ಬಳ್ಳಾರಿಯಲ್ಲಿ 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ಇಂಜಿನಿಯರ್

| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2024 | 6:59 PM

ಬಳ್ಳಾರಿ ನಗರದ ವಿಮ್ಸ್​ ಆಸ್ಪತ್ರೆಯ ಪಕ್ಕದಲ್ಲಿರುವ ಸಣ್ಣ ನೀರಾವರಿ ಕಚೇರಿಯಲ್ಲಿ ಎರಡು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಹಾಯಕ ಇಂಜಿನಿಯರ್​​ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ಎರಡು ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಸದ್ಯ ಭ್ರಷ್ಟ ಅಧಿಕಾರಿ AE ನಾಗರಜ ಮನೆಯನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. 

ಬಳ್ಳಾರಿಯಲ್ಲಿ 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ಇಂಜಿನಿಯರ್
ಅಧಿಕಾರಿ ಮನೆಯಲ್ಲಿ ಶೋಧ
Follow us on

ಬಳ್ಳಾರಿ, ಮಾರ್ಚ್​ 6: ಎರಡು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಹಾಯಕ ಇಂಜಿನಿಯರ್​​ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವಂತಹ ಘಟನೆ ನಗರದ ವಿಮ್ಸ್​ ಆಸ್ಪತ್ರೆಯ ಪಕ್ಕದಲ್ಲಿರುವ ಸಣ್ಣ ನೀರಾವರಿ ಕಚೇರಿಯಲ್ಲಿ ನಡೆದಿದೆ. ಕಾಮಗಾರಿ ಬಿಲ್ 30 ಲಕ್ಷ​ ರೂ. ಪಾವತಿಸಲು ಕಚೇರಿಯಲ್ಲಿ 2 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ನಾಗರಾಜ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದಾನೆ. ಗುತ್ತೆಗೆದಾರ ರಾಮಕೃಷ್ಣ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಬಳ್ಳಾರಿ ಲೋಕಾಯುಕ್ತ ಎಸ್​ಪಿ ಸಿದ್ದರಾಜ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.  30 ಲಕ್ಷ ರೂ. ಕಾಮಗಾರಿ ಬಾಕಿ ಬಿಲ್ ಪಾವತಿ ಮಾಡಲು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ಮೂರು ತಿಂಗಳಿನಿಂದ ಬಿಲ್ ಪಾವತಿ ಮಾಡಲು ಸಾತಾಯಿಸುತ್ತಿದ್ದ. ಪ್ರಾರಂಭದಲ್ಲಿ ರೂ. 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಎರಡು ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಸದ್ಯ ಭ್ರಷ್ಟ ಅಧಿಕಾರಿ AE ನಾಗರಜ ಮನೆಯನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

40 ಸಾವಿರ ರೂ. ಲಂಚ ಸ್ವೀಕರಿಸುವಾಗ ಕಂದಾಯ ನಿರೀಕ್ಷಕ ಲೋಕಾ ಬಲೆಗೆ

ಶಿವಮೊಗ್ಗ ಜಿಲ್ಲೆಯ ಸೊರಬ ಪುರಸಭೆ ಕಂದಾಯ ನಿರೀಕ್ಷಕ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದಿದ್ದಾರೆ. ಪುರಸಭೆ ಕಂದಾಯ ನಿರೀಕ್ಷಕ ವಿನಾಯಕ ಗುರುವಯ್ಯ ಲೋಕಾ ಬಲೆ ಬಿದ್ದ ಅಧಿಕಾರಿ. ಲೋಕಾಯುಕ್ತ ಡಿವೈಎಸ್​​ಪಿ ಪಿ.ಉಮೇಶ್​​ ಈಶ್ವರ ನಾಯ್ಕ್​​ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಭಿಕ್ಷಾಟನೆ ಜಾಗಕ್ಕೆ ಇಬ್ಬರು ಮಹಿಳೆಯರ ಕಿತ್ತಾಟ: 112ಗೆ ಕರೆ, ಮುಂದೇನಾಯ್ತು?

ಖಾಲಿ ನಿವೇಶನಕ್ಕೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಪ್ರತಿಭಾ ಎಂ.ನಾಯ್ಕ ಎಂಬುವರ ಬಳಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 40 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ KSRTC ಸಿಬ್ಬಂದಿಗಳು

ಬೀದರ್​​: ಕೆಎಸ್​ಆರ್​ಟಿಸಿ ಸಿಬ್ಬಂದಿಗಳಿಬ್ಬರು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಬೀದರ್​ನ ವಿಭಾಗೀಯ ನಿಯಂತ್ರಾಣಾಧಿಕಾರಿ ಕಚೇರಿ ಮೇಲೆ ಲೋಕಾ ದಾಳಿ ಮಾಡಿದ್ದು ಡಾಟಾ ಆಪರೇಟರ್ ಮಂಜುನಾಥ್ ಬಸವಕಲ್ಯಾಣ ಡಿಪೋದ ಕಂಡಕ್ಟರ್ ರವಿ ಲೋಕಾ ಬಲೆಗೆ‌ ಬಿದ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮರಕ್ಕೆ ಆ್ಯಸಿಡ್​ ಸುರಿದ ಅಂಗಡಿಯವ, 2024ರಲ್ಲಿ ಇದು ಮೂರನೇ ಘಟನೆ

ಕಂಡಕ್ಟರ್ ವಿದ್ಯಾಧರ್​​ ಅವರು ಟಿಕೇಟ್ ಕೊಡದೆ ಟಿಕೇಟ್ ಚೆಂಕಿಂಗ್ ವೇಳೆ ಸಿಕ್ಕಿಬಿದ್ದಿದ್ದರು. ಆ ಕೇಸ್ ಕ್ಲೋಸ್ ಮಾಡಲು ಹಣಕ್ಕೆ ಬೇಡಿಕೆಯಿಟ್ಟು 35 ಸಾವಿರ ರೂಪಾಯಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲಿಸರಿಗೆ ವಿಭಾಗೀಯ ಕಚೇರಿಯಲ್ಲಿನ ಡಾಟಾ ಆಪರೇಟರ್ ಮಂಜುನಾಥ್ ಹಾಗೂ ಡಾಡಾ ಅಪರೇಟರ್ ರವಿ ಬಲೆಗೆ ಬಿದ್ದಿದ್ದಾರೆ. ಬಸವಕಲ್ಯಾಣದಿಂದ ಕಂಡೆಕ್ಟರ್ ರವಿಯನ್ನು ಬೀದರ್‌ ಕೇಂದ್ರ ಕಚೇರಿಗೆ ಕರೆತಂದು ವಿಚಾರಣೆ ಮಾಡಲಾಗಿದೆ. ಜೊತೆಗೆ ದಾಖಲೆ ಪರಿಶೀಲನೆ ಮಾಡಿದ ಲೋಕಾ ಅಧಿಕಾರಿಗಳು ಡಿವೈಎಸ್‌ಪಿ ಎನ್‌ಎಮ್. ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.