AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಳ ಮಹಾತ್ಮೆ -ಈ 5 ಕಡೆ ಮನೆ ಕಟ್ಟಬೇಡಿ.. ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುತ್ತಾನೆ ಚಾಣಕ್ಯ

Chanakya Niti: ಕಾನೂನಿನ ಮೌಲ್ಯಕ್ಕೆ ಹೆದರದ ಜನರಿರುವಲ್ಲಿ ಎಂದಿಗೂ ಮನೆ ಕಟ್ಟಬಾರದು ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ. ಅಂತಹ ಪ್ರದೇಶದಲ್ಲಿ ವಾಸಿಸುವ ಜನರು ಯಾವಾಗಲೂ ನಿರಾಶೆಗೊಳ್ಳುತ್ತಾರೆ, ಸಂಕಟದಿಂದ ಬದುಕಬೇಕಾಗುತ್ತದೆ.

ಸ್ಥಳ ಮಹಾತ್ಮೆ -ಈ 5 ಕಡೆ ಮನೆ ಕಟ್ಟಬೇಡಿ.. ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುತ್ತಾನೆ ಚಾಣಕ್ಯ
ಈ 5 ಕಡೆ ಮನೆ ಕಟ್ಟಬೇಡಿ.. ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುತ್ತಾನೆ
TV9 Web
| Updated By: ಸಾಧು ಶ್ರೀನಾಥ್​|

Updated on: Jun 20, 2024 | 6:06 AM

Share

ಸ್ವಂತಕ್ಕೆ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂಬುದು ಬಡವ-ಶ್ರೀಮಂತ ಎಂಬ ಭೇದ-ಭಾವವಿಲ್ಲದೆ ಪ್ರತಿಯೊಬ್ಬರ ಕನಸಾಗಿರುತ್ತದೆ . ತಮ್ಮ ಆರ್ಥಿಕ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಮನೆ ಕಟ್ಟುತ್ತಾರೆ. ಕಚ್ಚಾ ಮನೆಯೇ ಆಗಲಿ, ಅರಮನೆಯಾಗಲಿ ಸ್ವಂತ ಮನೆಯಲ್ಲಿ ವಾಸಿಸುವುದರಿಂದ ಸಿಗುವ ಸುಖವೇ ಬೇರೆ ಎನ್ನುತ್ತಾರೆ. ಆದರೆ ನೀವೂ ಹೊಸ ಮನೆ ಕೊಳ್ಳಲು ಅಥವಾ ಕಟ್ಟಲು (House Construction) ತಯಾರಾಗುತ್ತಿದ್ದರೆ… ಆಚಾರ್ಯ ಚಾಣಿಕ್ಯರು (Spiritual) ಹೇಳಿದ ಈ ಐದು ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಏಕೆಂದರೆ ಮನೆ ಕಟ್ಟುವಾಗ ತಿಳಿದೋ ತಿಳಿಯದೆಯೋ ತಪ್ಪು ಮಾಡಿದರೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೆ ಹಲವು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅಂತಹ ಸಮಸ್ಯೆಗಳು ಉದ್ಭವಿಸದ ಸ್ಥಳದಲ್ಲಿ ಯಾವಾಗಲೂ ಮನೆಯನ್ನು ನಿರ್ಮಿಸಿ (Chanakya Niti).

Chanakya Niti – ಜೀವನೋಪಾಯ: ಮನೆ ಕಟ್ಟಲು ಜೀವನೋಪಾಯದ ಬಿಕ್ಕಟ್ಟು ಇಲ್ಲದ ಸ್ಥಳವನ್ನು ಹುಡುಕಬೇಕು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ನಿಮ್ಮ ಉದ್ಯೋಗಕ್ಕೆ ಅವಕಾಶವಿಲ್ಲದ ಸ್ಥಳದಲ್ಲಿ ಎಂದಿಗೂ ಮನೆಯನ್ನು ನಿರ್ಮಿಸಬೇಡಿ. ಕೆಲಸ ಇಲ್ಲದ ಕಡೆ ಮನೆ ಕಟ್ಟಿದರೆ ಜೀವನ ಪೂರ್ತಿ ಕೆಲಸ ಅರಸಿಯೇ ಕಳೆಯಬೇಕು. ಜೀವನವು ಕಷ್ಟಗಳಿಂದ ತುಂಬಿಹೋಗುತ್ತದೆ.

