ಬಾಗಲಕೋಟೆ ದೋಣಿ ದುರಂತ; ಮೂವರ ಸಾವಿಗೆ ಹೊಣೆ ಯಾರು?

ಇನ್ನು ಈ ಬಗ್ಗೆ ಮಾತನಾಡಿದ ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಘಟನೆ ಬಗ್ಗೆ ಕುಟುಂಬಸ್ಥರು ದೂರು ನೀಡಬಹುದು. ತಮಗೆ ಯಾರ ಮೇಲೆ ಅನುಮಾನವಿದೆ.ಯಾರ ನಿರ್ಲಕ್ಷ್ಯ ದಿಂದ ಘಟನೆ ನಡೆದಿದೆ ಎಂಬ ಬಗ್ಗೆ ಅವರ ಹೆಸರನ್ನು ಉಲ್ಲೇಖಿಸಿ ದೂರು ನೀಡಿದರೆ ಆ ಪ್ರಕಾರ ನಾವು ಖಂಡಿತ ಕಾನೂನು ಕ್ರಮ ಕೈಗೊಳ್ಳೋದಾಗಿ ತಿಳಿಸಿದರು.

ಬಾಗಲಕೋಟೆ ದೋಣಿ ದುರಂತ; ಮೂವರ ಸಾವಿಗೆ ಹೊಣೆ ಯಾರು?
ಪರಶುರಾಮ, ಶಿವಪ್ಪ, ಮತ್ತು ಶರಣಗೌಡ ಬಿರಾದಾರ
Follow us
TV9 Web
| Updated By: guruganesh bhat

Updated on:Oct 09, 2021 | 9:02 PM

ಬಾಗಲಕೋಟೆ: ಓರ್ವ ವೃದ್ದನ ಸಾವು ಮೂವರ ಪ್ರಾಣ ಬಲಿ ಪಡೆದ ದುರ್ಘಟನೆ ಬಾಗಲಕೋಟೆ ಮತ್ತು ವಿಜಯನಗರ ಜಿಲ್ಲೆಗಳ ಜನರ ಮನಕಲುಕಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಗ್ರಾಮದ ಬಳಿ ನಾರಾಯಣಪುರ ಜಲಾಶಯ ಹಿನ್ನೀರಲ್ಲಿ ನಡೆದ ದುರಂತ ಎರಡು ಜಿಲ್ಲೆಗಳ ಜನರ ಮನಕಲುಕಿಸಿದೆ‌. ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಗ್ರಾಮದ ಶಿವಪ್ಪ ಅಮಲೂರ ಅಕ್ಟೋಬರ್ 7 ರಂದು ಧನ್ನೂರ ಬಳಿ ನಾರಾಯಣಪುರ ಜಲಾಶಯದ ಹಿನ್ನೀರಲ್ಲಿ ಸಾವನ್ನಪ್ಪಿದ್ದ. ಆತನ ಶವ ಹುಡುಕೋದಕ್ಕೆ ಶಿವಪ್ಪನ ಅಣ್ಣನ ಮಗ ಯಮನಪ್ಪ ಅಮಲೂರ, ಅಳಿಯ ಶರಣಗೌಡ ಬಿರಾದಾರ ಸೇರಿದಂತೆ ಒಂಭತ್ತು ಜನರು ಬೋಟ್ ತೆಗೆದುಕೊಂಡು ಹೋಗಿದ್ದರು. ಆದರೆ ಈ ವೇಳೆ ಬೋಟ್ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗುಲಿ ಶಿವಪ್ಪನ ಅಣ್ಣನ ಮಗ ಯಮನಪ್ಪ, ಅಳಿಯ ಶರಣಗೌಡ, ಬೋಟ್ ಆಪರೇಟರ್ ಪರಶುರಾಮ ತಳವಾರ ಮೃತಪಟ್ಟಿದ್ದಾರೆ. ಓರ್ವನ ಶವ ಹುಡುಕಾಡೋದಕ್ಕೆ ಹೋಗಿ ಮೂವರು ಬಲಿಯಾಗಿದ್ದು ಎಲ್ಲರ ಮನಕಲುಕುವಂತೆ ಮಾಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌. ಆದರೆ ಇಲ್ಲಿ ಈ ಮೂವರ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದ್ದು ಅನೇಕ ಯಡವಟ್ಟುಗಳು, ನಿರ್ಲಕ್ಷ್ಯ, ಬೇಜವಾಬ್ದಾರಿಯೇ ಮೂವರ ದುರಂತಕ್ಕೆ ಕಾರಣವೆಂಬುದು ತಿಳಿದು ಬಂದಿದೆ.

