AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಕ್ಕಾಗಿ ಗೋಡ್ಸೆ ಗಾಂಧಿಯನ್ನು ಕೊಂದ: ಪ್ರಮೋದ್ ಮುತಾಲಿಕ್

ಗಾಂಧಿ ಕೊಂದ ಗೋಡ್ಸೆ ರಾಷ್ಟ್ರಭಕ್ತ ಎಂದು ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಸಾಧ್ವಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಾಗೂ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಡೌಟ್ ಎನ್ನುವ ವಿಚಾರವಾಗಿಯೂ ಅಸಾಮಾಧಾನ ಹೊರಹಾಕಿದ್ದಾರೆ.

ದೇಶಕ್ಕಾಗಿ ಗೋಡ್ಸೆ ಗಾಂಧಿಯನ್ನು ಕೊಂದ: ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
ರವಿ ಹೆಚ್ ಮೂಕಿ, ಕಲಘಟಗಿ
| Edited By: Rakesh Nayak Manchi|

Updated on:Mar 10, 2024 | 7:07 PM

Share

ಬಾಗಲಕೋಟೆ, ಮಾ.10: ಗಾಂಧಿ ಕೊಂದ ಗೋಡ್ಸೆ ರಾಷ್ಟ್ರಭಕ್ತ ಎಂದು ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik), ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ಕೊಡಬೇಕಿತ್ತು. ಗೋಡ್ಸೆ ಒಬ್ಬ ದೇಶಭಕ್ತ ಅಂತ ಸಾಧ್ವಿ ಹೇಳಿದ್ದು ದೊಡ್ಡ ಅಪರಾಧವೇ? ಹೌದು ಗೋಡ್ಸೆ ದೇಶಭಕ್ತನೇ ಆಗಿದ್ದ. ಗುಂಡು ಹಾಕಿದ್ದು ತಪ್ಪು ಇರಬಹುದು. ಆದರೆ ದೇಶದ್ರೋಹಿಯಲ್ಲ, ಸುಫಾರಿ ಕಿಲ್ಲರ್ ಅಲ್ಲ. ಆಸ್ತಿಗೋಸ್ಕರ ಕೊಲೆ‌ಮಾಡಲಿಲ್ಲ. ದೇಶಕ್ಕಾಗಿ ಕೊಂದ. ದೇಶದ ಹಿತಕ್ಕಾಗಿ ಕೊಲೆ‌ ಮಾಡಿದ. ಕೊಲೆಯನ್ನು ನಾನು ಒಪ್ಪುವುದಿಲ್ಲ ಆದರೆ ನಾಡಿದ ಹಿನ್ನೆಲೆಯಲ್ಲಿ ವಿಚಾರಧಾರೆ ಇದೆ ಎಂದರು.

ಕಲಾದಗಿಯಲ್ಲಿ ಮಾತನಾಡಿದ ಅವರು, ಈಗ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಅಂತವರಿಗೂ ಟಿಕೆಟ್ ತಪ್ಪಿಸುವುದಾ ಎಂದು ಪ್ರಶ್ನಿಸಿದರು. ಹಿಂದುತ್ವಕ್ಕಾಗಿ ಒಂಬತ್ತು ವರ್ಷ ಜೈಲಲ್ಲಿ‌ ಕಳೆದವರು ಅವರು. ಇದು ವಿಕೃತ ಕಡೆ ಹೊರಟಿದೆ, ಹೊಂದಾಣಿಕೆ ಸರಿಯಲ್ಲ. ತಿದ್ದಿಕೊಳ್ಳಬೇಕು ಎಂದು ಬಿಜೆಪಿ ನಾಯಕರಿಗೆ ಮುತಾಲಿಕ್ ಸಲಹೆ ನೀಡಿದರು.

