ಬಳ್ಳಾರಿ, ಮಾರ್ಚ್ 27: ನೀತಿ ಸಂಹಿತೆ ಹಾಗೂ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ಬ್ಯುಸಿ ಹಿನ್ನೆಲೆ ನಾಳೆ ನಿಗದಿಯಾಗಿದ್ದ ಬಳ್ಳಾರಿ ಮೇಯರ್ ಚುನಾವಣೆ (Bellary Municipal Corporation) ಯನ್ನು ಮುಂದೂಡಿ ಕಲಬುರಗಿ ಪ್ರಾದೇಶಿಕ ಆಯುಕ್ತ ಆದೇಶ ಹೊರಡಿಸಲಾಗಿದೆ. ಲೋಕಸಭಾ ಚುನಾವಣೆಯ ಬಳಿಕ ನಡೆಸುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಲಿ ಮೇಯರ್ ಶ್ವೇತಾ ಅವಧಿ ಅಂತ್ಯ ಹಿನ್ನೆಲೆ ಚುನಾವಣೆ ನಿಗದಿ ಆಗಿತ್ತು. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ.
ನಾಳೆ ನಡೆಯಬೇಕಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಪಾಲಿಕೆಯ ಗದ್ದುಗೆ ಏರಲು ಆಕಾಂಕ್ಷಿಗಳು ಬರಪೂರ ಉಡುಗೊರೆಗಳನ್ನು ಹಂಚಿದ್ದರು. ಮುಲ್ಲಂಗಿ ನಂದೀಶ್, ಗಾದೆಪ್ಪ, ಪೇರಂ ವಿವೇಕ್ ಮತ್ತು ಪಕ್ಷೇತರ ಸದಸ್ಯ ಪ್ರಭಂಜನ್, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಕಾಂಕ್ಷಿಗಳಾಗಿದ್ದಾರೆ. ಮೂವರು ಪಾಲೆಕೆ ಸದಸ್ಯರ ಮನೆ – ಮನೆಗೆ ಹೋಗಿ ಊಡುಗೊರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫೈನಲ್, ಅಧಿಕೃತ ಘೋಷಣೆಯೊಂದೆ ಬಾಕಿ
ಮುಲ್ಲಂಗಿ ನಂದೀಶ್ ಪಾಲಿಕೆ ಸದಸ್ಯರಿಗೆ ಬೆಳ್ಳಿ ತಟ್ಟೆ ಮತ್ತು ಕಾಂಗ್ರೆಸ್ ಚಿಹ್ನೆ ಇರುವ ಬಂಗಾರದ ಚಿಕ್ಕ ಆಭರಣವನ್ನು ಉಡುಗೊರೆಯಾಗಿ ನೀಡಿದ್ದರು. ಪಕ್ಷೇತರ ಸದಸ್ಯ ಪ್ರಭಂಜನ್ ರೇಷ್ಮೆ ಪಂಚೆ, ಸೀರೆ ಮತ್ತು ಇನ್ನಿಬ್ಬರುಡ್ರೈಪ್ರೂಟ್ಸ್ ಬಾಕ್ಸ್ ನೀಡಿ ಸನ್ಮಾನ ಮಾಡಿದ್ದಾರೆ.
ಇದನ್ನೂ ಓದಿ: ಬರ್ತಡೇ ದಿನವೇ ಮಾಜಿ ಮೇಯರ್ ಮಗನ ಅಟ್ಟಹಾಸ, ತಲ್ವಾರ ಝಳಪಿಸಿ ಹುಂಬತನ, ಯುವಕ ಬೆಂಗಳೂರಿನಲ್ಲಿ ಸಾವು
ಒಟ್ಟು 39 ಸದ್ಯರ ಪೈಕಿ 21 ಕಾಂಗ್ರೆಸ್, 5 ಪಕ್ಷೇತರರು ಮತ್ತು 13 ಬಿಜೆಪಿ ಸದಸ್ಯರಿದ್ದಾರೆ. ಕೆಲವು ಸದಸ್ಯರು ಬಳ್ಳಾರಿ ಶಾಸಕ ಭರತ್ ರೆಡ್ಡಿ ಬೆಂಬಲಿಗರಾಗಿದ್ದರೇ, ಕೆಲವರು ಸಚಿವ ನಾಗೇಂದ್ರ ಬೆಂಬಲಿಗರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.