AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haralur Lake: ಬೆಂಗಳೂರಿನ ಹರಳೂರು ಕೆರೆಗೆ ಹರಿಯುತ್ತಿದೆ ಕೊಳಚೆ ನೀರು, ಮೀನುಗಳ ಮಾರಣಹೋಮ

ಮಳೆನೀರನ್ನು ಕೆರೆಗೆ ಸಾಗಿಸಬೇಕಾಗಿರುವ ಕಾಲುವೆಗೆ ಚರಂಡಿ ನೀರು ಬೆರೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Haralur Lake: ಬೆಂಗಳೂರಿನ ಹರಳೂರು ಕೆರೆಗೆ ಹರಿಯುತ್ತಿದೆ ಕೊಳಚೆ ನೀರು, ಮೀನುಗಳ ಮಾರಣಹೋಮ
ಬೆಂಗಳೂರಿನ ಹರಳೂರು ಕೆರೆಯಲ್ಲಿ ಸತ್ತಿರುವ ಮೀನುಗಳು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 15, 2022 | 10:32 AM

Share

ಬೆಂಗಳೂರು: ನಗರದ ಬೆಳ್ಳಂದೂರು ಪ್ರದೇಶದ ಹರಳೂರು ಕೆರೆಯಲ್ಲಿ (Haralur lake) ಮತ್ತೊಮ್ಮೆ ಮೀನುಗಳು ಸತ್ತು (Fish Kill) ತೇಲುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೂರರಿಂದ ನಾಲ್ಕು ಟನ್​ಗಳಷ್ಟು ಮೀನುಗಳು ಸತ್ತಿವೆ ಎಂದು ಎಎನ್​ಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ವಿಷಕಾರಿ ಕೊಳಚೆ ನೀರು ಕೆರೆಗೆ ಹರಿಯುತ್ತಿರುವುದೇ ಮೀನುಗಳ ಸಾವಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಮಳೆನೀರನ್ನು ಕೆರೆಗೆ ಸಾಗಿಸಬೇಕಾಗಿರುವ ಕಾಲುವೆಗೆ ಚರಂಡಿ ನೀರು ಬೆರೆಯುತ್ತಿದೆ ಎಂದು ಸ್ಥಳೀಯರಾದ ಅಮರದೀಪ್ ಅಡಿಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ವಿಷಕಾರಿ ಚರಂಡಿ ನೀರನ್ನು ಕೆರೆಗೆ ಹರಿಸಬಾರದು ಎನ್ನುವ ಕಾರಣಕ್ಕೆ ನಿರ್ಮಿಸಿರುವ ಬ್ಯಾರಿಕೇಡ್​ಗಳು ಸ್ವಲ್ಪ ಸಮಯದವರೆಗೆ ಮಾತ್ರ ಕೊಳಕು ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದರೆ ಕೆಲವೇ ಹೊತ್ತಿನಲ್ಲಿ ಅದು ಉಕ್ಕಿ ಹರಿಯುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಕೊಳಕು ನೀರನ್ನು ಕೆರೆಗೆ ಸೇರದಂತೆ ತಡೆಯಬೇಕಾದ ಬ್ಯಾರಿಕೇಡ್ ವೈಫಲ್ಯದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸುಮಾರು 4 ಟನ್ ಮೀನುಗಳು ಸಾವನ್ನಪ್ಪಿವೆ. ‘ಮಳೆನೀರನ್ನು ಕೆರೆಗೆ ಹರಿಸುವ ಕಾಲುವೆ ಜಾಲಕ್ಕೆ ಒಂದು ಕಡೆ ಕೊಳಚೆ ನೀರನ್ನು ಬೆರೆಯುತ್ತಿದೆ. ಅದೇ ನೀರು ಕೆರೆಗೂ ಬರುತ್ತಿದೆ. ಹೀಗಾಗಿಯೇ ಆಗಾಗ ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ ಮೀನುಗಳು ಸಾಯುವುದು ಸಾಮಾನ್ಯ ಸಂಗತಿಯಾಗಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

7 ತಿಂಗಳಲ್ಲಿ 8 ಬಾರಿ ಮೀನುಗಳ ಸಾವು

ಬೆಂಗಳೂರು ಆ್ಯಕ್ಷನ್ ಏಡ್ ಸಂಸ್ಥೆಯು ಪ್ರಕಟಿಸಿರುವ ‘ಫಿಶ್​ಕಿಲ್ ಇನ್ ಲೇಕ್ಸ್ ಆಫ್ ಬೆಂಗಳೂರು 2017-2022’ (Fishkill in Lakes of Bengaluru) ವರದಿಯ ಪ್ರಕಾರ 2022ರ ಜನವರಿಯಿಂದ ಜುಲೈ ಅವಧಿಯಲ್ಲಿ ಬೆಂಗಳೂರಿನ ಕೆರೆಗಳಲ್ಲಿ ಒಟ್ಟು ಎಂಟು ಬಾರಿ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. ಕಳೆದ ಐದು ವರ್ಷಗಳ ವಾರ್ಷಿಕ ಸರಾಸರಿಯ ಪ್ರಮಾಣವನ್ನೂ ಇದು ಮೀರಿದೆ. 2017 ಮತ್ತು 2018ರಲ್ಲಿ ಆರು ಬಾರಿ ಇಂಥ ಘಟನೆಗಳು ನಡೆದಿದ್ದವು. 2019 ಮತ್ತು 2021ರಲ್ಲಿ ಲಾಕ್​ಡೌನ್ ಕಾರಣದಿಂದ ಮೀನುಗಳ ಸಾವಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರಲಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದೇಶದಲ್ಲಿ ಕೊಳಕು ನೀರು ಕೆರೆಗಳನ್ನು ಸೇರುವ ಪ್ರಕರಣಗಳು ಹಲವು ಬಾರಿ ವರದಿಯಾಗಿವೆ. ಆದರೂ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!