ಬಿಜೆಪಿಗೆ ಜಾತಿ ದುಡ್ಡು ಮಾತ್ರ ಬೇಕು

ಲೋಕಸಭೆ ಚುನಾವಣೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ನಾನು ರಾಜಕೀಯ ಕ್ಲೋಸ್ ಮಾಡಿಬಿಟ್ಟಿದ್ದೇನೆ. ನಾನು ಅದರಲ್ಲಿ ವಿಫಲನಾಗಿದ್ದೇನೆ. ನನ್ನನ್ನು ಸ್ವೀಕಾರ ಮಾಡುವಂತ ಮಾನಸಿಕತೆ ಇಂದಿನ‌ ಬಿಜೆಪಿಗಿಲ್ಲ. ಬಿಜೆಪಿಯವರಿಗೆ ಜಾತಿ ದುಡ್ಡು ಇದೇ ಬೇಕು. ಹಾಗಾಗಿ ನನ್ನಂತವರು ಬೇಡ ಆಗಿದೆ. ಅದಕ್ಕಾಗಿ ಪ್ರಾಮಾಣಿಕವಾಗಿ ಹಿಂದುತ್ವ ಮಾಡುತ್ತಾ ಹೋಗುತ್ತೇನೆ ಎಂದು ನಾನು ನಿಶ್ಚಯ ಮಾಡಿದ್ದೇನೆ ಎಂದರು.

ಹಿಂದುತ್ವ, ಅಭಿವೃದ್ಧಿ ಎರಡನ್ನೂ ಮಾಡುವ ಏಕೈಕ ಸಂಸದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಟಿಕೆಟ್ ಕೈ ತಪ್ಪುವ ಸಾಧ್ಯತೆ ವಿಚಾರವಾಗಿ ಮಾತನಾಡಿದ ಮುತಾಲಿಕ್, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಡೌಟ್ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಪ್ರತಾಪ್ ಸಿಂಹ ಅವರಿಗೆ ಎಂಪಿ ಟಿಕೆಟ್ ಡೌಟ್ ಅನ್ನುವಂತಹದ್ದು ಆಗಬಾರದು. ಇಡೀ ಕರ್ನಾಟಕದಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿಯನ್ನು ಸಮಾನಾಗಿ ತಹೊಂಡು ಹೋಗುತ್ತಿರುವ ಏಕೈಕ ಸಂಸದರಾಗಿದ್ದಾರೆ. ಅಂತಹವರಿಗೆ ಡೌಟ್ ಅನ್ನುವ ಚರ್ಚೆಯೇ ಆಗಬಾರದು. ಕಣ್ಣು ಮುಚ್ಚಿ ಟಿಕೆಟ್ ಕೊಡಬೇಕು ಎಂದರು.

ಇವತ್ತಿನ ದುರ್ಬಲ, ನಿಷ್ಕ್ರಿಯ ಸಂಸದರ ಸಾಲಿನಲ್ಲಿ ಪ್ರತಾಪ್ ಸಿಂಹ ಅವರನ್ನು ಹೋಲಿಕೆ ಕೂಡ ಮಾಡಲು ಆಗಲ್ಲ. ಅಷ್ಟು ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಬೇರೆ ರಾಜಕೀಯ ವ್ಯಕ್ತಿಗಳ ತರಃ ಬಾಲ ಬಡಕತನ, ಲಾಭಿ‌ಮಾಡುವುದು, ಇನ್ಯಾರಿಗೋ ಸಲಾಂ ಹೊಡೆಯುವುದು ಮಾಡಿಲ್ಲ. ಮಾಡುವ ಅವಶ್ಯಕತೆಯೂ‌ ಇಲ್ಲ. ಅಭಿವೃದ್ಧಿಯಲ್ಲಿ ಪ್ರತಾಪ್ ಸಿಂಹ ನಂಬರ್ 1. ಕರ್ನಾಟಕದಲ್ಲಿ ಪ್ರತಾಪ್ ಸಿಂಹ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕೇಂದ್ರ ಸರ್ಕಾರ ಯಾಕೆ ಇವರ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತಿದೆ ಎಂವುದು ಗೊತ್ತಾಗುತ್ತಿಲ್ಲ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡದೇ ಇದ್ದರೆ, ಕರ್ನಾಟಕದ ನಾಗರಿಕರು, ಯುವಕರು ಸಿಡಿದೇಳುತ್ತಾರೆ. ಒಬ್ಬ ಪ್ರಮಾಣಿಕ ಸಂಸದನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ನಿಮ್ಮ ಬಗ್ಗೆ ಕೆಟ್ಟ ಸಂದೇಶ ಹೋಗುತ್ತದೆ. ಇದು ಸರಿಯಲ್ಲ, ಇದರ ಹಿಂದೆ ಯಾರ ಕೆಲಸ ಮಾಡುತ್ತಿದ್ದಾರೆ, ಕಾಲ ಏಳಿತಿದ್ದಾರೆ ನನಗೆ ಗೊತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಇದನ್ನೂ ಓದಿ: ದೇಶದ್ರೋಹ ಕ್ಯಾನ್ಸರ್ ಇದ್ದ ಹಾಗೆ, ಆಪರೇಷನ್ ಮಾಡದಿದ್ದರೆ ದೇಶದ ತುಂಬ ಹರಡುತ್ತದೆ: ಪ್ರಮೋದ್ ಮುತಾಲಿಕ್