Also Read:  Holy River ನದಿ ಸ್ನಾನಕ್ಕೆ ಕೆಲವು ನಿಯಮಗಳು.. ರಾತ್ರಿ ನದಿಯಲ್ಲಿ ಸ್ನಾನ ಮಾಡಬಾರದು ಅಂತಾರೆ, ಯಾಕೆ ಗೊತ್ತಾ?

Chanakya Niti – ಕಾನೂನು ಮತ್ತು ಸುವ್ಯವಸ್ಥೆ: ಕಾನೂನಿನ ಮೌಲ್ಯಕ್ಕೆ ಹೆದರದ ಜನರಿರುವಲ್ಲಿ ಎಂದಿಗೂ ಮನೆ ಕಟ್ಟಬಾರದು ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ. ಅಂತಹ ಪ್ರದೇಶದಲ್ಲಿ ವಾಸಿಸುವ ಜನರು ಯಾವಾಗಲೂ ನಿರಾಶೆಗೊಳ್ಳುತ್ತಾರೆ, ಸಂಕಟದಿಂದ ಬದುಕಬೇಕಾಗುತ್ತದೆ. ಹಾಗಾಗಿ ಮನೆ ಕಟ್ಟಲು ಕಾನೂನು ಸುವ್ಯವಸ್ಥೆ ಸರಿಯಾಗಿ ಇರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

Chanakya Niti – ಮೊದಲು ಪರಿಸ್ಥಿತಿಯನ್ನು ನಿರ್ಣಯಿಸಿ: ನೀವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿ. ಸಮಸ್ಯೆ, ಅದರ ಮೂಲ ಕಾರಣಗಳು, ಸಂಭವನೀಯ ಪರಿಣಾಮಗಳನ್ನು ಸೂಕ್ತವಾಗಿ ವಿಶ್ಲೇಷಿಸಿ. ಸ್ಪಷ್ಟವಾದ ತಿಳಿವಳಿಕೆಯು ಸಮಸ್ಯೆಯನ್ನು ನಿಭಾಯಿಸಲು ಪರಿಣಾಮಕಾರಿ ತಂತ್ರಗಳ ಅಭಿವೃದ್ಧಿಯನ್ನು ಶಕ್ತಗೊಳಿಸುತ್ತದೆ.

Chanakya Niti – ದಯೆ ಮತ್ತು ಆಧ್ಯಾತ್ಮಿಕ ಚಿಂತನೆ: ಮನೆ ಕಟ್ಟುವಾಗ ಚಾಣಕ್ಯ ನೀತಿ ಹೇಳುವ ಪ್ರಕಾರ ದಯೆ ಮತ್ತು ಧರ್ಮನಿಷ್ಠರು ವಾಸಿಸುವ ಸ್ಥಳವನ್ನು ಆರಿಸಿಕೊಳ್ಳಿ. ಅಂತಹ ಸ್ಥಳದಲ್ಲಿ ವಾಸಿಸುವುದರಲ್ಲಿ ನಿಮನ್ಮಲೂ ಅದೇ ಅನುಭೂತಿ/ ಭಾವನೆ ಮೂಡುತ್ತದೆ.

Also Read: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

Chanakya Niti – ಪ್ರಾಮಾಣಿಕತೆ ಮತ್ತು ನೈತಿಕತೆ: ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ… ಎಷ್ಟೇ ಪ್ರಯತ್ನಗಳಿದ್ದರೂ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ.. ಚಾಣಕ್ಯ ಅವುಗಳ ಮಹತ್ವವನ್ನು ಒತ್ತಿ ಹೇಳಿದ. ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಿ, ಪ್ರಾಮಾಣಿಕರಾಗಿರಿ. ಸಮಗ್ರತೆಯಿಂದ ವರ್ತಿಸಿ. ಆತ್ಮವಿಶ್ವಾಸ ಮತ್ತು ಒಳ್ಳೆಯ ಹೆಸರು ಯಶಸ್ವಿ ವೃತ್ತಿಜೀವನದಲ್ಲಿ ಅಮೂಲ್ಯ ಆಸ್ತಿಗಳಾಗಿವೆ ಎಂದು ಅವರು ಒತ್ತಿ ಹೇಳಿದ್ದಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