ಭಿಕ್ಷಾಟನೆ ಜಾಗಕ್ಕೆ ಇಬ್ಬರು ಮಹಿಳೆಯರ ಕಿತ್ತಾಟ: 112ಗೆ ಕರೆ, ಮುಂದೇನಾಯ್ತು?

ಬೆಂಗಳೂರು ನಗರದಲ್ಲಿ ಭಿಕ್ಷಾಟನೆ ಜಾಗಕ್ಕೆ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಗಲಾಟೆ ಆಗಿದ್ದು, ದೂರು ನೀಡಲು ಹೊಯ್ಸಳ ವಾಹನ ಸಿಬ್ಬಂದಿ ಜೊತೆಗೆ ಮಾತನಾಡಿರುವ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ ಶಾಪಿಂಗ್ ಮಾಲ್​​ ಬಳಿ ಭಿಕ್ಷೆ ಬೇಡುವ ಪರ್ವಿನ್ ಎಂಬ ಮಹಿಳೆಯಿಂದ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕಾಲ್​ ಮಾಡಿದ್ದಾರೆ.

ಭಿಕ್ಷಾಟನೆ ಜಾಗಕ್ಕೆ ಇಬ್ಬರು ಮಹಿಳೆಯರ ಕಿತ್ತಾಟ: 112ಗೆ ಕರೆ, ಮುಂದೇನಾಯ್ತು?
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Mar 06, 2024 | 6:31 PM

ಬೆಂಗಳೂರು, ಮಾರ್ಚ್​ 6: ನಗರದಲ್ಲಿ ಭಿಕ್ಷಾಟನೆ (begging) ಜಾಗಕ್ಕೆ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಗಲಾಟೆ ಆಗಿದ್ದು, ದೂರು ನೀಡಲು ಹೊಯ್ಸಳ ವಾಹನ ಸಿಬ್ಬಂದಿ ಜೊತೆಗೆ ಮಾತನಾಡಿರುವ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ ಶಾಪಿಂಗ್ ಮಾಲ್​​ ಬಳಿ ಭಿಕ್ಷೆ ಬೇಡುವ ಪರ್ವಿನ್ ಎಂಬ ಮಹಿಳೆಯಿಂದ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕಾಲ್​ ಮಾಡಿದ್ದಾರೆ. ನಾನು ಕುಳಿತುಕೊಂಡು ಭಿಕ್ಷೆ ಬೇಡಬೇಕು. ಅವಳು ಕೂರುವ ಜಾಗದಲ್ಲಿ ನಾನು ಕುಳಿತರೇ ಅವರ ಕಡೆಯವರನ್ನು ಕರೆಸಿ ಹೊಡೆಸುತ್ತಾಳೆ. ದಯವಿಟ್ಟು ಸ್ಥಳಕ್ಕೆ ಬಂದು ಭಿಕ್ಷೆ ಬೇಡವ ಮಹಿಳೆಗೆ ಸ್ವಲ್ಪ ಹೆದರಿಸಿ ಸರ್​ ಎಂದು ಭಿಕ್ಷೆ ಬೇಡುವ ಮಹಿಳೆ ಪರ್ವಿನ್ ಹೇಳಿದ್ದಾರೆ.

ನಾನು ಆ ಜಾಗದಲ್ಲಿ ಕುಳಿತು ಭಿಕ್ಷೆ ಬೇಡಬೇಕು ಎಂದ ಪರ್ವಿನ್​ಗೆ ಉತ್ತರಿಸಿದ ಪೊಲೀಸ್ ಸಿಬ್ಬಂದಿ ನಿಮಗೆ ಒಂದು ವಾರ ಅವರಿಗೆ ಒಂದು ವಾರ ಭಿಕ್ಷೆ ಬೇಡಲು ಅವಕಾಶ ಮಾಡಿಕೊಡುವುದಾಗಿ ಸಮಾಧಾನ ಪಡಿಸಿದ್ದಾರೆ. ಸದ್ಯ ಹೊಯ್ಸಳ ವಾಹನ ಸಿಬ್ಬಂದಿಯೊಂದಿಗೆ ಭಿಕ್ಷೆ ಬೇಡುವ ಮಹಿಳೆ ಪರ್ವಿನ್ ಮಾತನಾಡಿರುವ ಆಡಿಯೋ ವೈರಲ್​ ಆಗಿದೆ.

ನಗರದಲ್ಲಿ ಭಿಕ್ಷುಕರ ಹಾವಳಿ: ಸಾರ್ವಜನಿಕರಿಂದ ದೂರು

ದಾವಣಗೆರೆ: ನಗರದಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ 21 ಮಂದಿ ಭೀಕ್ಷುಕರನ್ನು ವಶಕ್ಕೆ ಪಡೆಯಲಾಗಿತ್ತು. ಜಯದೇವ ಸರ್ಕಲ್ನಲ್ಲಿ ಭಿಕ್ಕೆ ಬೇಡುತ್ತಿದ್ದ 6 ಮಹಿಳೆಯರು, ದುರ್ಗಾಂಬಿಕಾ ದೇಗುಲದ ಬಳಿ ಭಿಕ್ಷಾಟನೆ ಮಾಡುತ್ತಿದ್ದ 6 ವೃದ್ಧೆಯರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಹೈಸ್ಕೂಲ್ ಮೈದಾನ ಬಳಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಹಳೆ ಬಸ್ ಸ್ಟ್ಯಾಂಡ್ ಹೊಸ ಬಸ್ ಸ್ಯ್ಟಾಂಡ್ ಬಳಿ ಕಾರ್ಯಾಚರಣೆ ನಡೆಸಿ ಹಲವು ಭಿಕ್ಷುಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ:  ಶೀಘ್ರವೇ ಬೆಂಗಳೂರಿನಲ್ಲಿ ಹಳಿಗಿಳಿಯಲಿದೆ ಮೊದಲ ಚಾಲಕ ರಹಿತ ಮೆಟ್ರೋ: ನಾಳೆ ಟೆಸ್ಟಿಂಗ್

ನಗರದಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಎನ್​ಜಿಒಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯಿತು. ಜಯದೇವ ವೃತ್ತದ ಸಿಗ್ನಲ್ನಲ್ಲಿ ವಾಹನ ಚಾಲಕರಿಗೆ ಭಿಕ್ಷೆ ನೀಡುವಂತೆ ಕಿರಿಕಿರಿ ಮಾಡುತ್ತಿದ್ದ 6 ಮಹಿಳೆಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ನಂ.1 ಸ್ಥಾನ, ದೇಶಕ್ಕೆ 4ನೆಯ ಸ್ಥಾನ ಪಡೆದಿರುವ ಮೈಸೂರಿನ ಪೊಲೀಸ್ ಶ್ವಾನ ಅರ್ಜುನನ ಸಾಧನೆ ನೋಡುವ ಬನ್ನೀ

ವಶಕ್ಕೆ ಪಡೆದ ಭಿಕ್ಷುಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ತುರ್ಚಘಟ್ಟ ಬಳಿ ಇರುವ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಕ್ಕಳ ರಕ್ಷಣಾ ಇಲಾಖೆಯಿಂದ ಪ್ರತಿವಾರ ಭಿಕ್ಷುಕರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧೀಕ್ಷಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಎನ್​​ಜಿಒ ಸದಸ್ಯರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:55 pm, Wed, 6 March 24