ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಅಭಿವೃದ್ಧಿಯತ್ತ ಗಮನ ಹರಿಸೋಣ: ಕೆಎಸ್ ಈಶ್ವರಪ್ಪ ಸಲಹೆ

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಅಷ್ಟೂ ಪಕ್ಷಗಳನ್ನು ನಾವು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬಂದಿದ್ದೀವಿ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಅಭಿವೃದ್ಧಿಯತ್ತ ಗಮನ ಹರಿಸೋಣ ಎಂದು ಸಲಹೆ ನೀಡುವ ವೇಳೆ ಹೀಗೆ ತಿಳಿಸಿದ್ದಾರೆ.

ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಅಭಿವೃದ್ಧಿಯತ್ತ ಗಮನ ಹರಿಸೋಣ: ಕೆಎಸ್ ಈಶ್ವರಪ್ಪ ಸಲಹೆ
ಸಚಿವ ಕೆ.ಎಸ್.ಈಶ್ವರಪ್ಪ

ಬಾಗಲಕೋಟೆ: ಗ್ರಾಮ ಪಂಚಾಯತ್ ಅಧ್ಯಕ್ಷ, ಉಫಾಧ್ಯಕ್ಷರ ಬಗ್ಗೆ ತಾತ್ಸಾರ ಮಾಡಬೇಡಿ. ತಾತ್ಸಾರ ಮಾಡಿದ್ರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತೆ ಎಂದು ಪಿಡಿಒಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಕೇಕೆ, ಚಪ್ಪಾಳೆ ಹಾಕಿದ್ದಾರೆ. ಕೇಕೆ ಹೊಡೀತಿರಲ್ಲ ನಾಚಿಕೆ ಆಗ್ಬೇಕು ನಿಮಗೆ. ಕೇಕೆ ಹೊಡಿತೀರಿ ಅಂದ್ರೆ ಪಿಡಿಒಗಳು ನಿಮ್ಮ ಮಾತು ಕೇಳಲ್ಲ. ನಿಮ್ಮ ಮಾತು ಕೇಳಲ್ಲ ಅಂದಂಗಾಯಿತಲ್ಲ ಎಂದು ಈಶ್ವರಪ್ಪ ಕುಟುಕಿದ್ದಾರೆ.

6 ತಿಂಗಳು ಬಿಟ್ಟು ಮತ್ತೆ ನಾನು ಬಾಗಲಕೋಟೆಗೆ ಬರುತ್ತೇನೆ. ಆಗ ನಿಮ್ಮ ಮೇಲೆ ದೂರು ಬಂದರೆ ಡಿಸ್ಮಿಸ್​ ಮಾಡುತ್ತೇನೆ ಎಂದು ಪಿಡಿಒಗಳಿಗೆ ಸಚಿವ ಕೆ.ಎಸ್​​​. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆಯ ನವನಗರದ ಕಲಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಕಾರ್ಯಾಗಾರದಲ್ಲಿ ಅವರು ಮಾತನಾಡಿದ್ದಾರೆ.

ಬಾಗಲಕೋಟೆ ನವನಗರದ ಕಲಾಭವನದಲ್ಲಿ ಕಾರ್ಯಾಗಾರ ನಡೆಸಲಾಗಿತ್ತು. ಕಾರ್ಯಾಗಾರದಲ್ಲಿ ಅಷ್ಟೂ ಪಕ್ಷಗಳನ್ನ ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟುಬಿಡೋಣ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಅಷ್ಟೂ ಪಕ್ಷಗಳನ್ನು ನಾವು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬಂದಿದ್ದೀವಿ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಅಭಿವೃದ್ಧಿಯತ್ತ ಗಮನ ಹರಿಸೋಣ ಎಂದು ಸಲಹೆ ನೀಡುವ ವೇಳೆ ಹೀಗೆ ತಿಳಿಸಿದ್ದಾರೆ.

ಇದನ್ನೂ ಓದಿ: RSS ಬಗ್ಗೆ ನೆಹರು, ಇಂದಿರಾ ಮಾತ್ನಾಡಿದಾಗಲೇ ನಾವು ಹಚಾ ಅಂದಿದ್ವಿ, ಇನ್ನು ಇವರು ಯಾರ್​ ರೀ? – ಸಚಿವ ಈಶ್ವರಪ್ಪ

ಇದನ್ನೂ ಓದಿ: ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರಿನಲ್ಲಿ ಲಕ್ಷ ಲಕ್ಷ ಹಣ ವಂಚನೆ; ಇಬ್ಬರ ಬಂಧನ, ಮೂವರು ಪರಾರಿ

Read Full Article

Click on your DTH Provider to Add TV9 Kannada