ಮೋದಿ ಹರ್ ಘರ್ ತಿರಂಗಾ ಎಂದು ನಾಟಕ ಆಡುತ್ತಿದ್ದಾರೆ, ಬಿಜೆಪಿಯವರು ದೇಶ ಹಾಳು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಭಾಷಣ‌‌

Siddaramaiah: ಬಿಜೆಪಿ ಕಿತ್ತೆಸೆಯುತ್ತೇವೆ ಎಂದು ಶಪಥ ಮಾಡಿ. ದಯಮಾಡಿ ಕೈ ಜೋಡಿಸಿ ಪ್ರಾರ್ಥನೆ ಮಾಡ್ತೀನಿ ಬಿಜೆಪಿಯವರನ್ನು ಅಧಿಕಾರದಿಂದ ತೆಗೆದು ಹಾಕಿ.. ಸಂವಿಧಾನ ಉಳಿಸ್ರಯ್ಯಾ ಎಂದು ಜನರಲ್ಲಿ ಸಿದ್ದರಾಮಯ್ಯ ಕೇಳಿಕೊಂಡರು.

ಮೋದಿ ಹರ್ ಘರ್ ತಿರಂಗಾ ಎಂದು ನಾಟಕ ಆಡುತ್ತಿದ್ದಾರೆ, ಬಿಜೆಪಿಯವರು ದೇಶ ಹಾಳು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಭಾಷಣ‌‌
ವಿಪಕ್ಷ ನಾಯಕ ಸಿದ್ದರಾಮಯ್ಯ
Edited By: ಸಾಧು ಶ್ರೀನಾಥ್​

Updated on: Aug 10, 2022 | 9:07 PM

ಬಾದಾಮಿ: ಸ್ಥಳೀಯ ಶಾಸಕ ಸಿದ್ದರಾಮಯ್ಯ ಅವರು (Siddaramaiah) ಬಾದಾಮಿಯಲ್ಲಿ (badami) ಭಾಷಣ‌‌ ಮಾಡುತ್ತಾ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ಹರ್ ಘರ್ ತಿರಂಗಾ ಎಂದು ನಾಟಕ ಆಡುತ್ತಿದ್ದಾರೆ. ಯಾವ ಬಿಜೆಪಿ ನಾಯಕರು ರಾಷ್ಟ್ರ ಧ್ವಜವನ್ನು ಅಗೌರವದಿಂದ ಕಂಡಿದ್ದರೋ… ಅವರು ಈಗ ಹರ್ ಘರ್ ತಿರಂಗಾ (Har Ghar Tiranga) ಅಂತಿದ್ದಾರೆ. ಇದು ನಾಟಕ, ಡೊಂಗಿತನ ಅಲ್ವಾ? ಮಾತೆತ್ತಿದರೆ ತಮ್ಮ ಹುಡುಗರ ಕಡೆಯಿಂದ.. ಬಿಜೆಪಿ-ಮೋದಿ ಅಂತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಬಿಜೆಪಿಯವರು ದೇಶ ಹಾಳು ಮಾಡುತ್ತಿದ್ದಾರೆ. ಅವರಿಂದ ಸಂವಿಧಾನಕ್ಕೆ, ರಾಷ್ಟ್ರಧ್ವಜಕ್ಕೆ, ಗೌರವ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಭಾಷಣ‌‌ದ ಸಾರಾಂಶ:

ಭಾವುಟವನ್ನು ಹತ್ತಿಯಿಂದ ಅಥವಾ ಸಿಲ್ಕ್ ನಲ್ಲಿ ತಯಾರು ಮಾಡಬೇಕು. ಇವರು ಪಾಲಿಸ್ಟರ್ ಬಟ್ಟೆಯಿಂದ ತಯಾರು ಮಾಡೋಕೆ ಹೊರಟಿದಾರಲ್ಲ. ನಾಚಿಕೆ ಆಗೋದಿಲ್ವಾ ಇವರಿಗೆ, ಇದು ಅಗೌರವ ಅಲ್ಲವಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮೋತ್ಸವಕ್ಕೆ ತೆರಳುವ ವೇಳೆ ಅಪಘಾತದಲ್ಲಿ ಸಾವಿಗೀಡಾದ ಪ್ರಕಾಶ್‌ ಬಡಿಗೇರ್‌ ಮನೆಗೆ Siddaramaiah ಭೇಟಿ | Tv9

ಮಂಗಳೂರಲ್ಲಿ ಮೂರು ಮರ್ಡರ್ ಆಗಿವೆ. ಸಿಎಂ ಆದವನು ಒಂದು ಧರ್ಮದ ಮುಖ್ಯಮಂತ್ರಿ ನಾ..? ಎಲ್ಲರಿಗೂ ಬೇಕಾದ ಮುಖ್ಯಮಂತ್ರಿ.. ಪ್ರವೀಣ, ಫಾಜಿಲ್, ಮಸೂದ್ ಕೊಲೆಯಾಯ್ತು.. ಸಿಎಂ ಬೊಮ್ಮಾಯಿ ಕೇವಲ ಪ್ರವೀಣ ಮನೆಗೆ ಹೋದರು.. ಮಸೂದ್ ಮತ್ತು ಫಾಜಿಲ್ ಮನೆಗೆ ಹೋಗಲಿಲ್ಲ.. ಅವರು ಮನುಷ್ಯರಲವಾ.. ಪ್ರವೀಣಗೆ ಪರಿಹಾರ ಕೊಟ್ಟಿದ್ದು ಸರಿ. ಆದರೆ ಫಾಜಿಲ್- ಮಸೂದ್ ಗೆ ಯಾಕೆ ಕೊಡಲಿಲ್ಲ..? ಸಿಎಂ ಆಗೋದಕ್ಕೆ ಬೊಮ್ಮಾಯಿ ನಾಲಾಯಕ್ ಎಂದು ಆಕ್ರೋಶದ ದನಿಯಲ್ಲಿ ಸಿದ್ದರಾಮಯ್ಯ ಹೇಳಿದರು.

ಇದು ಜನ ವಿರೋಧಿ ಸರಕಾರ.. 2023 ಮೇ ನಲ್ಲಿ ಚುನಾವಣೆ ಬರುತ್ತಿದೆ… ಎಲ್ಲರೂ ತೀರ್ಮಾನ ತೆಗೆದುಕೊಳ್ಳಬೇಕು.. ನರೇಂದ್ರ ಮೋದಿ ಇದಾನಲ್ಲ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು.. ಇವರು ಯಾರೂ ಪ್ರಾಣ ಕಳೆದುಕೊಂಡಿಲ್ಲ.. ಮನ್ ಕಿ ಬಾತ್ ಅಂತೆ! ನೀವೇ ತೀರ್ಮಾನ ಮಾಡಿ.. ಬಿಜೆಪಿ ಕಿತ್ತೆಸೆಯುತ್ತೇವೆ ಎಂದು ಶಪಥ ಮಾಡಿ. ದಯಮಾಡಿ ಕೈ ಜೋಡಿಸಿ ಪ್ರಾರ್ಥನೆ ಮಾಡ್ತೀನಿ ಬಿಜೆಪಿಯವರನ್ನು ಅಧಿಕಾರದಿಂದ ತೆಗೆದು ಹಾಕಿ.. ಸಂವಿಧಾನ ಉಳಿಸ್ರಯ್ಯಾ ಎಂದು ಜನರಲ್ಲಿ ಸಿದ್ದರಾಮಯ್ಯ ಕೇಳಿಕೊಂಡರು.

Published On - 8:45 pm, Wed, 10 August 22

Loading...
Unable to load recommendations.
Follow Us