ಅಯೋಧ್ಯೆ ಪ್ರವಾಸ: ವಿವಿಧ ಟೂರ್​ ಪ್ಯಾಕೇಜ್​ ಘೋಷಿಸಿದ ಏಜೆನ್ಸಿಸ್​​

ಅಯೋಧ್ಯೆಗೆ ತೆರಳಬೇಕು ಶ್ರೀರಾಮನ ದರ್ಶನ ಪಡೆಯಬೇಕೆಂದು ಸಾಕಷ್ಟು ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾಶಿ, ‌ಪ್ರಯಾಗರಾಜ್, ಗಾಯಯಾತ್ರೆ‌ ಮಾಡುತ್ತಿದ್ದವರು ಈಗ ಅಯೋಧ್ಯೆ ಯಾತ್ರೆಗೂ ಸಿದ್ಧತೆ ನಡೆಸಿದ್ದಾರೆ. ಮುಂದಿನ ತಿಂಗಳಿನಿಂದ ಆಯೋಧ್ಯೆಗೆ ತೆರಳಲು ಈಗಿನಿಂದಲೇ ಬುಕ್ಕಿಂಗ್ ಮಾಡುತ್ತಿದ್ದಾರೆ.

ಅಯೋಧ್ಯೆ ಪ್ರವಾಸ: ವಿವಿಧ ಟೂರ್​ ಪ್ಯಾಕೇಜ್​ ಘೋಷಿಸಿದ ಏಜೆನ್ಸಿಸ್​​
ಅಯೋಧ್ಯೆ ರಾಮಮಂದಿರ
Follow us
| Updated By: ವಿವೇಕ ಬಿರಾದಾರ

Updated on: Jan 14, 2024 | 12:58 PM

ಬೆಂಗಳೂರು, ಜನವರಿ 14: ಅಯೋಧ್ಯೆಯಲ್ಲಿ (Ayodhya) ಭವ್ಯವಾದ ಶ್ರೀರಾಮ ಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ಈ ಮಂದಿರದಲ್ಲಿ ರಾಮಲಲ್ಲಾ (ಬಾಲರಾಮ)ನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲಿ ಅಂತಿಮ‌ ತಯಾರಿ ನಡೆಯುತ್ತಿದೆ. ಇನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಲು ಅಸಂಖ್ಯ ಜನರು ಕಾದು ಕುಳಿತಿದ್ದಾರೆ. ಇನ್ನು ಅಯೋಧ್ಯೆಗೆ ತೆರಳಬೇಕು ಶ್ರೀರಾಮನ ದರ್ಶನ ಪಡೆಯಬೇಕೆಂದು ಸಾಕಷ್ಟು ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ.

ಕಾಶಿ, ‌ಪ್ರಯಾಗರಾಜ್, ಗಾಯಯಾತ್ರೆ‌ ಮಾಡುತ್ತಿದ್ದವರು ಈಗ ಅಯೋಧ್ಯೆ ಯಾತ್ರೆಗೂ ಸಿದ್ಧತೆ ನಡೆಸಿದ್ದಾರೆ. ಮುಂದಿನ ತಿಂಗಳಿನಿಂದ ಆಯೋಧ್ಯೆಗೆ ತೆರಳಲು ಈಗಿನಿಂದಲೇ ಬುಕ್ಕಿಂಗ್ ಮಾಡುತ್ತಿದ್ದಾರೆ. ಕಾಶಿಯಾತ್ರೆ ಜೊತೆಗೆ ಆಯೋಧ್ಯೆಗೂ ಕರೆಕೊಂಡು ಹೋಗುವಂತೆ ಜನರು ಟ್ರಾವೆಲ್​ ಏಜೆನ್ಸಿಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಅಯೋಧ್ಯೆ ಯಾತ್ರೆಗಾಗಿ ಟ್ರಾವೆಲ್ಸ್ ಏನಿಜ್ಸಿಗಳಿಗೆ ನಿತ್ಯ ನೂರಕ್ಕೂ ಅಧಿಕ ಕರೆಗಳು ಬರುತ್ತಿವೆ.

ಇದನ್ನೂ ಓದಿ: ಕೊಳಲನೂದುತ ಮನೆಮನೆಗೆ ಬಂದ ಈ ಕಂದ; ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸುತ್ತಿರುವ ಬಾಲಕ ವೈರಲ್​​

ಅಯೋಧ್ಯೆಗೆ ತೆರಳುವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೇಕ್ ಮೈ ಟ್ರಿಪ್, ಯಾತ್ರಾ ಸೇರಿದಂತೆ ವಿವಿಧ ಏಜೆನ್ಸಿಗಳು ಹೊಸ ಹೊಸ ಪ್ಯಾಕೇಜ್​ಗಳನ್ನು ಘೋಷಿಸಿವೆ. ಮೇಕ್ ಮೈ ಟ್ರಿಪ್​ನಲ್ಲಿವೆ ಈಗಾಗಲೇ ಇವೆ 25ಕ್ಕೂ ಹೆಚ್ಚು ಅಯೋಧ್ಯೆ ಪ್ಯಾಕೇಜ್​ಗಳು. ಯಾತ್ರಾ ಸೇರಿದಂತೆ ವಿವಿಧ ಟ್ರಾವೆಲ್ಸ್ ಏಜೆನ್ಸಿಯಿಂದಲೂ ಅಯೋಧ್ಯೆ ಟೂರ್ ಪ್ಯಾಕೇಜ್ ಘೋಷಿಸಿವೆ.

ಇನ್ನು ಟ್ರಾವೆಲ್​ ಏಜೆನ್ಸಿ ಆಫೀಸ್​ಗೆ ಬಂದು ಬುಕ್ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದ್ದು, ಬೆಂಗಳೂರಿನ‌ ಪ್ರತಿ ಖಾಸಗಿ ಟ್ರಾವೆಲ್ಸ್​​​ಗಳಲ್ಲಿ 5-10 ಪ್ಯಾಕೇಜ್​ಗಳು ಅಡ್ವಾನ್ಸ್ ಬುಕ್ ಆಗಿವೆ. ಮುಂದಿನ ದಿನದಲ್ಲಿ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಟ್ರಾವೆಲ್ಸ್ ಏಜೆನ್ಸಿಗಳು ಇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್