ಧನ್ನೂರು ದೋಣಿ ದುರಂತ ಜಿಲ್ಲೆಯಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಓರ್ವನ ಶವ ಹುಡುಕಾಟಕ್ಕೆ ಹೋಗಿ ಮೂವರು ಬಲಿಯಾಗಿದ್ದು ಹಲವರ ನಿರ್ಲಕ್ಷ್ಯ ಬೇಜವಾಬ್ದಾರಿಯ ಪರಮಾವಧಿಯಾಗಿದೆ.

ಮೊದಲ ಬೇಜವಾಬ್ದಾರಿ ಇಲ್ಲಿ ಶಿವಪ್ಪ ಅಮಲೂರು ವಿಜಯಪುರ ಜಿಲ್ಲೆ ಹರನಾಳ ಮೂಲದವ. ಹರನಾಳ ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಧನ್ನೂರು ಗಡಿ ಭಾಗದ ಹಳ್ಳಿಗಳು. ಶಿವಪ್ಪ ಹಿನ್ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ನಂತರ ಶವ ಹುಡುಕಾಟಕ್ಕೆ ವಿಜಯಪುರ ಜಿಲ್ಲೆ ಅಗ್ನಿಶಾಮಕ ದಳ ಸಿಬ್ಬಂದಿ ಮುಂದಾಗಿತ್ತು.ಆಗ ಶಿವಪ್ಪನ ಅಳಿಯ,ಅಣ್ಣನ ಮಗನ‌ ಸಮೇತ ಕೂಡಲಸಂಗಮಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗುತ್ತಿಗೆಯಾಧಾರದ ಮೇಲೆ ಸ್ವೀಪರ್ ಕೆಲಸ‌ಮಾಡುತ್ತಿದ್ದ ಪರಶುರಾಮ ತಳವಾರ ನನ್ನು ಬೋಟ್ ಚಾಲನೆಗೆ ಕರೆದುಕೊಂಡು ಹೋಗಿದ್ದಾರೆ‌. ಆದರೆ ಕಾರ್ಯಾಚರಣೆ ವೇಳೆ ಹಿನ್ನೀರಲ್ಲಿ ವಿದ್ಯುತ್ ಕಂಬ ಇರೋದನ್ನು ಗಮನಿಸಿದರೂ ಹೆಸ್ಕಾಮ್ಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಿಲ್ಲ. ಇದರಿಂದ ಕಾರ್ಯಾಚರಣೆ ವೇಳೆ ತೇಲುತ್ತಾ ವಿದ್ಯುತ್ ತಂತಿ ದೋಣಿ ಮೇಲ್ಭಾಗಕ್ಕೆ ತಾಗಿ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪುವಂತಾಗಿದೆ. ಇನ್ನು ಲೈಪ್ ಜಾಕೆಟ್ ಸುರಕ್ಷಾಪರಿಕರ ಕೂಡ ಇರದಿರೋದು ಒಂದು ಕಾರಣವಾಗಿದೆ.

ಎರಡನೇ ಬೇಜವಾಬ್ದಾರಿ ಯಾರದ್ದು? ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೂಡಲಸಂಗಮ ನಿವಾಸಿ ಪರಶುರಾಮ ತಳವಾರ ಕೇವಲ ಒಂದುವರೆ ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ. ಆದರೆ ಈ ಹಿಂದೆ ಆತ ಕೂಡಲಸಂಗಮದ ನದಿಯಲ್ಲಿ ಪ್ರವಾಸಿಗರ ವಿಹಾರದ ದೋಣಿ ಓಡಿಸುತ್ತಿದ್ದ. ಆದರೆ ಪರವಾನಿಗೆ ಇಲ್ಲ ಅಂತ ಆತನನ್ನು ಬೋಟ್ ಓಡಿಸೋದರಿಂದ ಬಿಡಿಸಲಾಗಿತ್ತು. ಇನ್ನು ಅವರ ತಾಯಿ ಪ್ರಾಧಿಕಾರ ಕಚೇರಿಯಲ್ಲಿ ಗುತ್ತಿಗೆಯಾಧಾರದ ಮೇಲೆ ಡಿ ದರ್ಜೆ ಕೆಲಸ‌ ಮಾಡುತ್ತಿದ್ದಳು. ವಯಸ್ಸಾದ ಹಿನ್ನೆಲೆ ಆಕೆ ನನ್ನ ಮಗನನ್ನು ಸೇರಿಸಿಕೊಳ್ಳಿ ಎಂದು ತಿಳಿಸಿದ ಪರಿಣಾಮ ಪರಶುರಾಮನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಆದರೆ ಪ್ರಾಧಿಕಾರ ಕಚೇರಿ ಸಿಬ್ಬಂದಿ ಈತನ ಪರವಾನಿಗೆ ಇಲ್ಲದಿದ್ದರೂ ಬೋಟ್ ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪಾಗಿದೆ.ಈ ಮೂಲಕ ಕೂಡಲಸಂಗಮ ಪ್ರಾಧಿಕಾರದ ಅಧಿಕಾರಿಗಳು,ಸಿಬ್ಬಂದಿ ನಿರ್ಲಕ್ಷ್ಯ ಬೇಜವಾಬ್ದಾರಿ ತೋರಿದ್ದಾರೆ.

