Bagalkot: ಮೂವರು ಪುತ್ರಿಯರಿಗೆ ವಿಷವುಣಿಸಿ ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ
suicide: ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾಯಿಯೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ: ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ (poisoning) ತಾಯಿಯೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ತಾಯಿ ರೇಖಾ ಬಗಲಿ(28), ಮಕ್ಕಳಾದ ಸನ್ನಿಧಿ (7), ಸಮೃದ್ಧಿ(4), ಶ್ರೀನಿಧಿ(2) ಮೃತರು. ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ತಾಯಿ ರೇಖಾ ಯತ್ನಿಸಿದ್ದರು. ಮಾವಿನಹಣ್ಣಿನ ರಸದಲ್ಲಿ ರಾಸಾಯನಿಕ ಬೆರೆಸಿ ಮಕ್ಕಳಿಗೆ ಕುಡಿಸಿದ್ದು, ಬಳಿಕ ತಾನೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಓದು, ಬೆಳೆಸೋದು ಮತ್ತು ಮುಂದೆ ಅವರ ಮದುವೆ ಹೇಗೆ ಎಂದು ಚಿಂತಿಸಿ ಮಾನಸಿಕವಾಗಿ ಮೃತ ರೇಖಾ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಇನ್ನು ಮೃತ ರೇಖಾ ಮಾಜಿ ಸಚಿವ ಹೆಚ್.ವೈ ಮೇಟಿ ಅವರ ಸಹೋದರಿಯ ಕಡೆಯ ಸಂಬಂಧಿಕರು ಎನ್ನಲಾಗುತ್ತಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪೈರಸಿ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಿನಿಮಾಗಳು, ಲೈವ್ ಐಪಿಎಲ್ ಹಾಗೂ ಟಿ 20 ಕ್ರಿಕೆಟ್ ಪಂದ್ಯಾವಳಿಗಳ ಪೈರಸಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಶಿಶುರಾಮ್ ಭದಿಯಾ ಬಂಧಿತ ಆರೋಪಿ. ಶಿಶುರಾಮ್ ಭದಿಯಾನನ್ನ ಬಂಧಿಸಿದ ಈಶಾನ್ಯ ವಿಭಾಗದ CEN ಪೋಲೀಸರು. ಪೈರಸಿ ಮಾಡಲು pikashow ಅಪ್ಲಿಕೇಶನ್ ಬಳಸುತ್ತಿದ್ದ. ಪೈರಸಿ ಮಾಡಿದ ಸಿನಿಮಾ ಹಾಗೂ ಕ್ರಿಕೆಟ್ ಮ್ಯಾಚ್ಗಳನ್ನ ವೆಬ್ಸೈಟ್ ಹಾಗೂ ಅಪ್ಪ್ಲಿಕೇಷನ್ಗಳಲ್ಲಿ ಅಪ್ಲೋಡ್ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ. ಈಶಾನ್ಯ ವಿಭಾಗ CEN ಠಾಣೆಯಲ್ಲಿ ಆರೋಪಿ ವಿರುದ್ದ ಕೇಸ್ ದಾಖಲಾಗಿತ್ತು.
ಗಾಂಜಾ ಕೇಸ್ನಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಬಂಧನ
ಮಂಗಳೂರು: ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಎಂದು ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಇದೀಗ ಕರಾವಳಿಯಲ್ಲಿ ಗಾಂಜಾ ಘಾಟು. ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಜೊತೆಗೆ ವೈದ್ಯರು ಸಹ ಗಾಂಜಾ ಖೆಡ್ಡಕ್ಕೆ ಬಿದ್ದಿದ್ದಾರೆ. ವೈದ್ಯಕೀಯ ಕಾಲೇಜು ಅಂಗಳದಲ್ಲೇ ಆವರಿಸಿತಾ ಘಾಟು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಮಂಗಳೂರು ಸಿಸಿಬಿ ಪೊಲೀಸರು ಭಾರೀ ಗಾಂಜಾ ದಂಧೆ ಭೇದಿಸಿದ್ದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ಹಾಗೂ ವೈದ್ಯರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಗಾಂಜಾ ಕೇಸ್ನಲ್ಲಿ 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಹಾಗೂ ಗಾಂಜಾ ಪೆಡ್ಲರ್ಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ
ಹಸುವಿನ ಕರು ಮೇಲೆಯೇ ಅತ್ಯಾಚಾರ: ಶಫೀ ಉಲ್ಲಾ ಪೊಲೀಸ್ ವಶಕ್ಕೆ
ಕೋಲಾರ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಹೌದು, ಕಾಮುಕನೊಬ್ಬ ಹಸುವಿನ ಕರು ಮೇಲೆ ಕೀಚಕತನ ಮೆರೆದಿರುವ ವಿಲಕ್ಷಣ ಘಟನೆ ಕೋಲಾರದ ಜಿಲ್ಲೆಯಲ್ಲಿ ನಡೆದಿದೆ. ರಾಮರೆಡ್ಡಿ ಎಂಬುವವರಿಗೆ ಸೇರಿದ ಹಸುವಿನ ಕರು ಮೇಲೆ ಶಫೀ ಉಲ್ಲಾ ಎನ್ನುವ ಕಾಮುಕ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:08 pm, Wed, 11 January 23