ಬಾಗಲಕೋಟೆ; ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 16 ಲಕ್ಷಕ್ಕೂ ಹೆಚ್ಚು ಬಾರಿ ರಾಮನಾಮ ಬರೆದ ವೃದ್ಧೆ
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ಅನ್ನಪೂರ್ಣ ನಿರಂಜನ್ ಎಂಬ 64 ವರ್ಷದ ವೃದ್ಧೆ ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೆಂಬ ಸಂಕಲ್ಪದೊಂದಿಗೆ ಸುಮಾರು 25 ವರ್ಷದಿಂದ ರಾಮನಾಮ ಬರೆದಿದ್ದಾರೆ. ಇಲ್ಲಿವರೆಗೆ 31 ನೋಟ್ ಪುಸ್ತಕದಲ್ಲಿ ಬರೋಬ್ಬರಿ 16 ಲಕ್ಷ 68 ಸಾವಿರ ಬಾರಿ ರಾಮ ರಾಮ ಎಂದು ಬರೆದಿದ್ದಾರೆ.
ಬಾಗಲಕೋಟೆ, ಜ.14: ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ದಶಕಗಳ ಕನಸು ಈಡೇರಲಿದೆ. ಸದ್ಯ ರಾಮ ಮಂದಿರಕ್ಕಾಗಿ ಸುಮಾರು 25 ವರ್ಷದಿಂದ ಶಬರಿಯಂತೆ ರಾಮನಾಮ (Rama Nama) ಬರೆಯುತ್ತಿದ್ದ ಭಕ್ತೆ ಜನವರಿ 22ರಂದು ರಾಮನಾಮ ಬರೆದ ಪುಸ್ತಕ ಅಯೋಧ್ಯೆಗೆ ಸಮರ್ಪಿಸುವ ಆಸೆ ಹೊರ ಹಾಕಿದ್ದಾರೆ. ಬಾಗಲಕೋಟೆಯಲ್ಲಿ 64 ವರ್ಷದ ವೃದ್ಧೆಯೊಬ್ಬರು ರಾಮನಾಮ ಬರೆದು ಭಕ್ತರಿ ಸಮರ್ಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ಅನ್ನಪೂರ್ಣ ನಿರಂಜನ್ ಎಂಬ 64 ವರ್ಷದ ವೃದ್ಧೆ ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೆಂಬ ಸಂಕಲ್ಪದೊಂದಿಗೆ ಸುಮಾರು 25 ವರ್ಷದಿಂದ ರಾಮನಾಮ ಬರೆದಿದ್ದಾರೆ. ಇಲ್ಲಿವರೆಗೆ 31 ನೋಟ್ ಪುಸ್ತಕದಲ್ಲಿ ಬರೋಬ್ಬರಿ 16 ಲಕ್ಷ 68 ಸಾವಿರ ಬಾರಿ ರಾಮ ರಾಮ ಎಂದು ಬರೆದಿದ್ದಾರೆ. ಪ್ರತಿ ದಿನ ಸಂಜೆ 1-2 ತಾಸು ರಾಮನಾಮ ಬರೆಯಲೆಂದೇ ಸಮಯ ಮೀಸಲಿಟ್ಟು ರಾಮನಾಪ ಜಪಮಾಡಿದ್ದಾರೆ. ಸದ್ಯ ಜನವರಿ 22ರಂದು ಅವಕಾಶ ಸಿಕ್ಕರೆ ಎಲ್ಲಾ ಪುಸ್ತಕ ಅಯೋಧ್ಯೆಗೆ ಒಯ್ಯೋದಾಗಿ ಹೇಳಿದ್ದಾರೆ. ಇಲ್ಲದಿದ್ದರೆ ಮುಂದೊಂದು ದಿನ ಕುಟುಂಬಸ್ಥರ ಸಮೇತ ಅಯೋಧ್ಯೆಗೆ ಹೋಗಿ ರಾಮನಾಮ ಬರೆದ ಪುಸ್ತಕ ಸಮರ್ಪಿಸಲಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಪ್ರವಾಸ: ವಿವಿಧ ಟೂರ್ ಪ್ಯಾಕೇಜ್ ಘೋಷಿಸಿದ ಏಜೆನ್ಸಿಸ್
ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಅನ್ನಪೂರ್ಣ ನಿರಂಜನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈಗ ರಾಮಮಂದಿರ ಉದ್ಘಾಟನೆ ಆಗುತ್ತಿರೋದಕ್ಕೆ ಬಹಳ ಸಂತೋಷವಾಗ್ತಿದೆ. ಅಯೋಧ್ಯಾ ರಾಮಮಂದಿರ ಆಗಬೇಕೆಂಬ ಸಂಕಲ್ಪದೊಂದಿಗೆ ರಾಮನಾಮ ಬರೆದಿದ್ದೇನೆ. 1989ರಲ್ಲಿ ಮನೆ ಕಟ್ಟೋದಕ್ಕೆ ಆರಂಭವಾಯಿತು. ಅಂದಿನಿಂದ ರಾಮನಾಪ ಜಪ ಮಾಡುತ್ತಿದ್ದೇನೆ. ಮನೆ ಮೇಲೂ ಶ್ರೀರಾಮ ಎಂದು ಬರೆಸಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಅನ್ನಪೂರ್ಣ ನಿರಂಜನ್ ಅವರ ಭಕ್ತಿಯನ್ನು ಮೆಚ್ಚಿ ಕೆಲ ಗಣ್ಯರು ಸನ್ಮಾನ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