ಬೇಜವಾಬ್ದಾರಿ -3  ಇಲ್ಲಿ ಒಂದು ಕಡೆ ಅಗ್ನಿಶಾಮಕ ದಳ ಸಿಬ್ಬಂದಿ ಯಡವಟ್ಟು ಮಾಡಿದ್ರೆ ಪ್ರಾಧಿಕಾರ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.ಇದರ ಜೊತೆಗೆ ಬೋಟ್ ಮಾಲೀಕ ಪರವಾನಿಗೆ ಇಲ್ಲದ ಯುವಕನ ಕೈಗೆ ಬೋಟ್ ಕೊಟ್ಟು ಬೇಜವಾಬ್ದಾರಿ ಮೆರೆದಿದ್ದಾರೆ‌. ಇದರಿಂದ ಮೂವರು ಪ್ರಾಣ ಹೋಗಿದ್ದು ನಡೆಯಬಾರದ ದುರಂತ ಒಂದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದು ಹೋಗಿದೆ‌. ಇನ್ನು ಪರಶುರಾಮ ಮನೆಗೆ ಹಿರಿಮಗ ಆಗಿದ್ದು ನಮಗೆ ಈಗ ಯಾರು ಆಸರೆ ನಮ್ಮನ್ನು ನೋಡಿಕೊಳ್ಳುವವರು ಯಾರು?ಎಲ್ಲರ ನಿರ್ಲಕ್ಷ್ಯದಿಂದ ನನ್ನ ಮಗ ಸಾವನ್ನಪ್ಪಿದ ಮುಂದೆ ನಮ್ಮ ಜೀವನ ಹೇಗೆ ಎಂದು ಪರಶುರಾಮ ತಾಯಿ ಗಂಗವ್ವ ಕಣ್ಣೀರು ಹಾಕಿದಳು.

ಇನ್ನು ಈ ಬಗ್ಗೆ ಮಾತನಾಡಿದ ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಘಟನೆ ಬಗ್ಗೆ ಕುಟುಂಬಸ್ಥರು ದೂರು ನೀಡಬಹುದು. ತಮಗೆ ಯಾರ ಮೇಲೆ ಅನುಮಾನವಿದೆ.ಯಾರ ನಿರ್ಲಕ್ಷ್ಯ ದಿಂದ ಘಟನೆ ನಡೆದಿದೆ ಎಂಬ ಬಗ್ಗೆ ಅವರ ಹೆಸರನ್ನು ಉಲ್ಲೇಖಿಸಿ ದೂರು ನೀಡಿದರೆ ಆ ಪ್ರಕಾರ ನಾವು ಖಂಡಿತ ಕಾನೂನು ಕ್ರಮ ಕೈಗೊಳ್ಳೋದಾಗಿ ತಿಳಿಸಿದರು.

ಒಟ್ಟಿನಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಇಂತಹದ್ದೊಂದು ದುರಂತ ಸಂಭವಿಸಿದೆ. ಮನೆಗೆ ಆಸರೆಯಾದವರನ್ನು ಕಳೆದುಕೊಂಡವರ ಕಣ್ಣೀರು ಕೋಡಿ ಹರಿಸುತ್ತಿದ್ದಾರೆ.ಈ ಬಗ್ಗೆ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕಿದೆ. ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕಿದೆ.

ಇದನ್ನೂ ಓದಿ: 

ಮೇಕ್ ಇನ್ ಬಾಗಲಕೋಟೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಪುಟ್ಟ ಗ್ಯಾರೇಜಿನಲ್ಲಿ ತಯಾರಾಗಿದೆ ಅಂದರೆ ನಂಬ್ತೀರಾ?

17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

Published On - 6:15 pm, Sat, 9 October 21

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್