ಮಲಿನವಾಗ್ತಿದೆ ಜೀವನದಿ ಕಾವೇರಿ; ನದಿ ಸೇರ್ತಿದೆ ಕೊಳಚೆ ನೀರು

ದೇಶದ ಪವಿತ್ರ ಸಪ್ತ ನದಿಗಳಲ್ಲಿ ಜೀವನದಿ ಕಾವೇರಿಯೂ ಒಂದು. ಆದ್ರೆ ಜೀವನದಿ ಕಾವೇರಿ ತನ್ನ ಮೂಲದಲ್ಲೇ ಮಲಿನವಾಗುತ್ತಿದೆ. ಮಡಿಕೇರಿ ನಗರದ 30 ಸಾವಿರ ಜನರು ಬಳಸುವ ಶೌಚಾಲಯಗಳ ಕೊಳಚೆ ನೀರು ಉಪ ನದಿಯ ಮೂಲಕ ನೇರವಾಗಿ ಕಾವೇರಿ ಒಡಲು ಸೇರುತ್ತಿದೆ. ಕುರಿತು ನಗರಸಭೆ ವಿರುದ್ಧ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ಹಾಕಿದೆ. ಆದರೂ ಕೂಡ ನಗರಸಭೆಗೆ ಬುದ್ಧಿ ಬಂದಂತಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.

ಮಲಿನವಾಗ್ತಿದೆ ಜೀವನದಿ ಕಾವೇರಿ; ನದಿ ಸೇರ್ತಿದೆ ಕೊಳಚೆ ನೀರು
ಮಲಿನವಾಗುತ್ತಿದೆ ಕಾವೇರಿ ನದಿಯ ಒಡಲು
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 8:03 PM

ಕೊಡಗು, ಮಾ.06: ದೇಶದ ಪವಿತ್ರ ಸಪ್ತ ನದಿಗಳಲ್ಲಿ ಜೀವನದಿ ಕಾವೇರಿಯೂ ಒಂದು. ಆದ್ರೆ, ಜೀವನದಿ ಕಾವೇರಿ(Kaveri)ತನ್ನ ಮೂಲದಲ್ಲೇ ಮಲಿನವಾಗುತ್ತಿದೆ. ಮಡಿಕೇರಿ(Madikeri) ನಗರದ 30 ಸಾವಿರ ಜನರು ಬಳಸುವ ಶೌಚಾಲಯಗಳ ಕೊಳಚೆ ನೀರು ಉಪ ನದಿಯ ಮೂಲಕ ನೇರವಾಗಿ ಕಾವೇರಿ ಒಡಲು ಸೇರುತ್ತಿದೆ. ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಕಾನೂನು ಪ್ರಕಾರ ಯಾವುದೇ ನಗರದ ಕೊಳಚೆ ನೀರನ್ನ ಶುದ್ಧೀಕರಿಸದೆ ನೇರವಾಗಿ ನದಿಗೆ ಹರಿಸುವಂತಿಲ್ಲ. ಆದ್ರೆ, ಮಡಿಕೇರಿ ನಗರಸಭೆ ಮಾತ್ರ ಕಾನೂನು ಉಲ್ಲಂಘಿಸಿ ಕೊಳಚೆ ನೀರನ್ನ ನದಿಗೆ ಹರಿಸುತ್ತಿದೆ. ಹಾಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ವರ್ಷದ ಹಿಂದೆಯೇ ನ್ಯಾಯಾಲಯದ ಮೂಲಕ ನಗರಸಭೆ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದೆ.

ಒಂದು ಕಾಲದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ನೈಸರ್ಗಿಕ ನದಿ. ಆದ್ರೆ, ಬೆಳೆಯುತ್ತಿರುವ ನಗರೀಕರಣ, ಇದರಿಂದ ಹೆಚ್ಚಾದ ಮಾಲಿನ್ಯ ಹಾಗೂ ಸ್ಥಳೀಯ ಆಡಳಿತಗಳ ಬೇಜವಾಬ್ದಾರಿಯಿಂದಾಗಿ ಇಂದು ನದಿಯೊಂದು ಅಕ್ಷರಶಃ ಚರಂಡಿಯಾಗಿ ಬದಲಾಗಿದೆ. ಹೌದು, ಇದು ಮಡಿಕೇರಿ ನಗರದಿಂದ ಕೇವಲ ಮೂರು ಕಿಲೋ ಮೀಟರ್ ದೂರದಲ್ಲಿರುವ ಕೂಟುಪೊಳೆ ಎಂಬ ಕಾವೇರಿ ನದಿಗೆ ಮಡಿಕೇರಿ ನಗರದ ಕೊಳಚೆ ನೀರನ್ನ ಶುದ್ಧೀಕರಿಸದೇ ನೇರವಾಗಿ ಹರಿಸಲಾಗುತ್ತಿದೆ.