ಮೈಸೂರಿನಿಂದ ಕೈ ಅಭ್ಯರ್ಥಿಯಾಗಿ ಯತೀಂದ್ರ ಅವರನ್ನು ಕಣಕ್ಕಿಳಿಸಲು, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಲು ಬಿಜೆಪಿ ಕಾಂಗ್ರೆಸ್ ರಾಜ್ಯ ನಾಯಕರ ಒಳ ಒಪ್ಪಂದವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಲು ಒಳ ಒಪ್ಪಂದಗಳು ಏನೇನು ಆಟ ನಡೆಯತ್ತಿದೆ. ಅದು ನಾಳೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಎಚ್ಚರಿಕೆ ಕೊಡುತ್ತೇನೆ ಎಂದರು.

ಸಿದ್ದರಾಮಯ್ಯ ಅವರೇ ಇರಬಹದು, ಇನ್ಯಾರದ್ದೋ ಕೈವಾಡ ಇರಬಹುದು. ಇದು ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ‌ ಶೋಭೆ‌ ತರುವಂತಹದ್ದಲ್ಲ. ಪ್ರತಾಪ್ ಸಿಂಹ ಕೇವಲ ಹಿಂದುತ್ವ ಅಭಿವೃದ್ಧಿ ಎಂದು ಹೇಳಿಕೆ ಕೊಡುವುದಲ್ಲ. ಅವರು ನೇರವಾಗಿ ಕಾರ್ಯಕ್ಕೆ ಇಳಿದಿದ್ದಾರೆ ಎಂದರು.

ಹಿಂದೂ ಕಾರ್ಯಕರ್ತ ರಾಜು ಹತ್ಯೆಯ ಸಮಯದಲ್ಲಿ ತಲ್ವಾರ್ ಹಿಡಕೊಂಡವರಿಗೆ ಎಚ್ಚರಿಕೆ ಕೊಟ್ಟಂತ ಏಕೈಕ ಸಂಸದ ಅವರು. ನೂರಾರು‌ ಕಿಲೋಮೀಟರ್ ಪಾದಯಾತ್ರೆ ಮಾಡಿ, ಯಶಸ್ವಿಯಾಗಿ ಹನುಮ ಜಯಂತಿಯನ್ನ ಮಾಡಿದ ಏಕೈಕ ಸಂಸದ ಅವರು. ಬೆಂಗಳೂರು- ಮೂಸೂರು ರಸ್ತೆ ಅಭಿವೃದ್ಧಿ ಮಾಡಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ಎಷ್ಟು ಪರಿಶ್ರಮ ಪಟ್ಟಿದ್ದಾರೆ ಅವರು, ಕೇಂದ್ರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರೆ. ಇನ್ಯಾರಿಗೋ ಸಹಾಯ‌ ಮಾಡುವ ದೃಷ್ಟಿಯಿಂದ ಅಂತವರಿಗೆ ನೀವು ಒಳ ಒಪ್ಪಂದ ನೀವು ಟಿಕೆಟ್ ತಪ್ಪಿಸುವುದನ್ನ ಕರ್ನಾಟಕದ ಮತದಾರ, ನಾಗರಿಕರು ಕ್ಷಮಿಸುವದಿಲ್ಲ. ಅವರಿಗೆ ಟಿಕೆಟ್ ತಪ್ಪಿಸಿದರೆ, ಅಕ್ಷ್ಯಮ ಅಪರಾಧ ಮಾಡಿದಂತೆ. ನಾವು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಕೊಡುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Sun, 10 March 24

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು