ಕೃಷ್ಣಾ ತೀರದಲ್ಲಿ ಒಂದೇ ತಿಂಗಳಲ್ಲಿ ಐದು ಮೃತದೇಹಗಳು ಪತ್ತೆ: ನದಿಗೆ ಶವಗಳ ಸ್ಪಾಟ್ ಎಂಬ ಕಳಂಕ‌?

| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2024 | 7:06 PM

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಹರಿಯುತ್ತವೆ. ಇದರಿಂದ ತ್ರಿವಳಿ ನದಿ ಜಿಲ್ಲೆ ಎಂದು ಬಾಗಲಕೋಟೆ ‌ಜಿಲ್ಲೆಯನ್ನು ಕರೆಯುತ್ತಾರೆ. ಆದರೆ ಈಗ ಕೃಷ್ಣಾ ತೀರಕ್ಕೆ ಶವಗಳ ಸ್ಪಾಟ್ ಎಂಬ ಕಳಂಕ‌ ಅಂಟಿಕೊಳ್ಳುತ್ತಿದೆ. ಇದಕ್ಕೆ ಕಾರಣ ಜಿಲ್ಲೆಯ ಬೀಳಗಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ಶವಗಳು ಮೇಲಿಂದ ಮೇಲೆ ಪತ್ತೆಯಾಗುತ್ತಿವೆ.

ಕೃಷ್ಣಾ ತೀರದಲ್ಲಿ ಒಂದೇ ತಿಂಗಳಲ್ಲಿ ಐದು ಮೃತದೇಹಗಳು ಪತ್ತೆ: ನದಿಗೆ ಶವಗಳ ಸ್ಪಾಟ್ ಎಂಬ ಕಳಂಕ‌?
ಕೃಷ್ಣಾ ತೀರದಲ್ಲಿ ಒಂದೇ ತಿಂಗಳಲ್ಲಿ ಐದು ಡೆಡ್ ಬಾಡಿಗಳು ಪತ್ತೆ: ನದಿಗೆ ಶವಗಳ ಸ್ಪಾಟ್ ಎಂಬ ಕಳಂಕ‌!
Follow us on

ಬಾಗಲಕೋಟೆ, ಜೂನ್​ 19: ಅದು ಉತ್ತರ ಕರ್ನಾಟಕದ ಜೀವನಾಡಿ ಎಂದು ಹೆಸರಾದ ಕೃಷ್ಣಾ ನದಿ (Krishna River). ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುವ ನದಿ. ಆದರೆ ಈಗ ಆ ನದಿ ಕಡೆ ಓಡಾಡಲು ಜನರು ಭಯ ಪಡುತ್ತಿದ್ದಾರೆ. ಇದಕ್ಕೆ ಕಾರಣ ಕೃಷ್ಣಾ ನದಿಯಲ್ಲಿ ಶವಗಳು (Dead body) ತೇಲಿ ಬರುತ್ತಿರೋದು. ಕೃಷ್ಣಾ ತೀರದಲ್ಲಿ ಒಂದೇ ತಿಂಗಳಲ್ಲಿ ಬರೊಬ್ಬರಿ ಐದು ಶವಗಳು ಪತ್ತೆಯಾಗಿವೆ. ಕೃಷ್ಣಾ ತೀರ ಡೆಡ್ ಬಾಡಿಗಳ ಸ್ಪಾಟ್ ಆಗಿ ಬದಲಾಗುತ್ತಿದೆ.

ಕೃಷ್ಣಾ ತೀರಕ್ಕೆ ಶವಗಳ ಸ್ಪಾಟ್ ಕಳಂಕ‌ 

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಹರಿಯುತ್ತವೆ. ಇದರಿಂದ ತ್ರಿವಳಿ ನದಿ ಜಿಲ್ಲೆ ಎಂದು ಬಾಗಲಕೋಟೆ ‌ಜಿಲ್ಲೆಯನ್ನು ಕರೆಯುತ್ತಾರೆ. ಆದರೆ ಈಗ ಕೃಷ್ಣಾ ತೀರಕ್ಕೆ ಶವಗಳ ಸ್ಪಾಟ್ ಎಂಬ ಕಳಂಕ‌ ಅಂಟಿಕೊಳ್ಳುತ್ತಿದೆ. ಹೌದು ಇದಕ್ಕೆ ಕಾರಣ ಬಾಗಲಕೋಟೆ ಜಿಲ್ಲೆಯ ಬೀಳಗಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ಶವಗಳು ಮೇಲಿಂದ ಮೇಲೆ ಪತ್ತೆಯಾಗುತ್ತಿವೆ. ಅದರಲ್ಲೂ ಕೃಷ್ಣಾ ನದಿ ಕೊಲ್ಹಾರ ಸೇತುವೆ ಬಳಿ ಅಪರಿಚಿತ ಶವಗಳು ಪತ್ತೆಯಾಗುತ್ತಲೇ ಇವೆ.

ಇದನ್ನೂ ಓದಿ: ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು

ಅದು ಕೂಡ ಬೀಳಗಿ ಬಾಗದ ಕೃಷ್ಣಾ ತೀರದಲ್ಲಿ ಒಂದೇ ತಿಂಗಳಲ್ಲಿ ಐದು ಶವಗಳು ಪತ್ತೆಯಾಗಿವೆ. ಇದರಿಂದ ಕೃಷ್ಣಾ ತೀರದಲ್ಲಿ ರೈತರು ಓಡಾಡಲು ಭಯ ಪಡುವಂತಾಗಿದೆ. ಎಲ್ಲಿ ಯಾವಾಗ ಶವ ಮೇಲೇಳುತ್ತದೊ ಎಂಬ ಆತಂಕ ಮನೆ ಮಾಡಿದೆ. ಕೃಷ್ಣಾ ತೀರದಲ್ಲಿ ಅದರಲ್ಲೂ ಕೊಲ್ಹಾರ ಸೇತುವೆ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ.

ಕೊಲ್ಹಾರ ಬಳಿ ಒಂದೇ ತಿಂಗಳಲ್ಲಿ ಐದು ಶವ ಪತ್ತೆಯಾಗಿದ್ದು, ಇದರಲ್ಲಿ ಶಿವಮೊಗ್ಗದ‌ ಮೂಲದ ಮಹಿಳೆ ಶವ ಗುರುತು ಪತ್ತೆಯಾಗಿದೆ. ಇನ್ನೊಂದು ಬೆಳಗಾವಿ ಮೂಲದ ವ್ಯಕ್ತಿಯ ಶವ ಬಗ್ಗೆ ಗುರುತು ಪತ್ತೆಯಾಗಿದೆ. ಆದರೆ ಇತರೆ ಮೂರು ಶವಗಳ ಗುರುತು ಪತ್ತೆಯಾಗಿಲ್ಲ. 2023 ರಲ್ಲಿ ಜಮಖಂಡಿ ತಾಲ್ಲೂಕಿನ ಜಂಬಗಿ ಬಿಕೆ, ಹಾಗೂ ಜಂಬಗಿ ಕೆಡಿ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ತಲಾ ಒಂದು ಶವ ಕೃಷ್ಣಾ ತೀರದಲ್ಲಿ ಪತ್ತೆಯಾಗಿದ್ದು ಎರಡು ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು

ಇನ್ನು ಕೊಲ್ಹಾರ ಸೇತುವೆ ಬಳಿ ಪತ್ತೆಯಾಗುವ ಶವಗಳ ಬಗ್ಗೆ ಬೀಳಗಿ ಪೊಲೀಸರಿಗೆ ತಲೆ ನೋವಾಗಿದೆ. ಶವ ಗುರತು ಪತ್ತೆ ಹಚ್ಚೋದೆ ನಿತ್ಯದ ಕೆಲಸವಾಗಿದೆ. ಇನ್ನು ಈ ಬಗ್ಗೆ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಮಾತಾಡಿದ ಎಸ್​ಪಿ, ಕೊಲ್ಹಾರ ಸೇತುವೆ ಬೀಳಗಿ ವ್ಯಾಪ್ತಿಯಲ್ಲಿ ಹಾಗೂ ಜಂಬಗಿ ಸೇತುವೆ ಬಳಿ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಹೆಚ್ಚಿನ ಪೊಲೀಸ್ ಗಸ್ತು ವ್ಯವಸ್ಥೆ ಮಾಡೋದಾಗಿ ಹೇಳಿದರು.

ನೀರು ಹರಿಯುವ ಕೃಷ್ಣಾ ನದಿಯಲ್ಲಿ ಶವಗಳು ಹರಿದಾಡುತ್ತಿವೆ. ಇದರಿಂದ ಕೃಷ್ಣಾ ತೀರ ಶವಗಳ ಹಾಟ್ ಸ್ಪಾಟ್ ಆಗಿದ್ದು, ಪೊಲೀಸರು ಇದರ ನಿಯಂತ್ರಣಕ್ಕೆ ಸೂಕ್ತ ‌ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:05 pm, Wed, 19 June 24