ಇದನ್ನೂ ಓದಿ:ಬೆಂಗಳೂರು: ಕೊಳಚೆ ನೀರು ತುಂಬಿ ಪಾಚಿಗಟ್ಟಿದ ಕೈಕೊಂಡರಹಳ್ಳಿ ಕೆರೆಗೆ ಬೇಕಿದೆ ಕಾಯಕಲ್ಪ

ಕೂಟುಪೊಳೆ ಹರಿಯುವ ತಂತಿಪಾಲ, ಹೆಮ್ಮತ್ತಾಳು, ಮುಕ್ಕೋಡ್ಲು, ಅಟ್ಟಿಹೊಳೆಯ ಗ್ರಾಮಸ್ಥರು ಇದೀಗ ನದಿ ನೀರನ್ನ ಬಳಕೆ ಮಾಡುವುದನ್ನೇ ಬಿಟ್ಟಿದ್ದಾರೆ. ಹಿಂದಿನ ಕಾಲದಲ್ಲಿ ಈ ಗ್ರಾಮಗಳ ಜನರ ಕುಡಿಯುವ ನೀರಿನ ಮೂಲವಾಗಿತ್ತು. ಅಲ್ಲದೆ, ವಿಶ್ವ ಪ್ರಸಿದ್ಧ ಅಬ್ಬಿಜಲಪಾತದಲ್ಲೂ ಧುಮ್ಮಿಕ್ಕುವುದು ಇದೇ ಕೊಳಚೆ ನೀರಾಗಿದೆ. ಇದೇ ಕೊಳಚೆ ನೀರಲ್ಲಿ ಪ್ರವಾಸಿಗರು ಸ್ನಾನ ಕೂಡ ಮಾಡುತ್ತಾರೆ. ಕೂಟುಪೊಳೆಯ ಮಲಿನ ನೀರನ್ನ ಮುಟ್ಟಿದ್ರೆ ಮೈಯೆಲ್ಲಾ ಅಲರ್ಜಿಯಾಗಿ ತುರಿಕೆ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮಡಿಕೇರಿ ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಸರಾಸರಿ ದಿನಕ್ಕೆ 200 ಲೀಟರ್ ನೀರು ಬೇಕು. ಅದರ ಪ್ರಕಾರ 30 ಸಾವಿರ ಸ್ಥಳೀಯ ಜನರು ಸೇರಿ ಪ್ರವಾಸಿಗರ ಪ್ರಮಾಣ ಸೇರಿದ್ರೆ ಅಂದಾಜು ಪ್ರತನಿತ್ಯ 8 ಲಕ್ಷ ಲೀಟರ್​ ನೀರು ಬೇಕು. ಅಷ್ಟೂ ನೀರು ಕೊಳಚೆಯಾಗಿಯೇ ನದಿ ಸೇರುತ್ತದೆ. ಇದು ಹಾರಂಗಿ ಜಲಾಶಯ ಸೇರಿ ಅಲ್ಲಿಂದ ಕಾವೇರಿ ಒಡಲನ್ನು ಸೇರುತ್ತದೆ. ನದಿ ನೀರನ್ನ ಶುದ್ಧೀಕರಿಸದೆ ಕಾವೇರಿ ಒಡಲಿಗೆ ಹರಿಸುವಂತಿಲ್ಲ ಎಂಬ ಕಾನೂನು ಇದ್ದರೂ ಸ್ಥಳೀಯ ನಗರಸಭೆ ಮಾತ್ರ ತಲೆಕಡಿಸಿಕೊಳ್ಳುತ್ತಿಲ್ಲ. ಇನ್ನು ಒಳ ಚರಂಡಿ ಕಾಮಗಾರಿ ನಡೆದಿಲ್ಲ ಎಂದು ಸಬೂಬು ಹೇಳುತ್ತಿದೆ. ಈ ಕುರಿತು ನಗರಸಭೆ ವಿರುದ್ಧ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ಹಾಕಿದೆ. ಆದರೂ ಕೂಡ ನಗರಸಭೆಗೆ ಬುದ್ಧಿ ಬಂದಂತಿಲ್ಲ. ನಗರಸಭೆ ಬೇಜವಾಬ್ದಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