಈ ಪ್ರಕರಣ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 am, Sun, 5 June 22