AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು

ಬಾಗಲಕೋಟೆಯಲ್ಲಿ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ, ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ. ಈಗ ಮಳೆ ಸಮೃದ್ದವಾಗಿ ಸುರಿದಿದ್ದು, ಮುಂದೆ ತರಕಾರಿ ದರ ಕಡಿಮೆ ಆಗುವ ಸಾಧ್ಯತೆ ಇದೆ. ಯಾವ ಯಾವ ತರಕಾರಿಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿ.

ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು
ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jun 15, 2024 | 5:21 PM

Share

ಬಾಗಲಕೋಟೆ, ಜೂನ್​ 15: ಕಳೆದ ವರ್ಷದ ಬರ ಈಗಲೂ ಕಾಡುತ್ತಲೇ ಇದೆ. ಇದರಿಂದ ತರಕಾರಿ (Vegetable), ಸೊಪ್ಪು, ಹಣ್ಣುಹಂಪಲು ಬೆಲೆ (prices hike) ಗಗನಕ್ಕೆ ಏರಿದೆ. ತರಕಾರಿ ದರ ತೀರಾ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.  ನಗರದ ತರಕಾರಿ ವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಶುದ್ದ ಸಿಗುತ್ತದೆ ಎಂದು ಹೆಚ್ಚು ಗ್ರಾಹಕರು ಬರುತ್ತಾರೆ. ಪ್ರತಿ ಶನಿವಾರ ತರಕಾರಿ ಸಂತೆ ನಡೆಯುತ್ತದೆ. ಆದರೆ ಈಗ ತರಕಾರಿ ದರ ಕೇಳಿದರೆ ಇಷ್ಟಕ್ಕೆ ಅಷ್ಟೊಂದಾ ಎನ್ನುವಂತ್ತಾಗಿದೆ. ಕೆಂಪು‌ ಸುಂದರಿ ಟೊಮ್ಯಾಟೊ ಬೆಲೆ‌ ನೂರಕ್ಕೆ ಏರಿದೆ. ಕೇವಲ ಹತ್ತು ರೂಗೆ ಸಿಗುತ್ತಿದ್ದ ಕೋತಂಬರಿ ಸೊಪ್ಪು ಒಂದು ಕಟ್ ಈಗ 50 ರಿಂದ 60 ರೂ ಆಗಿದ್ದು ಅಚ್ಚರಿ ಮೂಡಿಸಿದೆ.

ಯಾವ ತರಕಾರಿಗೆ ಎಷ್ಟು ಬೆಲೆ?

ಇನ್ನು ಬದನೆಕಾಯಿ, ಚವಳಿಕಾಯಿ, ಸೌತೆಕಾಯಿ, ಹಸಿಮೆಣಸಿನಕಾಯಿ ಎಲ್ಲವೂ ಕೆಜಿಗೆ 80 ರಿಂದ 90 ರೂ ಗೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ವೈದ್ಯರು ಉತ್ತಮ ಆರೋಗ್ಯಕ್ಕೆ ತರಕಾರಿ ಹಣ್ಣು ತಿನ್ನಿ ಅಂತಾರೆ ಆದರೆ ಇಷ್ಟೊಂದು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡೋದು ಹೇಗೆ ಎಲ್ಲ ತುಟ್ಟಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಗನಕ್ಕೇರಿದ ದಿನಸಿ, ತರಕಾರಿ ಬೆಲೆ: ಟೊಮೆಟೋ ಬೆಲೆ 50 ರೂ.ಗೆ ಏರಿಕೆ, 200 ರ ಗಡಿದಾಟಿದ ತೊಗರಿ ಬೇಳೆ

ಬಹುತೇಕ ಎಲ್ಲ ತರಕಾರಿ 80 ರಿಂದ 90ರ ಗಡಿಯಲ್ಲಿವೆ. ಸೇಬು ಸೇರಿದಂತೆ ಇತರೆ ಹಣ್ಣುಗಳ ದರ ಕೂಡ ಕೆಜಿಗೆ 200 ರಿಂದ 300 ರೂ. ಆಗಿದೆ. ನಿತ್ಯ ಅಡುಗೆಗೆ ತರಕಾರಿ ಬೇಕೆ ಬೇಕು. ಆದರೆ ಖರೀದಿ ಮಾಡುವಾಗ ಬೆಲೆ ಕೇಳಿ ಬೆದರುವಂತಾಗಿದೆ. 500 ರಿಂದ 600 ರೂ. ಖರ್ಚಾದರೂ ಒಂದು ಕೈಚೀಲ ತುಂಬೋದಿಲ್ಲ. ಇದು ತರಕಾರಿ ಬೆಲೆ ಎಷ್ಟು ಏರಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಆದರೆ ನಿತ್ಯ ಅಡುಗೆ ಮಾಡಲೇಬೇಕು, ತರಕಾರಿ ಇಲ್ಲದೆ ಊಟ ಮಾಡೋದು ಕಷ್ಟಸಾಧ್ಯ. ಇದರಿಂದ ಎಷ್ಟೇ ಬೆಲೆ ಏರಿಕೆಯಾದರೂ ಖರೀದಿ ‌ಮಾಡುವುದು ಅನಿವಾರ್ಯವಾಗಿದೆ.

ಆದರೆ ಎರಡು ಮೂರು ಕೆಜಿ ಖರೀದಿ ಮಾಡಲು ಬಂದವರು ‌ಒಂದು ಕೆಜಿಗೆ ತೃಪ್ತಿ ಪಡಬೇಕಾಗಿದೆ. ಒಂದು ಕೆಜಿ ಖರೀದಿಗೆ ಬಂದವರು ಅರ್ಧ ಕೆಜಿ ಮಾತ್ರ ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಕಳೆದ ಬಾರಿಯ ಬರ ಹಾಗೂ ಹೊರಗಡೆಯಿಂದ ದಾಸ್ತಾನು ಬರದೆ ಇರೋದು ಪ್ರಮುಖ ಕಾರಣವಾಗಿದೆ. ತರಕಾರಿ ವ್ಯಾಪಾರಿಗಳಿಗೂ ಹೆಚ್ಚು ಲಾಭ ಸಿಗ್ತಿಲ್ಲ. ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರಿಂದ ವ್ಯಾಪಾರಿಗಳಿಗೂ ಲಾಭ ಇಲ್ಲದಂತಾಗಿದೆ.

ಇದನ್ನೂ ಓದಿ: ಈ ವಾರವೂ ತರಕಾರಿಗಳ‌ ಬೆಲೆ ಏರಿಕೆ: ಮೆಣಸಿನಕಾಯಿ, ಬೀನ್ಸ್​ ದರ ಗಗನಕ್ಕೆ!

ಒಟ್ಟಿನಲ್ಲಿ ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ. ಈಗ ಮಳೆ ಸಮೃದ್ದವಾಗಿ ಸುರಿದಿದ್ದು, ಮುಂದೆ ತರಕಾರಿ ದರ ಒಂದು ಹಂತಕ್ಕೆ ಬರುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