ಸರ್ಕಾರಿ ಸ್ವಾಮ್ಯದ ರೋಗಗ್ರಸ್ತ ಕೈಗಾರಿಕೆಗಳಿಗೆ ಮರುಚಾಲನೆ, ಇಲ್ಲವೇ ಖಾಸಗಿಯವರಿಗೆ ಮಾರಾಟ: ನೂತನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ಕೈಗಾರಿಕಾ ನೀತಿಯನ್ನು ಸರಳೀಕರಣ ಮಾಡಿ ಪದವೀಧರರಿಗೆ ಉದ್ಯೋಗಾವಕಾಶ ನೀಡಲಾಗುವುದು. ಹೆಚ್ಚು ಜನರನ್ನು ಉದ್ಯಮಿಗಳನ್ನಾಗಿಸುವ ಗುರಿ ಇದೆ ಎಂದು ಸಹ ಅವರು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ರೋಗಗ್ರಸ್ತ ಕೈಗಾರಿಕೆಗಳಿಗೆ ಮರುಚಾಲನೆ, ಇಲ್ಲವೇ ಖಾಸಗಿಯವರಿಗೆ ಮಾರಾಟ: ನೂತನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್​ ನಿರಾಣಿ
Follow us
TV9 Web
| Updated By: guruganesh bhat

Updated on:Aug 08, 2021 | 7:16 PM

ಬಾಗಲಕೋಟೆ: ಸರ್ಕಾರಿ ಸ್ವಾಮ್ಯದ ರೋಗಗ್ರಸ್ತ ಕೈಗಾರಿಕೆಗಳಿಗೆ ಮರುಚಾಲನೆ ನೀಡುತ್ತೇವೆ. ಇಲ್ಲವೇ ಅವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತೇವೆ. ಕೈಗಾರಿಕಾ ನೀತಿಯನ್ನು ಸರಳೀಕರಣ ಮಾಡುತ್ತೇವೆ ಎಂದು ಬೀಳಗಿಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಪಡಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಕೈಗಾರಿಕೋದ್ಯಮಿಗಳ ಜೊತೆ ಚರ್ಚಿಸಿದ್ದೇನೆ. ಮುಂದಿನ 2-3 ದಿನದಲ್ಲಿ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಿದ್ದೇನೆ. ಹಿರಿಯ ಅಧಿಕಾರಿಗಳ ಜತೆ ಚರ್ಚೆಗೆ ದೆಹಲಿಗೆ ತೆರಳಿ ಪರಿಶೀಲಿಸುತ್ತೇನೆ. 2 ವರ್ಷದ ಅವಧಿಯಲ್ಲೇ 5 ವರ್ಷದಷ್ಟು ಕೆಲಸ ಮಾಡ್ತೇನೆ. 24/7 ಕೆಲಸ ಮಾಡುವ ಗುರಿ ಹಾಕಿಕೊಂಡಿದ್ದೇನೆ. ಕೈಗಾರಿಕಾ ನೀತಿಯನ್ನು ಸರಳೀಕರಣ ಮಾಡಿ ಪದವೀಧರರಿಗೆ ಉದ್ಯೋಗಾವಕಾಶ ನೀಡಲಾಗುವುದು. ಹೆಚ್ಚು ಜನರನ್ನು ಉದ್ಯಮಿಗಳನ್ನಾಗಿಸುವ ಗುರಿ ಇದೆ ಎಂದು ಸಹ ಅವರು ತಿಳಿಸಿದರು.

ಇದನ್ನೂ ಓದಿ: 

ಬೇಬಿ ಬೆಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳ ಎದುರು ನುರಿತ ವಿಜ್ಞಾನಿಗಳಿಂದ ಬ್ಲಾಸ್ಟಿಂಗ್ ಟೆಸ್ಟ್: ಗಣಿ ಸಚಿವ ಮುರುಗೇಶ್ ನಿರಾಣಿ ಘೋಷಣೆ

ಅಕ್ರಮ ಗಣಿಗಾರಿಕೆ ನಿಂತಿದೆ, ಹಿರಿಯರು, ಸ್ವಾಮೀಜಿಗಳು ಎರಡೂ ಕಡೆಯವರನ್ನು ಕರೆದು ವಿವಾದ ಬಗೆಹರಿಸಬೇಕು: ಮುರುಗೇಶ್ ನಿರಾಣಿ

(New Industrial Minister Murugesh Nirani says will Restart to government owned Diseased Industries or Selling to Private)

Published On - 4:20 pm, Sun, 8 August 21