ಹೊನಲು ಬೆಳಕಿನಲ್ಲಿ ರಂಗೇರಿದ ಟಗರು ಫೈಟ್​: ಪ್ರೇಕ್ಷಕರಿಗೆ ಸಖತ್ ಕಿಕ್

ಬಾಗಲಕೋಟೆ: ರಂಗೇರಿರುವ ಅಖಾಡ. ಆ ಅಖಾಡದಲ್ಲಿ ಗೆಲವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು. ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ. ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಸಿಳ್ಳೇ, ಕೇಕೆ ಹಾಕಿ ಸಂಭ್ರಮಿಸುತ್ತಿರುವ ಪ್ರೇಕ್ಷಕರು. ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದಿಂದ ರಾಯಣ್ಣ ಹುತಾತ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯ ಮತ್ತು ಪರರಾಜ್ಯದಿಂದ 200ಕ್ಕೂ ಹೆಚ್ಚು […]

ಹೊನಲು ಬೆಳಕಿನಲ್ಲಿ ರಂಗೇರಿದ ಟಗರು ಫೈಟ್​: ಪ್ರೇಕ್ಷಕರಿಗೆ ಸಖತ್ ಕಿಕ್
ಸಾಧು ಶ್ರೀನಾಥ್​

Updated on: Jan 30, 2020 | 10:44 AM

ಬಾಗಲಕೋಟೆ: ರಂಗೇರಿರುವ ಅಖಾಡ. ಆ ಅಖಾಡದಲ್ಲಿ ಗೆಲವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು. ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ. ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಸಿಳ್ಳೇ, ಕೇಕೆ ಹಾಕಿ ಸಂಭ್ರಮಿಸುತ್ತಿರುವ ಪ್ರೇಕ್ಷಕರು.

ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದಿಂದ ರಾಯಣ್ಣ ಹುತಾತ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯ ಮತ್ತು ಪರರಾಜ್ಯದಿಂದ 200ಕ್ಕೂ ಹೆಚ್ಚು ಟಗರುಗಳು ಭಾಗಿಯಾಗಿದ್ದವು. ಹಾಲು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಎಂಟು ಹಲ್ಲು ಎಂಬಂತೆ ವಿವಿಧ ವಿಭಾಗಗಳಲ್ಲಿ ನಡೆದ ಟಗರಿನ ಕಾಳಗ ನೋಡುಗರನ್ನು ರೋಮಾಂಚನಗೊಳಿಸಿತು. ಅದಕ್ಕೆ ಅನುಗುಣವಾಗಿ ಬಹುಮಾನ ನೀಡಲಾಯ್ತು.

ಹೊನಲು ಬೆಳಕಿನಲ್ಲಿ ಟಗರು ಕಾಳಗ: 
ಇನ್ನು ಟಗರಿನ ಕಾಳಗವನ್ನು ಹೊನಲು ಬೆಳಕಿನಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು. ಟಗರಿನ ಕಾಳಗದ ಮೈದಾನದ ಸುತ್ತಲೂ ಲೈಟಿಂಗ್​ನಲ್ಲಿ ನಡೆದ ರೋಚಕ ಗುದ್ದಾಟ ನೋಡುಗರನ್ನು ಸೆಳೆಯಿತು. ಬಲಭೀಮರಂತೆ ದಷ್ಟಪುಷ್ಟವಾಗಿ ಸೊಕ್ಕಿನಿಂದ ಕೊಬ್ಬಿದ ಟಗರುಗಳ ಕಾಳಗ ಜಗಜಟ್ಟಿಗಳ ಸೆಣಸಾಟವನ್ನು ನೆನಪಿಸುವಂತಿತ್ತು. ಈ ಟಗರು ಕಾಳಗ ನೋಡಲು ಜಿಲ್ಲೆ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಂದ ಯುವಕರು,ರೈತರು ಆಗಮಿಸಿ ಎಂಜಾಯ್ ಮಾಡಿದ್ರು.







Published On - 9:01 am, Thu, 30 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us